Thursday, October 01, 2026
Menu

ನಾಪೋಕ್ಲುವಿನ ತೋಟಗಳಲ್ಲಿ ಅಲೆದಾಡುತ್ತಿದ್ದ ಕಾಡಾನೆ ಸಾವು

ಕೊಡಗಿನ  ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಬೊಮ್ಮಂಜಿ ಕೇರಿಯಲ್ಲಿ ಕಾಡಾನೆಯೊಂದು ಮೃತಪಟ್ಟಿದೆ.  ಕಳೆದ ಎರಡು ದಿನಗಳಿಂದ ಕೈಕಾಡು ಗ್ರಾಮ ವ್ಯಾಪ್ತಿಯ ಗದ್ದೆ, ತೋಟಗಳಲ್ಲಿ ಅಲೆದಾಡುತ್ತಿದ್ದ ಗಂಡು ಕಾಡಾನೆಯೊಂದು ಭಾನುವಾರ ಸಂಜೆ ಕೊಳಕೇರಿ ಗ್ರಾಮದ ಬೊಮ್ಮಂಜಿಕೇರಿಯಲ್ಲಿ ಕಾಣಿಸಿಕೊಂಡಿದೆ.  ಸೋಮವಾರ ಬೆಳಿಗ್ಗೆಯೂ ಗ್ರಾಮದಲ್ಲಿ  ಕಾಣಿಸಿಕೊಂಡ ಕಾಡಾನೆ ಮಧ್ಯಾಹ್ನ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೊಮ್ಮಂಜಿಕೇರಿಯ ಬೆಳೆಗಾರರ ತೋಟಗಳಿಗೆ ತೆರಳುವ ಮಣ್ಣು ರಸ್ತೆಯಲ್ಲಿ  ಕಾಡಾನೆ ಮಲಗಿರುವ ಸ್ಥಿತಿಯಲ್ಲಿ ಕಂಡು ಬಂದಿದೆ.  ಕಾಡಾನೆಯು ಗ್ರಾಮದ

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು 7ನೇ ಗ್ಯಾರಂಟಿ : ಸಿಎಂ ಡಿಕೆ ಶಿವಕುಮಾರ್

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಗ್ಯಾರಂಟಿ ಹಾಗೂ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡುತ್ತಿದೆ. ಇದರ ಮೂಲಕ 2027ರ ಅಂತ್ಯದ ವೇಳೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸಲು ಸರ್ಕಾರ ಸಂಕಲ್ಪ ಮಾಡಿದೆ ಎಂದು

ಚಿನ್ನ, ನಗದು ದೋಚಿ ಮನೆ ಕೆಲಸದವರು ಪರಾರಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದ ಮನೆಯೊಂದರಲ್ಲಿ ಕೆಲಸಕ್ಕಿದ್ದ ನೇಪಾಳಿಗಳು ಚಿನ್ನ, ಬೆಳ್ಳಿ, ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಹೊಸಕೋಟೆ ಹೊರವಲಯದ ಹೆದ್ದಾರಿ ಬದಿಯ 40 ಎಕರೆ ಪ್ರದೇಶದಲ್ಲಿರುವ ಪಾಲಮ್ ವಿಲ್ಲಾ ಬಡಾವಣೆಯಲ್ಲಿ ವಾಸವಿರುವ ರವಿ ರಾಜನ್ ಎಂಬವರ ಮನೆಯಲ್ಲಿ

ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ತೆಗೆದುಹಾಕಲು ಬಿಜೆಪಿ-ಜೆಡಿಎಸ್‌ ಹೋರಾಟ: ಆರ್‌ ಅಶೋಕ

ಸಚಿವ ಬಿ.ನಾಗೇಂದ್ರ ಕಳಂಕಿತರಾಗಿದ್ದು, ಮುಖ್ಯಮಂತ್ರಿಗೆ ಬೆದರಿಕೆ ಹಾಕಿರುವುದರಿಂದಲೇ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲು ಬಿಜೆಪಿ ಹಾಗೂ ಜೆಡಿಎಸ್‌ ಒಂದಾಗಿ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸಭೆ ಬಳಿಕ ಸುದ್ದಿಗಾರರೊಂದಿಗೆ

