ಜಿಲ್ಲಾ ಸುದ್ದಿ
ಜಾತಕದೋಷವೆಂದು ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿ ಅರೆಸ್ಟ್
ಜಾತಕದಲ್ಲಿ ದೊಡ್ಡ ದೋಷವಿದೆ, ಪೂಜೆ ಮಾಡಿ ಸರಿ ಮಾಡುವುದಾಗಿ ಹೇಳಿ ನಂಬಿಸಿ ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿಯನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್ ಅನಾರೋಗ್ಯಕ್ಕೆ ಒಳಗಾದಾಗ ಸ್ನೇಹಿತರ ಮೂಲಕ ಕಲಬುರಗಿಯ ಜ್ಯೋತಿಷಿ ಹೇಮಂತ್ ಭಟ್ ಪರಿಚಯವಾಗಿತ್ತು. ಇದಕ್ಕೂ ಮುನ್ನ ಇಬ್ಬರು ಸ್ನೇಹಿತೆಯರು ಜ್ಯೋತಿಷಿ ಮಾತು ನಂಬಿ ಹೋದಾಗ, ಅವರಿಗೂ ಪೂಜೆ ಮಾಡಿದ್ದ. ನಿನ್ನ ಜಾತಕದಲ್ಲಿ ತುಂಬಾ ದೋಷವಿದೆ, ಪೂಜೆ ಮಾಡಿಸಲೇಬೇಕು.
ತುಮಕೂರು ಗೃಹ ರಕ್ಷಕದಳ ಕಮಾಂಡೆಂಟ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ತುಮಕೂರು ಜಿಲ್ಲಾ ಗೃಹ ರಕ್ಷಕದಳದ ಕಮಾಂಡೆಂಟ್ ರಾಜೇಂದ್ರ ತರಬೇತಿ ಶಿಬಿರದಲ್ಲಿ ತಪ್ಪು ಹೇಳಿಕೊಡುವ ನೆಪದಲ್ಲಿ ಮೈಮುಟ್ಟಿ ಕಿರುಕುಳ ನೀಡಿರುವುದಾಗಿ ಆರೋಪಿಸಿ ಐವರು ಮಹಿಳಾ ಸಿಬ್ಬಂದಿ ಡಿಸಿ, ಮಹಿಳಾ ಆಯೋಗ ಮತ್ತು ಅಗ್ನಿಶಾಮಕದಳ ಐಜಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ದೂರಿನ ಅರ್ಜಿ
ಪಾಕಿಸ್ತಾನಕ್ಕೆ ವೀಳ್ಯದೆಲೆ ರಫ್ತು ಬ್ಯಾನ್ ಮಾಡಿದ ಹೊನ್ನಾವರ ರೈತರು
ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ತಕ್ಕ ಉತ್ತರ ನೀಡಿದೆ. ಇದಾದ ಬಳಿಕ ದೇಶದಲ್ಲಿ ಪಾಕ್ ವಿರುದ್ಧ ಅಭಿಯಾನವೇ ಶುರುವಾಗಿದೆ. ದೇಶದ ಚಿತ್ರರಂಗವು ಪಾಕ್‌ಗೆ ನೆರವಾಗಿರುವ ಟರ್ಕಿಯಲ್ಲಿ ಇನ್ನು ಮುಂದೆ ಶೂಟಿಂಗ್ ನಡೆಸದಿರಲು ನಿರ್ಧರಿಸಿದೆ, ಕರ್ನಾಟಕದ ವಿಜಯಪುರ
ಪುನೀತ್ ಕೆರೆಹಳ್ಳಿಗೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ
ಹಿಂದೂ ಪರ ಹೋರಾಟಗಾರ ಎನ್ನಲಾಗುವ ಪುನೀತ್ ಕೆರೆಹಳ್ಳಿಗೆ ಮೈಸೂರು ಮೂಲದ ವ್ಯಕ್ತಿ ಜೀವ ಬೆದರಿಕೆ ಒಡ್ಡಿರುವುದು ಬಹಿರಂಗಗೊಂಡಿದೆ. ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬ ವ್ಯಕ್ತಿ ಇದ್ರಿಷ್ ಪಾಷ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ
ಪಾಕ್‌ಗೆ ಕ್ಷಿಪಣಿ ನೆರವು: ವಿಜಯಪುರ ರೈತರಿಂದ ಟರ್ಕಿ ಬೈಕಾಟ್ ಅಭಿಯಾನ
ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುವಾಗ ಪಾಕಿಸ್ತಾನಕ್ಕೆ ಕ್ಷಿಪಣಿ ಪೂರೈಸಿ ನೆರವು ನೀಡಿರುವ ಟರ್ಕಿ ವಿರುದ್ಧ ವಿಜಯಪುರದಲ್ಲಿ ಬೈಕಾಟ್ ಟರ್ಕಿ ಅಭಿಯಾನ ನಡೆಯುತ್ತಿದೆ. ಅರ್ಕಿಗೆ ಕೃಷಿ ಉತ್ಪನ್ನ ರಪ್ತು ನಿಷೇಧ ಹೋರಾಟಕ್ಕೆ ವಿಜಯಪುರ ಜಿಲ್ಲೆಯ ರೈತರು ಮುದಾಗಿ, ಜಿಲ್ಲೆಯಿಂದ ಹಣ್ಣು ಮತ್ತು
