Saturday, September 19, 2026
Menu

ದೊಡ್ಡಬಳ್ಳಾಪುರದಲ್ಲಿ ಇಎಸ್‌ಐ ಆಸ್ಪತ್ರೆ ಶೀಘ್ರ ಕಾರ್ಯಾರಂಭ: ಸಂತೋಷ್‌ ಲಾಡ್‌

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾಗಿರುವ ಇಎಸ್‌ಐ ಆಸ್ಪತ್ರೆ ಕಾರ್ಯಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯದಕ್ಕೇ ಇದು ಸೇವೆ ಆರಂಭಿಸಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಹೇಳಿದ್ದಾರೆ. ವಿಧಾನಸಭೆಯ ಕಲಾಪದಲ್ಲಿ  ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್‌ ಮುನಿರಾಜ್‌ ಅವರ ಪ್ರಶ್ನೆಗೆ ಲಾಡ್‌ ಉತ್ತರಿಸಿದರು. 2016 ರಲ್ಲಿ ಶಂಕುಸ್ಥಾಪನೆಯಾಗಿರುವ ಈ ಆಸ್ಪತ್ರೆ ಇನ್ನಾದರೂ ಕಾರ್ಯಾರಂಭ ಮಾಡಿಲ್ಲ. ಈ ಬಗ್ಗೆ ಕ್ರಮವಹಿಸಬೇಕು ಎಂದು ಶಾಸಕರು ಆಗ್ರಹಿಸಿದಾಗ ಸಚಿವರು ಈ ಉತ್ತರ

ಕಡಿಮೆ ಬೆಲೆಗೆ ಚಿನ್ನದ ಆಮಿಷ: ಉದ್ಯಮಿಯಿಂದ 20 ಲಕ್ಷ ರೂ. ದೋಚಿ ಪರಾರಿ

ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಆಮಿಷವೊಡ್ಡಿ ತೋರಿಸಿ ಹೈದರಾಬಾದ್ ಮೂಲದ ಉದ್ಯಮಿಯನ್ನು ಕರೆಸಿಕೊಂಡ ಗುಂಪೊಂದು 20 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಗ್ರಾಮದ ಬಳಿ ನಡೆದಿದೆ. ಹೈದರಾಬಾದ್‌ನ ಉದ್ಯಮಿ ವಿಶ್ವಪ್ರಸಾದ್ ರೆಡ್ಡಿಯು ಕುಮಾರ್

ರಾಮನಗರದಲ್ಲಿ ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ

ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದಲ್ಲಿ ಕೌಟುಂಬಿಕ ಕಲಹ, ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಸುಫಿಯಾ ಬಾನು (21)ಹತ್ಯೆಯಾದ ಮಹಿಳೆ. ಸಲ್ಮಾನ್(22) ಹತ್ಯೆ ಆರೋಪಿ. ಇವರು ರಾಮನಗರದ ಯಾರಬ್ ನಗರ ನಿವಾಸಿಗಳು. ರಾಮನಗರದ ‌ಫಿಲೆಚೆರಿಯೊಂದರಲ್ಲಿ ಕೆಲಸ

ಮನೆ ಮುಂದೆ ಕೆಮ್ಮಿದ್ದಕ್ಕೆ ಹಲ್ಲೆ: ಬಿಡದಿಯಲ್ಲಿ ವ್ಯಕ್ತಿ ಸಾವು

ರಾಮನಗರ ತಾಲೂಕಿನ ಬಿಡದಿಯಲ್ಲಿ ಮನೆ ಮುಂದೆ ವ್ಯಕ್ತಿಯೊಬ್ಬ ಕೆಮ್ಮಿದ ಎಂಬ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಆತ ಮೃತಪಟ್ಟಿದ್ದಾನೆ. ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ (34) ಹಲ್ಲೆಯಿಂದ ಅಸು ನೀಗಿದ ವ್ಯಕ್ತಿ. ಅವರು ಕಳೆದ 11 ವರ್ಷಗಳಿಂದ ಬಿಡದಿಯ

ರಾಮನಗರ ಮಣ್ಣನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ: ನಿಖಿಲ್ ಕುಮಾರಸ್ವಾಮಿ

ರಾಮನಗರ ನಮ್ಮ ತಂದೆಯ ಕರ್ಮಭೂಮಿ ಮತ್ತು ನಮ್ಮ ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ, ಹಾಗಾಗಿ ಆ ಮಣ್ಣನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಮನಗರ

ಮದುವೆಯಾಗಿ ಹಣ ದೋಚಿ ತೊರೆಯುವುದೇ ಆಕೆಯ ಉದ್ಯೋಗ: ಸಂತ್ರಸ್ತ ಪತಿಯರ ದೂರು

ಪ್ರೀತಿ, ಮದುವೆ ಎಂದು ಪುರುಷರನ್ನು ನಂಬಿಸಿ ಅವರಿಂದ ಬೇಕಾಬಿಟ್ಟಿ ಹಣ ದೋಚಿಕೊಂಡು ಬಳಿಕ ತೊರೆದು ಹೋಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ದೊಡ್ಡಬಳ್ಳಾಪುರ ಮಹಿಳೆ ವಿರುದ್ಧ ಸಂತ್ರಸ್ತರು ದೂರು ನೀಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಹೀಗೆ ವಂಚಿಸುತಿರುವ ಆರೋಪಿ ಎನ್ನಲಾಗಿದೆ. ಆಕೆಯ

ನಾಳೆ ಕನಕೋತ್ಸವಕ್ಕೆ ಚಾಲನೆ, “ಮನರೇಗಾ” ಮಕ್ಕಳಿಗೆ ಚಿತ್ರ ಸ್ಪರ್ಧೆ: ಡಿಕೆ ಶಿವಕುಮಾರ್‌

ಜನವರಿ 28ರಂದು ಬೆಳಗ್ಗೆ 5 ಗಂಟೆಗೆ ಕನಕೋತ್ಸವ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಲಿದೆ. ಯೋಗ ಗುರು ವಚನಾನಂದ ಸ್ವಾಮೀಜಿ ಅವರು ಆಗಮಿಸುತ್ತಿದ್ದಾರೆ.”ಮನರೇಗಾ”  ಯೋಜನೆ ವಿಷಯದಲ್ಲಿ ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದೇವೆ. ಜನಪದ, ದೇಶಭಕ್ತಿ ಗೀತೆ, ಸಿನಿಮಾ ಗೀತೆಗಳ ಜಿಲ್ಲಾ ಮಟ್ಟದ ಸ್ಪರ್ಧೆ

ಕುಮಾರಸ್ವಾಮಿ  ಬಿಡದಿ ಟೌನ್ ಶಿಪ್ ಯೋಜನೆ ಚರ್ಚೆಗೆ ಬರಲಿ: ಡಿಕೆ ಶಿವಕುಮಾರ್ 

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕುಮಾರಸ್ವಾಮಿ ಜತೆ ಚರ್ಚೆಗೆ ಸಿದ್ಧನಿದ್ದೇನೆ. ಈ ವಿಚಾರವನ್ನು ಎಲ್ಲಾ ಮಾಧ್ಯಮಗಳು ಕುಮಾರಸ್ವಾಮಿ ಅವರಿಗೆ ತಿಳಿಸಿ. ಅವರು ಮುಖ್ಯಮಂತ್ರಿಯಾಗಿ ದ್ದಾಲೇ ಅವರ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಈಗಲೂ  ಬಹಳ ನಮ್ರತೆಯಿಂದ ಸವಾಲು ಸ್ವೀಕಾರ ಮಾಡುತ್ತೇನೆ, ಚರ್ಚೆಗೆ

ಕನಕಪುರ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆ ಶವ ಪತ್ತೆ

ಕನಕಪುರ ತಾಲೂಕಿನ ಬೆಟ್ಟೆಗೌಡನಪಾಳ್ಯದ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಪ್ರತಿಭಾ (29) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಇದು ಆಕಸ್ಮಿಕ ಸಾವೇ, ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಅನುಮಾನ ಗಳು ವ್ಯಕ್ತವಾಗಿವೆ. ಹೊರ ವಲಯದಲ್ಲಿರುವ ತೋಟದ ಮನೆಯಲ್ಲಿ ಪ್ರತಿಮಾ ವಾಸವಾಗಿದ್ದರು.

ಎಳನೀರಿಗಾಗಿ ಸ್ನೇಹಿತನ ಮರಹತ್ತಿಸಿ ಬಿದ್ದು ಮೂಳೆ ಮುರಿದಾಗ ಕೆರೆಯಲ್ಲಿ ಮುಳುಗಿಸಿ ಕೊಂದರು

ಮದ್ಯಕ್ಕೆ ಬೆರೆಸಲು ಎಳನೀರಿಗಾಗಿ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಗಂಭೀರ ಏಟಾದ ಬಳಿಕ ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಆಗುವುದೆಂದು  ಕೆರೆಯಲ್ಲಿ ಮುಳುಗಿಸಿ  ಕೊಲೆಗೈದು ಎಸೆದಿರುವ ಭಯಾನಕ ಘಟನೆಯೊಂದು ಮಾಗಡಿಯಲ್ಲಿ ನಡೆದಿದೆ. ರಾಮನಗರದ ಮಾಗಡಿ ತಾಲೂಕಿನ ವಾಜರಹಳ್ಳಿ