kannada news
ಜೂನ್ 3ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಸಂಚಾರ
ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವಿನ ರೈಲು ಹಳಿ ವಿದ್ಯುದೀಕರಣ ಪೂರ್ಣಗೊಂಡಿದ್ದು, ಜೂನ್ ಮೂರರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶೇ.99ರಷ್ಟು ವಿದ್ಯುದೀಕರಣ ಪೂರ್ಣಗೊಂಡಿದ್ದು, ಶೇ.1 ರಷ್ಟು ಬಾಕಿ ಇದೆ. ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯದ ವರೆಗೆ 55 ಕಿ.ಮೀ ವಿದ್ಯುದೀಕರಣ
ಇರಾನ್‌ನ ರಾಡಾರ್, ಡ್ರೋನ್ ಕೇಂದ್ರಗಳ ಮೇಲೆ ಅಮೆರಿಕ ದಾಳಿ
ಅಮೆರಿಕ ಇರಾನ್‌ನ ಗೊರುಕ್ ಮತ್ತು ಕ್ವೆಶ್ಮ್ ದ್ವೀಪಗಳಲ್ಲಿರುವ ರಾಡಾರ್ ಮತ್ತು ಡ್ರೋನ್ ನಿಯಂತ್ರಣ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಎಂಕ್ಯೂ-1 ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿತ್ತು. ಇದಕ್ಕೆ ಪ್ರತಿಯಾಗಿ ಈ
ಕಡಿಮೆ ದರದಲ್ಲಿ ಹೊಸ ಆಭರಣ ಆಮಿಷ: ಮಹಿಳೆಯರಿಂದ ಎಂಟು ಕೋಟಿ ರೂ.ಗಳ ಚಿನ್ನ ಪಡೆದು ಪರಾರಿ
ಕಡಿಮೆ ದರದಲ್ಲಿ ಮತ್ತು ಕಡಿಮೆ ತೂಕದಲ್ಲಿ ಹೊಸ ಆಭರಣ ಮಾಡಿಕೊಡುವುದಾಗಿ ನಂಬಿಸಿ ರಾಮದೇವ್ ಜ್ಯುವೆಲರ್ಸ್ ಮಾಲೀಕ ಬುಂಡಾರಾಮ್ ನೂರಾರು ಮಹಿಳೆಯರಿಂದ ಎಂಟು ಕೋಟಿ ರೂ. ಮೌಲ್ಯದ ಚಿನ್ನಾಭರಣ ಪಡೆದುಕೊಂಡು ವಂಚಿಸಿ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದ
ಆರ್‌ಸಿಬಿ ಗೆಲುವಿಗೆ ನಿಯೋಜಿತ ಸಿಎಂ, ಹಂಗಾಮಿ ಸಿಎಂ ಸೇರಿದಂತೆ ಗಣ್ಯರಿಂದ ಅಭಿನಂದನೆ
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಗೆಲುವು ರಾಜ್ಯದಾದ್ಯಂತ ಹಬ್ಬದ ವಾತಾವರಣ ನಿರ್ಮಿಸಿದೆ. ಜಯ ಗಳಿಸುತ್ತಿದ್ದಂತೆ ಟ್ವೀಟ್ ಮಾಡಿದ ಆರ್‌ಸಿಬಿ ತಂಡ, “ಇದು
ಸುಗಂಧರಾಜ ಹೂವಿನ ಹಾರ ಹಾಕಬೇಡಿ ಅಂದಿದ್ದೇಕೆ ಡಿಕೆ ಶಿವಕುಮಾರ್
ನನಗೆ ಸುಗಂಧರಾಜ ಹೂವಿನ ಅಲರ್ಜಿ ಇರುವುದರಿಂದ ನನ್ನ ಭೇಟಿ ವೇಳೆ ಆ ಹೂವಿನ ಹಾರ ನಿಷೇಧಿಸಲಾಗಿದೆ. ಯಾರೂ ಸುಗಂಧರಾಜ ಹೂವಿನ ಹಾರ ತರಬಾರದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಕುಮಾರಕೃಪ ಅತಿಥಿಗೃಹದ ಬಳಿ ಶಿವಕುಮಾರ್
ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಟಿಇಟಿ ಪಾಸಾಗಲು ಗಡುವು
ದೇಶದ ಎಲ್ಲ ಪ್ರಾಥಮಿಕ ಶಾಲೆ ಶಿಕ್ಷಕರು ೨೦೨೮ ಆಗಸ್ಟ್೩೧ ರೊಳಗೆ ಟಿಇಟಿ ಪರೀಕ್ಷೆ ಪಾಸು ಮಾಡಿರಲೇಬೇಕು. ಇಲ್ಲದಿದ್ದಲ್ಲಿ ಅವರು ಕಡ್ಡಾಯ ನಿವೃತ್ತಿ ಪಡೆಯಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಖಡಕ್ ಆದೇಶ ಹೊರಡಿಸಿದೆ. ಈ ಆದೇಶ ೧.೨೦ ಲಕ್ಷ ಶಿಕ್ಷಕರಿಗೆ ರಾಜ್ಯದಲ್ಲಿ ಅನ್ವಯವಾಗುತ್ತದೆ.
ವೈದ್ಯ ದಂಪತಿ ಮನೆಯಲ್ಲಿ ಚಿನ್ನ, ಹಣ ಕಳವು: ಕೇರ್‌ಟೇಕರ್ ಸೇರಿ ಇಬ್ಬರ ಬಂಧನ
ಬೆಳಗಾವಿ ನಗರದ ವೈದ್ಯ ದಂಪತಿಯ ಮನೆಯಿಂದ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರ್ ಟೇಕರ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಸತೀಶ್ ಕಾಂಬ್ಳೆ ಮತ್ತು ಬಾಬಾಸಾಬ್ ಈರಪ್ಪ ಕಟಗೇರಿ ಬಂಧಿತ ಆರೋಪಿಗಳು. ಪೊಲೀಸರು
ಚಡಚಣದಲ್ಲಿ ಗುಂಡಿಕ್ಕಿ ಆರು ಮಂದಿಯ ಹತ್ಯೆ ಪ್ರಕರಣದ 11 ಆರೋಪಿಗಳು ಸೆರೆ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದ ಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ ನಡೆದ ಆರು ಮಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹನ್ನೊಂದು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಉತ್ತರ ವಲಯದ ಐಜಿಪಿ ಸಂದೀಪ್‌ಪಾಟಿಲ್ ಈ ವಿಷಯ
ದೇಶದ ಹಲವೆಡೆ ದಾಳಿ ಸಂಚು: ಒಂಬತ್ತು ಉಗ್ರರ ಬಂಧನ
ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಆಧರಿಸಿ ದೆಹಲಿ ಪೊಲೀಸ್ ವಿಶೇಷ ಘಟಕ ಒಂಬತ್ತು ಶಂಕಿತ ಉಗ್ರರನ್ನು ಬಂಧಿಸಿದೆ. ಈ ಉಗ್ರರು ಐಸಿಸ್ ಹಾಗೂ ಮುಂಬೈ ಭೂಗತ ಜಗತ್ತಿನ ಜೊತೆ ಸಂಪರ್ಕ
ಪ್ರಿಯತಮೆಯ ಪತಿ ಬಂದಾಗ 30 ಅಂತಸ್ತಿನ ಕಟ್ಟಡದಿಂದ ಜಿಗಿದು ಮೃತಪಟ್ಟ ಜಿಮ್ ಟ್ರೈನರ್
ಪ್ರಿಯತಮೆಯ ಮನೆಯಲ್ಲಿ ಜೊತೆಯಲ್ಲಿದ್ದಾಗ ಆಕೆಯ ಪತಿ ಮನೆಗೆ ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿ 30 ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು ಫಿಟ್‌ನೆಸ್ ಟ್ರೈನರ್ ಮೃತಪಟ್ಟಿದ್ದಾನೆ. ಸಿಂಗಾಪುರದ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿ 30 ವರ್ಷದ ಫಿಟ್‌ನೆಸ್ ಟ್ರೈನರ್ ಆಗಿದ್ದು,