ಆಶ್ರಮ ಶಾಲೆ ಬಾಲಕಿಯರಿಗೆ ಹಾವು ಕಡಿತ: ಮೂವರ ಸಾವು, ಒಬ್ಬಾಕೆ ಸ್ಥಿತಿ ಗಂಭೀರ

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋಕಾ ತಾಲೂಕಿನಲ್ಲಿರುವ ಸರ್ಕಾರಿ ಆಶ್ರಮ ಶಾಲೆಯಲ್ಲಿ ಆರು ಬಾಲಕಿಯರಿಗೆ ಹಾವು ಕಡಿದಿದ್ದು, ಮೂವರು ಮೃತಪಟ್ಟಿದ್ದಾರೆ. ಒಬ್ಬಾಕೆಯ ಸ್ಥಿತಿ ಗಂಭೀರವಾಗಿದೆ. ಮೂವರು ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಶ್ರಮದಲ್ಲಿದ್ದ 14 ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಧನೋಕಾ

ಜಾರ್ಖಂಡ್‌ ಪ್ರತಿಭಟನೆ: ವಿದ್ಯಾರ್ಥಿಗಳ ನಿಯಂತ್ರಣಕ್ಕೆ ಜಲಫಿರಂಗಿ ಪ್ರಯೋಗ

ಜಾರ್ಖಂಡ್‌ನಲ್ಲಿ ನಡೆದ ನಾನಾ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಜಾರ್ಖಂಡ್‌ನ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಬೆಳಿಗ್ಗೆ ಪ್ರತಿಭಟನಾಕಾರರು ವಿಧಾನಸೌಧದೆಡೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ.

ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯ ಸಾವು

ವೃದ್ಧ ದಂಪತಿಯಲ್ಲಿ ಪತ್ನಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ಪತಿಯೂ ಅಸು ನೀಗಿರುವ ಘಟನೆ ದಾವಣಗೆರೆಯ ಹದಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದಜ್ಜಿ ಹಾಗೂ ಪತಿ ಮಲ್ಲಜ್ಜ (75) ಮೃತಪಟ್ಟ ದಂಪತಿ. ಸಿದ್ದಜ್ಜಿ ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಚಿಕಿತ್ಸೆ

ಕಾವೇರಿಗಾಗಿ ತಮಿಳುನಾಡು ಅರ್ಜಿ: ವಿಚಾರಣೆಗೆ ಸುಪ್ರೀಂ ಅಸ್ತು

ಸಿಡಬ್ಲ್ಯುಸಿ ಆದೇಶ ಪ್ರಕಾರ ತಕ್ಷಣವೇ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಆಗಸ್ಟ್‌ ೧೩ರಂದು ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ತಮಿಳುನಾಡು ಸರ್ಕಾರದ ಪ ವಕೀಲ ಸಿ.ಎಸ್. ವೈದ್ಯನಾಥನ್ ಅರ್ಜಿಯ ತುರ್ತು

ಪಿಒಪಿ ಗಣೇಶ ಮೂರ್ತಿಗಳ ನಿಷೇಧಿಸಿದ ಜಿಬಿಎ

ಗಣೇಶ ಚತುರ್ಥಿ ಹಬ್ಬದ ವೇಳೆ ಸಾರ್ವಜನಿಕರು ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡಬೇಕು ಎಂದು ಜಿಬಿಎ ಹೇಳಿದ್ದು, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶ ಮೂರ್ತಿ ತಯಾರಿ ಮತ್ತು ಮಾರಾಟ ನಿಷೇಧಿಸಿದೆ. ಜಿಬಿಎ, ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆಯು ಪಿಒಪಿಮೂರ್ತಿಗಳ ತಯಾರಿಕೆ

ಶಾಂತಲಾ ಡ್ರಾಪ್‌ ಸರ್ಚ್‌ ಮಾಡಿದ್ದ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿರುವ ಟೆಕ್ಕಿ

ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ನಾಪತ್ತೆಯಾಗಿರುವ ಬೆಂಗಳೂರಿನ ಕಾಡುಗೋಡಿಯ ಟೆಕ್ಕಿ, ಮಧ್ಯಪ್ರದೇಶದ ಇಂದೋರ್‌ನ ಅದ್ವೈತ್ ಉಪಾಧ್ಯಾಯ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ನಾಪತ್ತೆಯಾದ ಮೂರನೇ ದಿನವೂ ಅದ್ವೈತ್‌ ಹುಡುಕಾಟ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ತನಿಖೆಯ ವೇಳೆ ಇದು ಪೂರ್ವನಿಯೋಜಿತ