Menu

ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ: 4.55 ಕೋಟಿ ಅರ್ಹ ಮತದಾರರು, 99.32 ಲಕ್ಷ ಹೆಸರುಗಳು ಡಿಲೀಟ್!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಹಾಗೂ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 23 ವರ್ಷಗಳ ಬಳಿಕ (2002ರ ನಂತರ) ರಾಜ್ಯದಲ್ಲಿ ಕೈಗೊಂಡ ಈ ಬೃಹತ್ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರು ಇದ್ದಾರೆ.

ನಕಲಿ ಮತದಾರರನ್ನು ಗುರುತಿಸಲು, ಮೃತಪಟ್ಟವರು, ಸ್ಥಳಾಂತರಗೊಂಡವರು ಮತ್ತು ಎರಡೆರಡು ಕಡೆ ಮತದಾನದ ಹಕ್ಕು ಹೊಂದಿರುವವರ ಹೆಸರುಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸಲಾಗಿದ್ದು, ಒಟ್ಟು 99.32 ಲಕ್ಷ ಮತದಾರರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ.

ಮತದಾರರ ಸಂಖ್ಯೆಯ ವಿವರ

ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದರು. ಕರಡು ಪಟ್ಟಿಯಲ್ಲಿ ಈ ಸಂಖ್ಯೆ 4.46 ಕೋಟಿಗೆ ಇಳಿಕೆಯಾಗಿತ್ತು. ಈಗ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 4.55 ಕೋಟಿ ಮತದಾರರಿದ್ದಾರೆ. ಅಂತಿಮ ಮತದಾರರ ಪಟ್ಟಿಯಂತೆ ರಾಜ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಅಧಿಕವಾಗಿದೆ.

ಮಹಿಳಾ ಮತದಾರರು:2,29,12,355
ಪುರುಷ ಮತದಾರರು: 2,25,40,493
ಇತರೆ ಮತದಾರರು:  2,841
ಸಾಗರೋತ್ತರ ಮತದಾರರು:3,252
18-19 ವಯೋಮಾನದವರು:6,83,364
85+ ವಯೋಮಾನದವರು:3,92,134

ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಆಯೋಗದ ಅಧಿಕೃತ ವೆಬ್‌ಸೈಟ್ [https://ceo.karnataka.gov.in/en] (https://ceo.karnataka.gov.in/en) ನಲ್ಲಿ ವಿವರಗಳನ್ನು ಪರಿಶೀಲಿಸಬಹುದಾಗಿದೆ.

ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಎಸ್‌ಐಆರ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕಳೆದ ಜೂನ್ 30ರಿಂದ ಅಧಿಕೃತವಾಗಿ ಆರಂಭಿಸಿತ್ತು. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ಸಂಗ್ರಹಿಸಿದ್ದರು. 2002ರ ಮತದಾರರ ಪಟ್ಟಿಯ ವಿವರಗಳೊಂದಿಗೆ ತಾಳೆ ಮಾಡಿ, ವ್ಯತ್ಯಾಸವಿದ್ದ ಹಾಗೂ ದಾಖಲೆಗಳ ಕೊರತೆಯಿದ್ದ ಲಕ್ಷಾಂತರ ಮಂದಿಗೆ ನೋಟಿಸ್ ಜಾರಿಗೊಳಿಸಿ ಪೌರತ್ವ ಸಾಬೀತುಪಡಿಸಲು ಅವಕಾಶ ನೀಡಲಾಗಿತ್ತು. ಎಲ್ಲಾ ಕಾನೂನುಬದ್ಧ ಪರಿಶೀಲನೆಗಳ ಬಳಿಕ ಈಗ ಅಂತಿಮ ಪಟ್ಟಿ ಹೊರಬಿದ್ದಿದೆ.

#SIRKarnataka #VoterList2026 #ElectionCommission #KarnatakaNews #UdayakalaNews #VoterRevision #BangaloreNews #Anbukumar #KarnatakaPolitics

Related Posts

Leave a Reply

Your email address will not be published. Required fields are marked *