ಮುಂಬೈ ಮ್ಯಾರಥಾನ್ 2026
ಮುಂಬೈ ಮ್ಯಾರಥಾನ್ 2026; ಮಂಗಳೂರಿನಲ್ಲಿ ಪ್ಯಾಲಿಯೇಟಿವ್ ಕೇರ್ ಗಾಗಿ 5 ಲಕ್ಷ ನಿಧಿ ಸಂಗ್ರಹಿಸಿದ ಹಸೀನಾ ಥೆಮಾಲಿ!
ಬೆಂಗಳೂರು: 43 ವರ್ಷದ ಓಟಗಾರ್ತಿ ಹಾಗೂ ಕೋಚ್ ಆಗಿರುವ ಹಸೀನಾ ಥೆಮಾಲಿ ಮುಂಬೈ ಮ್ಯಾರಥಾನ್ (TMM) 2026ರಲ್ಲಿ ಮೊದಲ ಬಾರಿಗೆ ನಿಧಿ ಸಂಗ್ರಾಹಕರಾಗಿ ಭಾಗವಹಿಸಿ ₹5,01,001 ಮೊತ್ತವನ್ನು ಸಂಗ್ರಹಿಸಿದ್ದಾರೆ. 95 ದಾನಿಗಳ ಬೆಂಬಲದೊಂದಿಗೆ ನಡೆದ ಈ ನಿಧಿ ಸಂಗ್ರಹ ಅಭಿಯಾನವು ಕರ್ನಾಟಕದಲ್ಲಿ ಪ್ಯಾಲಿಯೇಟಿವ್ ಕೇರ್ ಸೇವೆಗಳ ಬಲವರ್ಧನೆಗೆ ಮಹತ್ವದ ಕೊಡುಗೆಯಾಗಿದೆ. ಈ ನಿಧಿ ಸಂಗ್ರಹವು ಅಂತಿಮ ಹಂತದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಹಾಗೂ ಮಾನವೀಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.


