ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮಗಳ ವಿಚಾರದಲ್ಲಿ ಬಿಜೆಪಿ ತನಗೆ ಸಂಬಂಧವಿಲ್ಲ ಎಂದರೂ, ರಾಮನ ಹೆಸರಿನಲ್ಲಿ ಈತನಕ ದೇಶದಲ್ಲಿ ರಾಜಕೀಯ ಮಾಡಿದ ಮತ್ತು ಮಾಡುತ್ತಿರುವ ಬಿಜೆಪಿ ನಾಯಕರಿಗೆ ಕೆಲ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣಚಿಕೊಳ್ಳಲು ಸಾಧ್ಯವಿಲ್ಲ .
ದಕ್ಷಿಣದಲ್ಲಿ ಬಿಜೆಪಿ ತನ್ನ ಗಟ್ಟಿ ಹಿಡಿತ ಸಾಧಿಸಬೇಕಾದಲ್ಲಿ ತೆಲುಗುದೇಶಂ ಮತ್ತು ಜನಸೇನಾ ಪಕ್ಷಗಳಿಗೆ ಕೇಂದ್ರ ಮಂತ್ರಿಮಂಡಲದಲ್ಲಿ ಅಗ್ರಮಣೆ ಹಾಕುವುದೂ ಈಗ ಅನಿವಾರ್ಯವಾಗಿದೆ. ಉತ್ತರ ಪ್ರದೇಶ ಸೇರಿದಂತೆ ದೇಶದ ಕೆಲವು ರಾಜ್ಯಗಳ ಚುನಾವಣೆ ಸಮೀಪಿಸಿದೆ. ಇದೇ ವೇಳೆ ಸಂಸತ್ ಮುಂಗಾರು ಅಧಿವೇಶನದಲ್ಲಿ ಒಂದು ದೇಶ , ಒಂದು ಚುನಾವಣೆ ಮತ್ತು ಮಹಿಳಾ ಮೀಸಲು ವಿಧೇಯಕ ಅಲ್ಲದೆ ಡೀಲಿಮಿಟೇಷನ್ ವಿಧೇಯಕಗಳ ಒಪ್ಪಿಗೆಗೆ ಎನ್ಡಿಎ ಮೈತ್ರಿಕೂಟವು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ವಿದ್ಯಮಾನಗಳ ನಡುವೆ ಸರ್ಕಾರದ ಅವಿಭಾಜ್ಯವಾದ ಜನತಾದಳ (ಸಂಯುಕ್ತ) ಹಾಗೂ ತೆಲುಗುದೇಶಂ ಪಕ್ಷಗಳನ್ನು ಮತ್ತಷ್ಟು ಓಲೈಸುವ ಕಾರ್ಯ ಮುಂದುವರಿದಿದೆ.
ಒಟ್ಟಿನಲ್ಲಿ ದೇಶದಲ್ಲಿ ಎನ್ಡಿಎ ಒಕ್ಕೂಟವು ಈ ಸಾರಿ ಸಂಸತ್ ಅಧಿವೇಶನದಲ್ಲಿ ಮೇಲಿನ ಎರಡು ಪ್ರಮುಖ ವಿಧೇಯಕಗಳ ಮೇಲೆ ಮೇಲುಗೈ ಸಾಧಿಸಲು ಬಹುದೊಡ್ಡ ರಣತಂತ್ರ ರೂಪಿಸಿದೆ. ನೀಟ್ ಪರೀಕ್ಷೆ ಅವಾಂತರ ಮತ್ತು ಅಯೋಧ್ಯೆ ರಾಮಮಂದಿರದ ದೇಣಿಗೆ ಅಕ್ರಮ ವಿಚಾರಗಳು ಮುಂಗಾರು ಅಧಿವೇಶನದ ಕೋಲಾಹಲದ ವಿಚಾರವಾದರೂ, ತನಗೆ ಪ್ರತಿಷ್ಠೆಯಾಗಿ ಪರಿಣಮಿಸಿರುವ ಮಹಿಳಾ ಮೀಸಲು ಮತ್ತು ಒಂದೇ ಚುನಾವಣೆ ವಿಧೇಯPಗಳ ಶತಾಯ ಗತಾಯ ಅನುಮೋದನೆಗೆ ಮೋದಿ ಸರ್ಕಾರ ಈಗ ಬಿಗಿ ಪಟ್ಟು ಹಿಡಿದಿದೆ.
ಲೋಕಸಭೆಯಲ್ಲಿ ಎನ್ಡಿಎ ಮೆಜಾರಿಟಿ ಸಾಧಿಸಲು, ಕಳೆದ ಮೂರು ತಿಂಗಳಿಂದ ಮೋದಿ ಮತ್ತು ಷಾ ಟೀಂ ಎಡಬಿಡದೆ ಟಿಎಂಸಿ, ಶಿವಸೇನೆ ಮತ್ತು ಎನ್ಸಿಪಿ ಸಂಸದರ ಒಗ್ಗಟ್ಟನ್ನು ಮುರಿಯುವ ರಾಜಕೀಯ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದೆ. ಇದೇನೆ ಇರಲಿ. ಬಿಜೆಪಿಗೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಇಲ್ಲದಿದ್ದರೂ, ಇತರ ಪಕ್ಷಗಳ ಸಂಸದರನ್ನು ತನ್ನ ಬಲೆಗೆ ಬೀಳಿಸುವ ಮೂಲಕ ರಾಜಕೀಯವಾಗಿ ತನ್ನ ಬೇಳೆ ಬೇಯಿಸಿಕೊಳ್ಳುವ ರಣತಂತ್ರದಲ್ಲಿ ಮಾತ್ರ ಮೋದಿ ಮತ್ತು ಅಮಿತ್ಷಾ ಇಲ್ಲಿಯವರೆಗೆ ಮೇಲುಗೈ ಸಾಧಿಸಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ.
ಇತ್ತ ತೃಣಮೂಲ ಕಾಂಗ್ರೆಸ್ ಮತ್ತು ಅತ್ತ ಶಿವಸೇನೆಯ ಶಿಂಧೆ ಬಣವನ್ನು ತನ್ನತ್ತ ತಿರುಗಿಸಿಕೊಂಡಿದೆ. ಮಿಗಿಲಾಗಿ ಎನ್ಸಿಪಿಯ ಶರತ್ ಪವಾರ್ ಬಣವನ್ನೂ ತನ್ನ ಕಡೆ ಒಲಿಸಿಕೊಳ್ಳಲು ದಿಟ್ಟ ಪ್ರಯತ್ನ ನಡೆಸಿದೆ. ಆದರೆ ಈಗ ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮಗಳು ದೇಶದ ಉದ್ದಗಲಕ್ಕೂ ಭಾರಿ ಸದ್ದು ಮಾಡಿದ್ದು ಇದು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮೇಲೆ ನೇರ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ . ದೇಣಿಗೆ ಅಕ್ರಮಗಳ ವಿಚಾರದಲ್ಲಿ ಬಿಜೆಪಿ ತನಗೆ ಸಂಬಂಧವಿಲ್ಲ ಎಂದರೂ, ರಾಮನ ಹೆಸರಿನಲ್ಲಿ ಈತನಕ ದೇಶದಲ್ಲಿ ರಾಜಕೀಯ ಮಾಡಿದ ಮತ್ತು ಮಾಡುತ್ತಿರುವ ಬಿಜೆಪಿ ನಾಯಕರಿಗೆ ಕೆಲ ಸಾರ್ವತ್ರಿಕ ಪ್ರಶ್ನೆಗಳಿಗೆ ಉತ್ತರ ನೀಡದೆ ನುಣಚಿಕೊಳ್ಳಲು ಸಾಧ್ಯವಾಗದಂತಹ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣದಲ್ಲಿ ಬಿಜೆಪಿ ಸಂಪೂರ್ಣ ಹಿಡಿತ ಸಾಧಿಸಬೇಕಾದಲ್ಲಿ ತೆಲುಗುದೇಶಂ ಮತ್ತು ಜನಸೇನಾ ಪಕ್ಷಗಳಿಗೆ ಅಗ್ರಮಣೆ ಹಾಕುವುದು ಈಗ ಅನಿವಾರ್ಯ. ಈ ದಿಶೆಯಲ್ಲಿ ಚಂದ್ರಬಾಬು ನಾಯ್ಡು ಒಡ್ಡುವ ಬೇಡಿಕೆ ಮತ್ತು ನಿತೀಶ್ಕುಮಾರ್ ಕೋರುವ ಪ್ರಮುಖ ಖಾತೆಯನ್ನು ಮೋದಿ ಮತ್ತು ಷಾ ಈಗ ಇಲ್ಲ ಎನ್ನುವ ಹಾಗಿಲ್ಲ.


