Menu

ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರಿಗೆ 5ನೇ ಸ್ಥಾನ!

ಮೈಸೂರು: ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ ಐದನೇ ಸ್ಥಾನ, ಚಾಮರಾಜನಗರ ಒಂದನೇ ಸ್ಥಾನದಲ್ಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ತಿಂಗಳು ತಾಲ್ಲೂಕು ಸಮಿತಿ ಸಭೆ ನಡೆಸಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಚಾಮರಾಜನಗರ ವೀಕ್ಷಣೆ ವೇಳೆ ಸೋಲಿಗರ ಕಾಲೋನಿಗೆ ಗ್ಯಾರಂಟಿ ಅನುಷ್ಠಾನ ಆಗಿರಲಿಲ್ಲ. ಬಳಿಕ ಎಲ್ಲರಿಗೂ

ಮದುವೆ ನಿರಾಕರಿಸಿದ ಪ್ರಿಯಕರ: ಪ್ರೇಯಸಿ ಆತ್ಮಹತ್ಯೆ, ನೊಂದ ತಾಯಿ ಕೂಡ ಆತ್ಮಹತ್ಯೆ!

ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡರೆ, ಮಗಳ ಸಾವಿನ ದುಃಖ ಭರಿಸಲಾಗದೆ 20 ದಿನದ ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ. ಹೆಬ್ಬಕವಾಡಿ ಗ್ರಾಮದ ವಿಜಯಲಕ್ಷ್ಮಿ (21) ಹಾಗೂ ತಾಯಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ

ಪಕ್ಕದ ಮನೆಯ ಸ್ನೇಹಿತೆಯನ್ನೇ ಕೊಲೆಗೈದು ಚಿನ್ನ ಎಗರಿಸಿದ ಮಹಿಳೆ

ಮೈಸೂರಿನ ಕೆಸಿ.ಬಡಾವಣೆಯಲ್ಲಿ ಚಿನ್ನದ ಸರಕ್ಕಾಗಿ ತನ್ನ ಸ್ನೇಹಿತೆಯನ್ನೇ ಮಹಿಳೆ ಕೊಂದ ಘಟನೆ ಮಾ.5 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಸಿ ಬಡಾವಣೆಯ ಸುಲೋಚನಾ (62) ಕೊಲೆಯಾದವರು. ಅದೇ ಬಡವಾಣೆಯ ಶಕುಂತಲಾ (42) ಕೊಲೆ ಆರೋಪಿ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ

ಜಮಖಂಡಿಯಲ್ಲಿ ಗರ್ಭದಲ್ಲೇ ಶಿಶು ಸಾವು: ವೈದ್ಯರ ನಿರ್ಲಕ್ಷ್ಯವೆಂದು ಕುಟುಂಬ ಆಕ್ರೋಶ

ಬಾಗಲಕೋಟೆಯ ಜಮಖಂಡಿಯಲ್ಲಿರುವ ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭದಲ್ಲೇ ಶಿಶು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ಬೇಜವಾಬ್ದಾರಿಯೇ ಕಾರಣವೆಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಜಮಖಂಡಿಯ ಚೌಡಯ್ಯ ನಗರದ ನಿವಾಸಿ.ಶಿವಪ್ಪ ರೇವಣಸಿದ್ದಪ್ಪ ಬೋವಿ ಅವರ ಪತ್ನಿ ಇಂದ್ರಾ ಅವರ ಗರ್ಭದಲ್ಲೇ ಮಗು ಮೃತಪಟ್ಟಿದೆ. ಇಂದ್ರಾ ಅವರನ್ನು

ತುಮಕೂರು ಕೆಂಪಮ್ಮ ದೇಗುಲ ಬಳಿ ವಾಮಾಚಾರ, ಬಾಗಿಲಿಗೆ ತಗುಲಿದ ಬೆಂಕಿ

ತುಮಕೂರಿನ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರವಲಯದ ತೋಪಿನಲ್ಲಿ ಇರುವ ಶಕ್ತಿ ದೇವತೆ ಕೆಂಪಮ್ಮ ದೇವಿ ದೇವಾಲಯದ ಎದುರು ದುಷ್ಕರ್ಮಿಗಳು ವಾಮಾಚಾರ ಎಸಗಿರುವುದು ಪತ್ತೆಯಾಗಿದೆ. ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬೆಂಕಿಯು ದೇಗುಲದ ಬಾಗಿಲನ್ನು ಸಂಪೂರ್ಣ ಆವರಿಸಿ

