Menu

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ರಾಜ್ಯದ ಇಬ್ಬರು ಮಹಿಳಾ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಘೋಷಣೆ

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕರ್ನಾಟಕದ ಇಬ್ಬರು ಮಹಿಳಾ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಘೋಷಿಸಿದ್ದಾರೆ. ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ  ಭಾರತ ತಂಡದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಹಾಗೂ  ಚೈನಾದಲ್ಲಿ ನಡೆದ ಕಿರಿಯರ ಏಷ್ಯನ್ ಬ್ಯಾಡ್ಮಿಂಟನ್ ಸಿಂಗಲ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಲಕ್ಷ್ಯ ರಾಜೇಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅಭಿನಂದಿಸಿ ಸನ್ಮಾನಿಸಿದರು.

ಡಿಕೆ ಶಿವಕುಮಾರ್‌ಗೆ ಸಿಎಂ ಆಗಲು ಅವಕಾಶ ನೀಡಿ: ಒಕ್ಕಲಿಗ ಸಂಘ ಆಗ್ರಹ

ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗಲು ಒಮ್ಮೆ ಅವಕಾಶ ನೀಡಲಿ, ನಮ್ಮ ಜನಾಂಗಕ್ಕೆ ಅನ್ಯಾಯವಾಗಲು ಬಿಡೋದಿಲ್ಲ. ನಮ್ಮ ಕೈಗೆ ಪೆನ್ನು ಪೇಪರ್ ಕೊಡಿ ಅಂತ ರಾಜ್ಯದ‌ ಜನತೆಗೆ ಮನವಿ ಮಾಡಿದ್ರು. ಅವರ ಮಾತಿಗೆ ನಂಬಿಕೆ ಇಟ್ಟು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಸಿದ್ದರಾಮಯ್ಯ ಅಧಿಕಾರ

9 ಭಾಷೆಗಳಲ್ಲಿ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ

ನವದೆಹಲಿ: 75ನೇ ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು 9 ಭಾಷೆಗಳಲ್ಲಿ ಭಾರತದ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುರ್ಮು ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ಬೋಡೋ, ಕಾಶ್ಮೀರಿ, ತೆಲುಗು, ಒಡಿಯಾ

ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಹೆಚ್ಚುವರಿ ರೂ.1033.60 ಕೋಟಿ ಸಬ್ಸಿಡಿ ಬಿಡುಗಡೆ ಮಾಡಿದ ಸಿಎಂ

ರಾಜ್ಯದಲ್ಲಿ ಮಾನ್ಸೂನ್ ಅವಧಿಯಲ್ಲಿ ಅತಿವೃಷ್ಟಿಯಿಂದ ಆದ ಬೆಳೆ ಹಾನಿಯಿಂದ ಆದ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ. ಒಂದೇ ದಿನ ರೈತರಿಗೆ ಹೆಚ್ಚುವರಿಯಾಗಿ ರೂ.1033.60 ಕೋಟಿ ಇನ್ಪುಟ್ ಸಬ್ಸಿಡಿ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು. ರೈತರ ಖಾತೆಗಳಿಗೆ ಇನ್

ಬೆಂಗಳೂರು ನಗರದ ಈ ರಸ್ತೆಗಳಲ್ಲಿ ನಾಳೆ ಸಂಚಾರ ನಿರ್ಬಂಧ

ಬೆಂಗಳೂರು ನಗರದ ಅರಮನೆ ಮೈದಾನದ ಸಮೀಪ ನಾಳೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಐಸಿಡಿಎಸ್‌ ಯೋಜನೆಯ ಸುವರ್ಣ ಮಹೋತ್ಸವ ನಡೆಲಿದ್ದು, ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಇರುತ್ತದೆ ಎಂದು ಬೆಂಗಳೂರಿನ ಸಂಚಾರಿ ಪೊಲೀಸರು

ಸಿಎಂ, ಡಿಸಿಎಂ ಜೊತೆ ದೆಹಲಿಯಲ್ಲಿ ತೀರ್ಮಾನ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರನ್ನು ಕರೆಸಿ, ಹೇಗೆ ಮುಂದುವರೆಯಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಾನು

ಗೋಮಾಂಸ ರಫ್ತಿನಲ್ಲಿ ದೇಶಕ್ಕೆ 2ನೇ ಸ್ಥಾನ ತಂದ ಪಿಎಂ ಮೋದಿ: ವಿಶ್ವ ಗೋರಕ್ಷಾ ಪೀಠದ ದಯಾನಂದ ಸ್ವಾಮೀಜಿ ಕಿಡಿ

ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ಹಿಂದೆಂದಿಗಿಂತ ಅಧಿಕ ಗೋಮಾಂಸವನ್ನು ಭಾರತದಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮೀಜಿ  ಕಿಡಿ

ಹಾಂಕಾಂಗ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 44 ಮಂದಿ ಬಲಿ, 279 ಮಂದಿ ನಾಪತ್ತೆ!

ಹಾಂಕಾಂಗ್ ನ 7 ಅಂತಸ್ತುಗಳ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 44 ಮಂದಿ ಮೃತಪಟ್ಟು 279 ಮಂದಿ ನಾಪತ್ತೆಯಾಗಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ ಭಾರತೀಯ ಕಾಲಮಾನ

ತಂಗಿಯ ಆರತಕ್ಷತೆ ಸಂಭ್ರಮದಲ್ಲಿದ್ದ ಯುವಕರಿಬ್ಬರು ಬೇಲೂರಿನಲ್ಲಿ ಅಪಘಾತಕ್ಕೆ ಬಲಿ

ಬೇಲೂರು ತಾಲೂಕಿನ ಮುತ್ತಗನ್ನೆ ಗ್ರಾಮದ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬೇಲೂರು ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25),‌ ಚಿಕ್ಕಮಗಳೂರು ಮೇನಹಳ್ಳಿ ಗ್ರಾಮದ ಕಿರಣ್ (32) ಮೃತಪಟ್ಟ ಯುವಕರು. ಗುರುವಾರ (ಇಂದು) ಲೋಕೇಶ್ ತಂಗಿ

ಆಧಾರ್‌ ಇದ್ದರೆ ನುಸುಳುಕೋರರನ್ನೂ ಮತದಾರರೆಂದು ಪರಿಗಣಿಸಬೇಕೇ: ಸುಪ್ರೀಂ ಪ್ರಶ್ನೆ

ಆಧಾರ್‌ ಹೊಂದಿದ್ದಾರೆ ಎಂದ ಮಾತ್ರಕ್ಕೆ ನುಸುಳುಕೋರರನ್ನೂ ದೇಶದ ಮತದಾರರೆಂದು ಪರಿಗಣಿಸಬೇಕೇ ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿರೋಧಿಸಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ಈ ಸಂಬಂಧ ಹಿರಿಯ ವಕೀಲ ಕಪಿಲ್ ಸಿಬಲ್, ಎಲ್ಲರ ಬಳಿ ಆಧಾರ್ ಕಾರ್ಡ್​