ಬಿಡದಿ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ನ್ಯಾಯದ ಭರವಸೆ, ಪರಿಹಾರ ಚೆಕ್ ನೀಡಿದ ಡಿಸಿಎಂ
ರಾಮನಗರ ಜಿಲ್ಲೆಯ ಭದ್ರಾಪುರ ಗ್ರಾಮದ ಅಪ್ರಾಪ್ತ ಬಾಲಕಿ ಖುಷಿ ಹತ್ಯೆಯ ವಿಚಾರದಲ್ಲಿ ಅವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ರಾಮನಗರ ಜಿಲ್ಲೆ ಬಿಡದಿಯ ಭದ್ರಾಪುರದ ಖುಷಿ ಎನ್ನುವ
ಡಿಸಿಎಂ ನಿರ್ದೇಶನದಂತೆ ಪರಂಪರೆ ಮುಂದುವರಿಯುವ ಕಾರ್ಯಕ್ರಮವಾಗಿ ಕಾವೇರಿ ಆರತಿ: ಡಾ.ವಿ.ರಾಮ್ ಪ್ರಸಾತ್ ಮನೋಹರ್
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ನಿರ್ದೇಶನದಂತೆ ಕಾಶಿಯಲ್ಲಿ ನಡೆಯುವ ಗಂಗಾ ಆರತಿಯಂತೆ ಮಂಡ್ಯ ಜಿಲ್ಲೆಯ KRS ನಲ್ಲಿ ಕಾವೇರಿ ಆರತಿಯನ್ನು ಶಾಶ್ವತವಾಗಿ ಮುಂದುವರಿಸುವುದರ ಜತೆಗೆ ಅದನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕಾರ್ಯಕ್ರಮವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಕಾವೇರಿ ಆರತಿ ಕುರಿತಂತೆ
ಯಾದಗಿರಿಯಲ್ಲಿ ಸಾಲ ಮರಳಿಸು ಅಂದ ಅಳಿಯನ ಕೊಲೆಗೈದ ಮಾವ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶಾಖಾಪುರ(ಎಸ್.ಕೆ) ಗ್ರಾಮದಲ್ಲಿ ಕೊಟ್ಟ ಸಾಲ ಮರಳಿ ಕೊಡುವಂತೆ ಕೇಳಿದ ಅಳಿಯನನ್ನು ಆತನ ಸೋದರ ಮಾವ ಕೊಲೆ ಮಾಡಿರುವ ಘಟನೆ ನಡೆದಿದೆ. ಲಕ್ಷ್ಮಣ ಚಿಗರಿಹಾಳ (25) ಹತ್ಯೆಗೀಡಾದ ಯುವಬಕ. ಆತನ ಸೋದರ ಮಾವ ಮಾನಪ್ಪ ಎಂಬಾತ ಕೊಲೆ
ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು: ಪ್ರಿಯಾಂಕ್ ಖರ್ಗೆ
ಏಪ್ರಿಲ್ 22ರಂದು ಪೆಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಪ್ರಧಾನಿ ಮೋದಿ ಬಿಹಾರ ಚುನಾವಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಜಮ್ಮು ಕಾಶ್ಮೀರ, ಆದಂಪುರ ಸೇರಿದಂತೆ ಎಲ್ಲೆಡೆ ಬ್ಲಾಕ್‌ಔಟ್ ಆಗಿದ್ದಾಗ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು ಎಂದು ಐಟಿ-ಬಿಟಿ ಸಚಿವ
ಕೋಲಾರ ಜಿಲ್ಲೆಗೂ ವಿಶೇಷ ಪ್ಯಾಕೇಜ್ ಕೊಡಿ : ಆಮ್ ಆದ್ಮಿ ಪಾರ್ಟಿ ಒತ್ತಾಯ
ಕೋಲಾರ: ರಾಜ್ಯ ಸರ್ಕಾರ ಹಳೇ ಮೈಸೂರು ಭಾಗಕ್ಕೆ ಘೋಷಣೆ ಮಾಡಿದಂತೆ ಹಿಂದುಳಿದ ಕೋಲಾರ ಜಿಲ್ಲೆಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಚಾಮರಾಜನಗರ




