Breaking
ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆಯ ಆಡಿಯೊ ಮಾಹಿತಿ ಸದನದ ಮುಂದಿಟ್ಟ ಆರ್ ಅಶೋಕ
ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮಂಜೂರಾತಿಗೆ ಲಂಚ, ವರ್ಗಾವಣೆ ಮಾಡಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋಗಳು ಬಿಡುಗಡೆಯಾಗಿ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿವೆ. ಆದ್ದರಿಂದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅಬಕಾರಿ ಇಲಾಖೆಯು ಭ್ರಷ್ಟಾಚಾರದ ಅಪರಾಧಿ ನಂ.1 ಇಲಾಖೆಯಾಗಿದೆ. ಲೈಸೆನ್ಸ್‌ಗೆ ಲಂಚ, ವರ್ಗಾವಣೆಗೆ ಹಣ ಫಿಕ್ಸ್ ಹೀಗೆ ಮೊದಲಾದ ರೀತಿಯಲ್ಲಿ ಅಕ್ರಮ ನಡೆಯುತ್ತಿದೆ.
ವಾಟ್ಸಾಪ್ ಪ್ರೈವೇಟ್ ಡೇಟಾ ಶೇರಿಂಗ್: ಭಾರತದಿಂದ ಹೊರ ಹೋಗಿ ಎಂದ ಸುಪ್ರೀಂ
ಬಳಕೆದಾರರ ದತ್ತಾಂಶ ಹಂಚಿಕೆ ಮತ್ತು ಖಾಸಗಿತನದ ಉಲ್ಲಂಘನೆ ಸಂಬಂಧ ಸುಪ್ರೀಂ ಕೋರ್ಟ್ ವಾಟ್ಸಾಪ್ ನೀತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಸಂವಿಧಾನದ ನಿಯಮಗಳನ್ನು ಅನುಸರಿಸದಿದ್ದರೆ ಭಾರತದಿಂದ ಹೊರಗೆ ಹೋಗಿ ಎಂದು ಮೆಟಾಗೆ ಸೂಚಿಸಿದೆ. ಮೆಟಾ ಸಂಸ್ಥೆಯು ಉದ್ದೇಶಿತ ಜಾಹೀರಾತಿಗಾಗಿ ಬಳಕೆದಾರರ ಖಾಸಗಿ ಡೇಟಾ
ಸಾಗರ ಮಾರಿಕಾಂಬ ಜಾತ್ರೆ: ದರ್ಶನಕ್ಕೆ ತೆರಳಿದ್ದ ಕಾಗೋಡು ತಿಮ್ಮಪ್ಪ ಅಸ್ವಸ್ಥ
ಸಾಗರ ಮಾರಿಕಾಂಬ ದೇವಿ ಜಾತ್ರೆಯ ಪ್ರಯುಕ್ತ ದೇವಿಯ ದರ್ಶನಕ್ಕೆ ತೆರಳಿದ್ದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಕಾಂಬ ದೇವಿಯ ದರ್ಶನಕ್ಕೆ ತೆರಳಿದ್ದ ವೇಳೆ ಉಸಿರಾಟ ಹಾಗೂ ಮಧುಮೇಹ ಸಮಸ್ಯೆಯಿಂದಾಗಿ ಕುಸಿದು ಬಿದ್ದಿದ್ದಾರೆ. ಸ್ಥಳೀಯ ಸರ್ಕಾರಿ
ಮನರೇಗಾ ಕಾಯ್ದೆ ಮರುಸ್ಥಾಪನೆಗೆ ಒತ್ತಾಯಿಸಿ ಸದನದಲ್ಲಿ ನಿರ್ಣಯ ಮಂಡನೆ
ಕೇಂದ್ರ ಸರ್ಕಾರದ ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G)’ ಕಾಯ್ದೆಯನ್ನು ರದ್ದುಪಡಿಸಿ ಮತ್ತು ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA)’ ಕಾಯ್ದೆಯನ್ನು ಮರುಸ್ಥಾಪಿಸಲು ಒತ್ತಾಯಿಸಿ ಸದನದಲ್ಲಿ ಸಿಎಂ ಸಿದ್ದರಾಮಯ್ಯ
ಕಮಲಾಕರ ಭಟ್ ಗುರೂಜಿ ಅಕ್ರಮ ಸಂಬಂಧ: ಮಹಿಳೆಯ ಪತಿ ದೂರು ನೀಡಿದ್ದಕ್ಕೆ ಹಲ್ಲೆ, ಒಬ್ಬನ ಕೊಲೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಕಮಲಾಕರ ಭಟ್ ಗುರೂಜಿ ಶಿವಮೊಗ್ಗದ ಮಹಿಳೆ ಜೊತೆ ಅಕ್ರಮ ಸಂಬಂಧ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಮಹಿಳೆಯ ಪತಿ ದೂರು ನೀಡಿದ ಕಾರಣಕ್ಕೆ ಮಹಿಳೆ, ಗುರೂಜಿ ಹಾಗೂ ಇತರರು ಸೇರಿ
