Thursday, January 30, 2025
Menu

ಪಾಗಲ್ ಪ್ರೇಮಿಯಿಂದ ವಿದ್ಯಾರ್ಥಿನಿಯ ಕೊಲೆ; ಬೆಚ್ಚಿಬಿದ್ದ ಸಿಂಧನೂರು ಜನತೆ

ಸಿಂಧನೂರು : ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎಸ್ ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯನ್ನು ಪಾಗಲ್ ಪ್ರೇಮಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ, ಇದರಿಂದ ಸಿಂಧನೂರು ಜನತೆ ಭಯದ ವಾತಾವರಣ ಇದೆ.

ಲಿಂಗಸ್ಗೂರು ಮೂಲದ ಯುವಕ ಶೇಕ್ ಮಹಿಬುಲ್ ಎಂಬ ಪಾಗಲ್ ಪ್ರೇಮಿಯೂ ವಿದ್ಯಾರ್ಥಿಯನ್ನು ಸಿಂಧನೂರು ಕುಷ್ಟಗಿ ರಸ್ತೆಯಲ್ಲಿರುವ ದನದ ಸಂತೆಯ ಹತ್ತಿರ ವಿದ್ಯಾರ್ಥಿನಿಯ ಕತ್ತು ಕೊಯ್ದು ಮಾಡಿದ್ದಾನೆ, ಕೊಲೆ ಮಾಡಿರುವ ಆರೋಪಿ ಲಿಂಗಸ್ಗೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಕೊಲೆಯಾದ ವಿದ್ಯಾರ್ಥಿನಿ ಅದೇ ಲಿಂಗಸಗೂರು ಮೂಲದ ಶಿಫಾ ಸಿಂಧನೂರು ಕುಷ್ಟಗಿ ರಸ್ತೆಯಲ್ಲಿ ಇರುವ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಕಳೆದ 20 ದಿನಗಳ ಹಿಂದೆ ಎಂ ಎಸ್ ಸಿ ಪ್ರಥಮ ಸೆಮಿಸ್ಟರ್ ರಿಗೆ ಅಡ್ಮಿಶನ್ ಮಾಡಿಸಿದ್ದಾರೆ, ವಿದ್ಯಾರ್ಥಿನಿಯನ್ನು ಲಿಂಗಸೂರ್ ನಿಂದ ಸಿಂಧನೂರು ವರೆಗೆ ಬಸ್ ಮೂಲಕ ಕೊಲೆ ಮಾಡಿರುವ ಆರೋಪಿ ಶೇಕ್ ಮೈ ಬುಲ್ ಬೆನ್ನೆತ್ತಿಕೊಂಡು ಬಂದಿದ್ದಾನೆ,

ವಿದ್ಯಾರ್ಥಿನಿ ಶಿಫಾ ಬಳಿ ಬಸ್ ನಿಲ್ದಾಣದಲ್ಲಿ ಮಾತನಾಡಿಕೊಂಡು ಸರ್ಕಾರಿ ಪದವಿ ಮಹಾವಿದ್ಯಾಲಯದ ಬಳಿ ಇರುವ ದನದ ಸಂತೆ ಹತ್ತಿರ ಕರೆದುಕೊಂಡು ಹೋಗಿದ್ದಾನೆ, ಹಲ್ಲಿ ಮಾತಿಗೆ ಮಾತು ಬೆಳೆದು ಕೊಲೆ ಮಾಡಿರುವ ಘಟನೆ ಜರುಗಿರದು ತಿಳಿದು ಬಂದಿದೆ. ಬಸ್ಸಲ್ಲಿ ಓಡಾಡುತ್ತಿದ್ದ ಶಿಫಾ ಶಿಫಾ ಹಾಗೂ ಶೇಕ್ ಮೈಬುಲ್ ಇಬ್ಬರು ಲಿಂಗಸಗೂರು ಮೂಲದವರು ಆಗಿದ್ದಾರೆ.

ಒಬ್ಬರಿಗೊಬ್ಬರು ಪರಿಚಯ ಇದ್ದವರೇ ಆಗಿದ್ದಾರೆ, ಟಿಫ ಅವಳನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಆರೋಪಿ ಶೇಕ್ ಮೈ ಬುಲ್ ಅವರ ಮನೆಯವರಿಗೆ ಒತ್ತಾಯ ಮಾಡುತ್ತಿದ್ದಾನೆ. ಮನೆಯವರು ಒಪ್ಪದ ಕಾರಣ ಈ ಕೃತ್ಯ ನಡೆದಿರಬಹುದು ಎಂದು ತಿಳಿದು ಬಂದಿದೆ.

ಪ್ರೀತಿಗಾಗಿ ಕೊಲೆ ನಡೆದಿದ್ದು ಸಿಂಧನೂರಿನಲ್ಲಿ ಇದು ಹೊಸದಲ್ಲ : ಅನೇಕ ವರ್ಷಗಳ ಹಿಂದೆ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಬಳಿ ಪ್ರೀತಿ ಎಂಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು, ಹಾಗೂ ಪ್ರೀತಿಯ ವಿಷಯಕ್ಕೆ ಸುಕಲಪೇಟೆಯಲ್ಲಿ ಕೊಲೆಗಳು ಆಗಿರುವುದು ಘಟನೆ ನಡೆದಿದೆ, ಇದರ ಬೆನ್ನಲ್ಲಿ ಈಗ ಲಿಂಗಸ್ಗೂರು ಮೂಲದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರೋದು ಮತ್ತಷ್ಟು ಜನರಿಗೆ ಆತಂಕ ಸೃಷ್ಟಿಯಾಗಿದ್ದು ಕಾಣುತ್ತಿದ್ದೇವೆ.

Related Posts

Leave a Reply

Your email address will not be published. Required fields are marked *