ಪ್ರಿಯತಮೆಯ ಮನೆಯಲ್ಲಿ ಜೊತೆಯಲ್ಲಿದ್ದಾಗ ಆಕೆಯ ಪತಿ ಮನೆಗೆ ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿ 30 ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು ಫಿಟ್‌ನೆಸ್ ಟ್ರೈನರ್ ಮೃತಪಟ್ಟಿದ್ದಾನೆ.
ಸಿಂಗಾಪುರದ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿ 30 ವರ್ಷದ ಫಿಟ್‌ನೆಸ್ ಟ್ರೈನರ್ ಆಗಿದ್ದು, ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂದು ಹೇಳಲಾಗಿದೆ.
ಫಿಟ್‌ನೆಸ್ ಟ್ರೈನರ್ ವಿವಾಹಿತ ಪ್ರಿಯತಮೆಯ ಜೊತೆ ಏಕಾಂತದಲ್ಲಿರುವಾಗಲೇ ಅನಿರೀಕ್ಷಿತವಾಗಿ ಆಕೆಯ ಗಂಡ ಆಗಮಿಸಿದ್ದು, ಆತನಿಂದ ತಪ್ಪಿಸಿಕೊಳ್ಳಲು ಕಿಟಕಿಯಿಂದ ಹೊರಗೆ ಹೋಗಿದ್ದಾನೆ. ಕಿಟಕಿಯ ಸರಳುಗಳನ್ನು ಹಿಡಿದು ನೇತಾಡಿದ್ದು, ಹೆಚ್ಚು ಹೊತ್ತು ಅದನ್ನು ಹಿಡಿಯಲಾಗದೇ ಕೈಜಾರಿ ಕೆಳಗೆ ಬಿದ್ದಿದ್ದಾನೆ. 30ನೇ ಅಂತಸ್ತಿನಿಂದ ಕೆಳಗೆ ಬಿದ್ದ ಪ್ರಾಣ ಹೋಗಿದೆ. ಈ ವೀಡಿಯೊ ವ್ಯಾಪಕ ವೈರಲ್ ಆಗಿದ್ದು, ಸುದ್ದಿಗೆ ಗ್ರಾಸವಾಗಿದೆ.
ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹೊರಗೆ ಬಂದು ನೋಡಿದಾಗ ಕಟ್ಟಡದ ಕೆಳಭಾಗದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿದ್ದ. ಸ್ಥಳೀಯರು ತುರ್ತು ಸೇವೆಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪ್ಯಾರಾಮೆಡಿಕ್ಸ್ ತಂಡ ಗಾಯಾಳುವಿಗೆ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿತು. ಗಂಭೀರ ಗಾಯಗಳಿಂದಾಗಿ ಆತ ಅದಾಗಲೇ ಮೃತಪಟ್ಟಿದ್ದ.
ಪೊಲೀಸರು ತನಿಖೆ ಆರಂಭಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿ ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಮಹಿಳೆ ಮತ್ತು ಆಕೆಯ ಪತಿಯನ್ನೂ ವಿಚಾರಣೆ ನಡೆಸಲಾಗುತ್ತಿದೆ. ಅಧಿಕಾರಿಗಳು ಸಂಬಂಧಪಟ್ಟವರ ಗುರುತನ್ನು ಬಹಿರಂಗಪಡಿಸಿಲ್ಲ.