10 ವರ್ಷದ ಹಿಂದೆ ತಾಯಿಯೊಂದಿಗೆ ಎಸ್ಕೇಪ್ ಆಗಿದ್ದವನ ಕೊಲೆಗೈದ ಯುವಕ
ಹತ್ತು ವರ್ಷದ ಹಿಂದೆ ಅನೈತಿಕ ಸಂಬಂಧ ಬೆಳೆಸಿ ಮಹಿಳೆಯೊಂದಿಗೆ ಪರಾರಿಯಾಗಿದ್ದ ವ್ಯಕ್ತಿಯನ್ನು ಆ ಮಹಿಳೆಯ ಮಗ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿಯಲ್ಲಿ ನಡೆದಿದೆ. ಸಡೋಣಿ ಗ್ರಾಮದ ಬಸಪ್ಪ ಹೊಸಮನಿ(51) ಕೊಲೆಯಾದ ವ್ಯಕ್ತಿ. ಈರಯ್ಯ ಮಠಪತಿ ಕೊಲೆ ಆರೋಪಿ.
“ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿ
ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 80-90ರ ದಶಕದ ಹಳ್ಳಿಯ ಕಥೆಯನ್ನು ಆಧರಿಸಿದ ಚಿತ್ರ ‘ಲ್ಯಾಂಡ್ಲಾರ್ಡ್’ ಆಗಿದ್ದು, ಕೋಡಿಹಳ್ಳಿ
ಸ್ನೇಹಿತನ ಪತ್ನಿ ಜತೆ ಸಲುಗೆ: ಗೆಳೆಯನಿಂದಲೇ ವ್ಯಕ್ತಿ ಕೊಲೆ
ಬಾದಾಮಿ ತಾಲೂಕಿನ ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಸ್ನೇಹಿತನ ಪತ್ನಿ ಜತೆ ಸಲುಗೆ, ಫೋನ್ ಸಂಪರ್ಕದಲ್ಲಿದ್ದ ಕಾರಣಕ್ಕೆ ವ್ಯಕ್ತಿಯನ್ನು ಸ್ನೇಹಿತನೇ ಕೊಲೆ ಮಾಡಿರುವ ಘಟನೆ ನಡೆದಿದೆ. ತನ್ನ ಪತ್ನಿಯೊಂದಿಗೆ ಸ್ನೇಹಿತ ಅನೈತಿಕ ಸಂಬಂಧ ಹೊಂದಿರುವ ಶಂಕೆಯಲ್ಲಿ ಗೆಳೆಯನೇ ಕೊಲೆಗೈದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ
ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳಿಗೆ ಭೂಸ್ವಾಧೀನ: ಡಿಕೆ ಶಿವಕುಮಾರ್
ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆ ಗಮನ ಸೆಳೆವ ಸೂಚನೆ ವೇಳೆ ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು ಅವರು ಯಗಚಿ ಜಲಾಶಯದ ಎಡದಂಡೆ ನಾಲೆಗಳ
ಮಹಡಿಯಿಂದ ಬಿದ್ದು ಬಾಲಕ ಸಾವು: ಮದ್ಯ ಕುಡಿಸಿದ ಕಂಪೆನಿ ವಿರುದ್ಧ ದೂರು
ಬೆಂಗಳೂರಿನಲ್ಲಿ ಡಾ. ವಿಷ್ಣುವರ್ಧನ್ ರಸ್ತೆಯ ಅಪಾರ್ಟ್‌ಮೆಂಟ್‌ನ ನಿವಾಸಿ, 15 ವರ್ಷದ ಬಾಲಕ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಪ್ರಕರಣ ಸಂಬಂಧ ಪೋಷಕರು ಸ್ಥಳೀಯ ಕಂಪೆನಿ ಬಾಲಕನಿಗೆ ಮದ್ಯ ಕುಡಿಸಿರುವುದರಿಂದ ಈ ದುರಂತ ಸಂಭವಿಸಿರುವುದಾಗಿ ಆರೋಪಿಸಿದ್ದಾರೆ. ಸ್ಥಳೀಯ ಕಂಪೆನಿಯು ಬಾಲಕರಿಗೆ ಮದ್ಯ ನೀಡಿದೆ