ಸಂತಾನ ಕೋರಿ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡಿಸಿದ್ರಾ ಕತ್ರಿನಾ ಕೈಫ್‌

ನಟಿ ಕತ್ರಿನಾ ಕೈಫ್‌ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದಿ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಯಾಗಶಾಲೆಯಲ್ಲಿ ಸರ್ಪ ಸಂಸ್ಕಾರ ಪೂಜೆ ನೆರವೇರಿಸಲು ಕತ್ರಿನಾ ಆಗಮಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮದುವೆಯಾಗದವರು, ಮಕ್ಕಳಾಗದವರು ಹೆಚ್ಚಾಗಿ ಭೇಟಿ ನೀಡಿ ಪ್ರಾರ್ಥಿಸುತ್ತಾರೆ.

ಮರಾಠಿಯಲ್ಲಿ ಪಹಣಿ ಕೊಡಲಿಲ್ಲವೆಂದು ಕನ್ನಡಿಗ ಕಾರ್ಯದರ್ಶಿ ಮೇಲೆ ಹಲ್ಲೆ

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮರಾಠಿಯಲ್ಲಿ ಪಹಣಿ ಕೊಡಲಿಲ್ಲ ಹಾಗೂ ಕಾನೂನು ಬಾಹಿರ ಕೃತ್ಯಕ್ಕೆ ಸಹಕಾರ ನೀಡಲಿಲ್ಲ ಎಂದು ಕನ್ನಡಿಗ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂಬೇವಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಾಗಪ್ಪ ಎಂಬವರ ಮೇಲೆ ಬೆಳಗಾವಿ ತಾಲೂಕಿನ ಗೋಜಗಾ ಸಮೀಪ

ಕೌಟುಂಬಿಕ ಕಲಹದಿಂದ ನೊಂದು ಹಾಸನದಲ್ಲಿ ತಾಯಿ ಮಗ ಆತ್ಮಹತ್ಯೆ

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ನೊಂದು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಂತಿ (60), ಭರತ್ (35) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗ. ಭರತ್ ಎಂಟು ತಿಂಗಳ ಹಿಂದೆ ಅರಸೀಕೆರೆ ತಾಲೂಕು ಬಾಗೂರನಹಳ್ಳಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರು.

133 ಅಕ್ಕಿಮೇಲೆ ರಾಷ್ಟ್ರಗೀತೆ ಬರೆದ ಐಶ್ವರ್ಯ: ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಸೇರ್ಪಡೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹುಲಿಗುಡ್ಡ ಗ್ರಾಮದ ಯುವತಿ ಐಶ್ವರ್ಯ 32 ನಿಮಿಷ 20 ಸೆಕೆಂಡ್ ಗಳಲ್ಲಿ 133 ಅಕ್ಕಿಗಳ ಮೇಲೆ ಕನ್ನಡದಲ್ಲಿ ರಾಷ್ಟ್ರಗೀತೆ ಬರೆದು ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿ  ದಾಖಲೆ ನಿರ್ಮಾಣ ಮಾಡಿದ್ದಾರೆ. ಪಟ್ಟಣದ ಸಂಜೀವ್ ಬಿ.ಇಡಿ

ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನಾಗಿಸಲು ಚಿಂತನೆ: ಸಚಿವ ಬೈರತಿ ಸುರೇಶ್‌

ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸಿ ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ. ಎಸ್.‌ ಸುರೇಶ (ಬೈರತಿ) ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಇಂದು ಸಭೆ ಜರುಗಿತು. ಮೈಸೂರು ಮಹಾನಗರ ಪಾಲಿಕೆಯನ್ನು