Menu

ದಾವಣಗೆರೆಯ ಸರ್ವತೋಮುಖ ಬೆಳವಣಿಗೆಗೆ ಶ್ಯಾಮನೂರು ಶಿವಶಂಕರಪ್ಪ ಕಾರಣ: ಸದನದಲ್ಲಿ ಸಂತಾಪ ಸಲ್ಲಿಸಿದ ಸಿಎಂ

ದಾವಣಗೆರೆ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಶ್ಯಾಮನೂರು ಶಿವಶಂಕರಪ್ಪ ಅವರು ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ  ವಿಧಾನಸಭೆಯಲ್ಲಿ  ಮಂಡಿಸಲಾದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಅವರು ಮಾತನಾಡಿದರು. ಶ್ಯಾಮನೂರು ಶಿವಶಂಕರಪ್ಪ ಅವರು ತಮ್ಮ 63 ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾದವರು. ಒಮ್ಮೆ ಸಂಸತ್ ಸದಸ್ಯರಾಗಿದ್ದರು. ದೀರ್ಘ

ಮೈ ಕೊರೆಯುವ ಚಳಿಗೆ ಬೀದರ್ ಥಂಡಾ, ಜನವರಿಯಲ್ಲಿ 5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ?

ಮೈಕೊರೆಯುವ ಚಳಿಗೆ ಬೀದರ್ ಜಿಲ್ಲೆಯ ಜನರು ತತ್ತರಿಸಿದ್ದಾರೆ, ಇಲ್ಲಿ ಕನಿಷ್ಠ ತಾಪಮಾನ ತೀವ್ರ ಕುಸಿತವಾಗಿದ್ದು, 7.4 ಡಿಗ್ರಿ ಸೆಲ್ಸಿಯಸ್‌  ದಾಖಲಾಗಿದ್ದು ಜನ ಹೈರಾಣಾಗಿದ್ದಾರೆ. ಜನವರಿ ತಿಂಗಳಲ್ಲಿ ಇನ್ನಷ್ಟು ಚಳಿ ಇರಲಿದ್ದು, 5 ಡಿಗ್ರಿ ವರೆಗೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ

ತುರುವೇಕೆರೆ ದೇಗುಲ ಹುಂಡಿ ಹಣ, ದೇವರ ಸರ ಕಳವು

ತುರುವೇಕೆರೆ ತಾಲೂಕಿನ ಅರೆಹಳ್ಳಿಯಲ್ಲಿರುವ ಬಸವೇಶ್ವರ ಸ್ವಾಮಿಯ ಕತ್ತು ಅಲಂಕರಿಸಿದ್ದ 500 ಗ್ರಾಂ ತೂಕದ ಬೆಳ್ಳಿಯ ಸರ ಮತ್ತು ದೇವಾಲಯದ ಹುಂಡಿಯಲ್ಲಿದ್ದ 10 ಸಾವಿರರೂಪಾಯಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅರೆಹಳ್ಳಿ ಗ್ರಾಮ ದೇವರಾಗಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿರುವ ರುದ್ರೇಶ್ ಬೆಳಗ್ಗೆ ಪೂಜೆಗಾಗಿ

ಕಾಂಗ್ರೆಸ್‌ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆಯಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ

ಕಾಂಗ್ರೆಸ್​​ನ ಹಿರಿಯ ನಾಯಕ, ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಭಾನುವಾರ ನಿಧನರಾದರು. ಅವರಿಗೆ 94 ವರ್ಷ ಆಗಿತ್ತು. ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಂತ್ಯಸಂಸ್ಕಾರ ದಾವಣಗೆರೆಯಲ್ಲಿ ಇಂದು ಸಂಜೆ ನಡೆಯಲಿದೆ. ಅವರ ನಿಧನ ಪ್ರಯುಕ್ತ ಗೌರವಾರ್ಥವಾಗಿ ಡಿ.

ರಾಮನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ

ರಾಮನಗರದ ಹಾರೋಹಳ್ಳಿ ತಾಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ರೈತ ಪುಟ್ಟಮಾದೇಗೌಡ (48) ಆನೆ ದಾಳಿಗೆ ಬಲಿಯಾದವರು. ಮುಂಜಾನೆ ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಮಾದೇಗೌಡ ಸ್ಥಳದಲ್ಲೇ ಅಸು ನೀಗಿದ್ದಾರೆ. ಬನ್ನೇರುಘಟ್ಟ ಅರಣ್ಯ

ಬೇರೆ ಯುವತಿ ಜೊತೆ ಮದುವೆ: ಮಂಟಪಕ್ಕೆ ಬಂದು ತನ್ನನ್ನೇ ಮದುವೆಯಾಗುವಂತೆ ಹಠ ಹಿಡಿದ ಪ್ರೇಯಸಿ

ಚಿಕ್ಕಮಗಳೂರಿನ ದೊಡ್ಡೇಗೌಡ ಕನ್ವೆನ್ಷನ್‌ ಹಾಲ್‌ನಲ್ಲಿ ಯುವಕ ಮದುವೆಯಾಗುತ್ತಿದ್ದಾಗ ಮಂಟಪಕ್ಕೆ ಬಂದ ಆತನ ಪ್ರೇಯಸಿ, ನಾನು ಇವನನ್ನೇ ಮದುವೆಯಾಗಬೇಕು.ಮದುವೆ ಆಗುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ, ವಿಷ ಕುಡಿದು ಸಾಯುತ್ತೇನೆ ಎಂದು ಗಲಾಟೆ ಮಾಡಿದ್ದಾಳೆ. ಈತ 10 ವರ್ಷ ಪ್ರೀತಿಸಿ ಮೋಸ ಮಾಡಿದ್ದಾನೆಂದು ಯುವತಿ

ಅಕ್ರಮ ಸಂಬಂಧ: ದೊಡ್ಡಬಳ್ಳಾಪುರದಲ್ಲಿ ಯುವಕನ ಕೊಲೆಗೆ ಯತ್ನ

ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ಅಕ್ರಮ‌ ಸಂಬಂಧ ಹಿನ್ನೆಲೆ‌ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಚ್ಚಿ ಕೊಲೆ ಮಾಡಲು ಯತ್ನಿಸಲಾಗಿದೆ. ಹಲ್ಲೆಗೊಳಗಾದ ಕಾರ್ತಿಕ್​​ (26) ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಹಲ್ಲೆ ವೇಳೆ ತಡೆಯಲು ಹೋದ ಯುವಕನ

ರಾಜ್ಯ ಪ್ರಶಸ್ತಿ ಚಿನ್ನದ ಪದಕ ಸೇರಿ ಕಲಾವಿದೆ ಮನೆಯಿಂದ ಚಿನ್ನ ಕದ್ದವರ ಬಂಧನ

ಚಿತ್ರನಟಿ, ರಂಗಭೂಮಿ ಕಲಾವಿದೆಯ ರಾಜ್ಯ ಪ್ರಶಸ್ತಿ ಚಿನ್ನದ ಪದಕ ಸೇರಿ 90 ಗ್ರಾಂ ಚಿನ್ನ ದೋಚಿದ್ದ ಕಳ್ಳರನ್ನು ತಿಪಟೂರು ನಗರ ಪೊಲೀಸರು ಬಂಧಿಸಿದ್ದಾರೆ. ಶಂಕರ್ (26), ಗುರುರಾಜು ( 33), ಮನೋಜ್ ( 18) ಬಂಧಿತರು. ತಿಪಟೂರಿನ ವಿಜಯನಗರದಲ್ಲಿ ವಾಸವಿದ್ದ ನಟಿ, ರಂಗಭೂಮಿ

ಯತೀಂದ್ರ ಸಿಎಂ ಬದಲಾವಣೆ ಹೇಳಿಕೆ ಕೊಡಬಾರದಿತ್ತು: ಶಾಸಕ ನಂಜೇಗೌಡ

ಯತೀಂದ್ರ ಸಿದ್ದರಾಮಯ್ಯ ಆರಾಮವಾಗಿ ಇರಬೇಕು ಅಷ್ಟೇ,  ಅಧಿಕಾರ ಹಂಚಿಕೆ ವಿಚಾರವಾಗಿ ಇಂತಹ ಹೇಳಿಕೆ ಕೊಡಬಾರದಿತ್ತು. ಸಿದ್ದರಾಮಯ್ಯ ರಾಜ್ಯದ ನಾಯಕ, ಅವಕಾಶ ಸಿಕ್ಕಿದರೆ ರಾಷ್ಟ್ರೀಯ ನಾಯಕರೂ ಆಗಬಹುದು ಎಂದು ಶಾಸಕ ಕೆವೈ ನಂಜೇಗೌಡ ಹೇಳಿದರು ಕೋಲಾರದ   ಬೆಳಗಾನಹಳ್ಳಿಯಲ್ಲಿರುವ ಹಾಲು ಒಕ್ಕೂಟದ ಕಚೇರಿಯಲ್ಲಿ ಮಾತನಾಡಿದ

ಸಕಲೇಶಪುರದಲ್ಲಿ ಆಸ್ತಿಗಾಗಿ ಮಹಿಳೆಯ ಡೆತ್‌ ಸರ್ಟಿಫಿಕೇಟ್‌ ಮಾಡಿಸಿದ ವಂಚಕ

ಸಕಲೇಶಪುರ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ವಯಸ್ಸಾಗಿರುವ ಮಹಿಳೆ ಬದುಕಿರುವಾಗಲೇ ವ್ಯಕ್ತಿಯೊಬ್ಬ ಮೋಸದಿಂದ ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ ಲಪಟಾಯಿಸಿದ ಆರೋಪ ಕೇಳಿ ಬಂದಿದೆ. ‌ ಗ್ರಾಮದ ಮಹಿಳೆ ಸಿದ್ದಮ್ಮ ಅವರ ಹೆಸರಿನಲ್ಲಿ ಸರ್ವೆ ನಂ.68 ರಲ್ಲಿ 1 ಎಕರೆ 20 ಗುಂಟೆ