jds
ರಾಜ್ಯ ಬಿಜೆಪಿ ನೂತನ ಸಾರಥಿಯ ತಳಮಳ
ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸಂಪೂರ್ಣ ರಾಜಕೀಯ ಲಾಭ ಪಡೆಯುವ ದಿಶೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ರಚಿಸಿರುವ ಚಕ್ರವ್ಯೂಹ ಏನೆಂಬುದೇ ರಾಜ್ಯದ ಬಿಜೆಪಿ ನಾಯಕರಿಗೆ ಇದುವರೆಗೂ ಅರ್ಥವಾಗಿಲ್ಲ. ರಾಜ್ಯ ಬಿಜೆಪಿ ಸಾರಥಿ ವಿಚಾರವೀಗ ಚರ್ಚೆಯಲ್ಲಿದೆ. ಅಸೆಂಬ್ಲಿ ಚುನಾವಣೆಗೆ ಇನ್ನು ದಿನಾಂಕವೇನೂ ಬಹಳ ದೂರವಿಲ್ಲ. ೨೦೩೧ರಲ್ಲಿ ಪ. ಬಂಗಾಳದಲ್ಲಿ ಮತ್ತೆ ಹೇಗೆ ಅಧಿಕಾರವನ್ನು ತನ್ನ ಕೈವಶ ಮಾಡಿಕೊಳ್ಳಬೇಕೆಂಬುದರ ನೀಲನಕ್ಷೆಯನ್ನು ಸಿದ್ದ ಮಾಡಿಟ್ಟುಕೊಂಡಿರುವ ದಿಲ್ಲಿ ಕಮಲಾಗ್ರಜಪಡೆ, ಕನ್ನಡನಾಡಿನ ಕೇಸರಿ ಪಾಳೆಯದ ಹಣೆಬರಹ ಬರೆಯದೆ ಸುಮ್ಮನೆ
ಜೆಡಿಎಸ್ಗೆ ಸೆಕ್ಯುಲರಿಸಂ ಅನಿವಾರ್ಯವೋ, ಆಯ್ಕೆಯೋ?
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತು ಬಿಜೆಪಿ ನೆರವಿನಿಂದ ಮತ್ತೊಂದು ಸಾರಿ ರಾಜ್ಯಸಭೆಗೆ ಆಯ್ಕೆಯಾಗಬೇಕೆಂದು ದೇವೇಗೌಡರು ಬಯಸಿರುವಾಗ, ರಾಜ್ಯದಲ್ಲಿ ಜೆಡಿಎಸ್ ಪಾರ್ಟಿಯ ಜಾತ್ಯತೀತ ಐಡೆಂಟಿಟಿ ಇನ್ನೆಷ್ಟು ದಿನ ಎಂಬುದೀಗ ಬಹು ಚರ್ಚಿತ ವಿಷಯವಾಗಿದೆ. ಜಾತ್ಯತೀತ ಜನತಾದಳ, ಬಿಜೆಪಿ ಜೊತೆ ರಾಜಕೀಯವಾಗಿ ಸಾರ್ವಕಾಲಿಕ ರಾಜಿ
ಬೂದಿಯಿಂದ ಎದ್ದೇಳುತ್ತಾ ಜೆಡಿಎಸ್ ?
ಹೆಗಡೆ ಮತ್ತು ದೇವೇಗೌಡರಂದು ತಮ್ಮ ರಾಜಕೀಯ ಬಿಗಿಪಟ್ಟು ಮತ್ತು ಪ್ರತಿಷ್ಠೆ ಸಡಿಲಿಸಿದ್ದಿದ್ದರೆ ಇಂದು ಜನತಾದಳವು. ಡಿಎಂಕೆ ಅಥವಾ ತೆಲುಗುದೇಶಂ ಪಕ್ಷಗಳ ಹಾಗೆ ಕರ್ನಾಟಕದಲ್ಲಿ ಸಿಂಹಗರ್ಜನೆ ಮಾಡುವ ಹಂತದಲ್ಲಿರುತ್ತಿತ್ತು. ಜನತಾದಳ ವಿಭಜನೆ ಆಗಬಾರದಿತ್ತೇನೋ.. !! ಎಚ್ ಡಿ ದೇವೇಗೌಡರು ಈ ದೇಶದ ಪ್ರಧಾನಿ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಸೀಟ್ ಬೇಡಿಕೆ: ಬಿಜೆಪಿ ಹೈಕಮಾಂಡ್ಗೆ ಸವಾಲು
ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಜೆಡಿಎಸ್ ಪಾರ್ಟಿಗೆ ಸಿಂಹಪಾಲಿನ ಸೀಟುಗಳನ್ನು ಕೇಳಿರುವುದು ದಿಲ್ಲಿ ಬಿಜೆಪಿ ಹೈಕಮಾಂಡಿಗೆ ಈಗ ಸವಾಲಾಗಿದೆ. ಜಿಬಿಎ ಮತ್ತು ಪಂಚಾಯ್ತಿ ಚುನಾವಣೆಗಳಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಒಡ್ಡುವ ಷರತ್ತು ಮತ್ತು ಬಿಗಿಸೂತ್ರಗಳಿಗೆ ಕಟ್ಟುಬೀಳುವುದು ಬೇಡ.
ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಹೊಡೆಯೋ ಚಪಲ: ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಕೆಲವರಿಗೆ ಜನರನ್ನು ಲೂಟಿ ಮಾಡಿ ದುಡ್ಡು ಮಾಡುವ ಚಪಲ. ನನಗೆ ಜನರ ಜತೆ ನಿಂತು ಅವರ ಸಹಾಯಕ್ಕೆ ನಿಲ್ಲುವ ಚಪಲ. ಒಬ್ಬೊಬ್ಬರಿಗೆ ಒಂದೊಂದು ಚಪಲ ಇರುತ್ತದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆ ತೀರ್ಮಾನ ಮಾಡುತ್ತೇನೆ: ಹೆಚ್.ಡಿ. ಕುಮಾರಸ್ವಾಮಿ
“ರಾಜ್ಯ ರಾಜಕೀಯದಿಂದ ದೂರ ಸರಿಯುವುದಿಲ್ಲ. ನಾನು ರಾಜಕಾರಣದಲ್ಲಿ ಇದ್ದೇನೆ. ರಾಜ್ಯ ರಾಜಕೀಯಕ್ಕೆ ಯಾವಾಗ ಬರಬೇಕು ಎಂದು ಜನತೆಯ ಆಶಯದ ಮೇರೆಗೆ ತೀರ್ಮಾನ ಮಾಡುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನ ತಮ್ಮ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಬಿಜೆಪಿ ಜೊತೆಗಿನ ಮೈತ್ರಿ ವಿಧಾನಸಭೆ, ಲೋಕಸಭೆಗಷ್ಟೇ ಸೀಮಿತವಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಗೆ ಅಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್
ಭಾರತ 3ನೇ ಆರ್ಥಿಕ ಶಕ್ತಿ ಆಗುತ್ತಿದ್ದರೆ ಕರ್ನಾಟಕ ಅಧಃಪತನದತ್ತ: ಹೆಚ್.ಡಿ. ಕುಮಾರಸ್ವಾಮಿ ಕಳವಳ
ಬೆಂಗಳೂರು: ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲಿಡುತ್ತಿದೆ. ಆದರೆ, ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗೆ ಮಾದರಿಯಾಗಿದ್ದ ಕರ್ನಾಟಕವು ಕಾಂಗ್ರೆಸ್ ಆಡಳಿತದಲ್ಲಿ ಅಧಃಪತನದತ್ತ ಸಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ
ನಾವು ಡಿಸಿಎಂ ಮಾಡದೇ ಇದ್ದಿದ್ದರೆ ಸಿದ್ದರಾಮಯ್ಯ ಕಡೆ ಕಾಂಗ್ರೆಸ್ ಮೂಸಿಯೂ ನೋಡುತ್ತಿರಲಿಲ್ಲ: ಎಚ್.ಡಿ. ಕುಮಾರಸ್ವಾಮಿ
ನಾವು ಡಿಸಿಎಂ ಮಾಡದೇ ಇದಿದ್ದರೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮೂಸಿ ನೋಡುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಬೆಂಗಳಜುರಿನ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು, ಈ ಪಕ್ಷದಲ್ಲಿ ರಾಜಕೀಯ ಜನ್ಮ ಪಡೆದು
ಕಠಿಣ ಸವಾಲು ಎದುರಿಸಿ ಪಕ್ಷ ಕಟ್ಟಿದ್ದೇವೆ; ಮುಂದೆಯೂ ಕಟ್ಟುತ್ತೇವೆ: ಹೆಚ್.ಡಿ. ದೇವೇಗೌಡ ಗುಡುಗು
ಬೆಂಗಳೂರು: ಅದೆಷ್ಟೋ ಕಠಿಣ ಸವಾಲುಗಳನ್ನು ಎದುರಿಸಿ ನಾವು ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇವೆ. ಮುಂದೆಯೂ ಇಂಥಹ ಸವಾಲುಗಳನ್ನು ಮೆಟ್ಟಿನಿಂತು ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ. ಯಾರಿಗೂ ಯಾವ ರೀತಿಯ ಅನುಮಾನ ಬೇಕಿಲ್ಲ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ




