Menu

ದೇಶದಲ್ಲಿ ಮೊದಲ ಬಾರಿಗೆ 182 ಕೋಟಿ ಮೌಲ್ಯದ ಜಿಹಾದಿ ಡ್ರಗ್‌ ವಶ

amit shah

ಭಾರತದಲ್ಲಿ ಮೊದಲ ಬಾರಿಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) 182 ಕೋಟಿ ಮೌಲ್ಯದ ಕ್ಯಾಪ್ಟಗನ್ ಡ್ರಗ್‌ ವಶಪಡಿಸಿಕೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ಡ್ರಗ್ಸ್ ಅನ್ನು ಪಶ್ಚಿಮ ಏಷ್ಯಾಕ್ಕೆ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಮುಂದ್ರಾ ಬಂದರು ಮತ್ತು ದೆಹಲಿಯ ನೆಬ್ ಸರಾಯ್‌ನಿಂದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಿರಿಯನ್ ಪ್ರಜೆ ಆ ಡ್ರಗ್ಸ್ ಅನ್ನು ಚಹಾ ಎಲೆಗಳ ಪೆಟ್ಟಿಗೆಯಲ್ಲಿ ಮರೆಮಾಡಿದ್ದ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಶಾ ತಿಳಿಸಿದ್ದಾರೆ.

‘ಆಪರೇಷನ್ ರೇಜ್‌ಪಿಲ್’ ಮೂಲಕ ನಮ್ಮ ಏಜೆನ್ಸಿಗಳು 182 ಕೋಟಿ ರೂ. ಮೌಲ್ಯದ ಕ್ಯಾಪ್ಟಗನ್ ಡ್ರಗ್‌ ಅನ್ನು ಮೊದಲ ಬಾರಿಗೆ ವಶಪಡಿಸಿಕೊಂಡಿವೆ. ಮಧ್ಯಪ್ರಾಚ್ಯಕ್ಕೆ ಸಾಗಿಸುತ್ತಿದ್ದ ಈ ಡ್ರಗ್ಸ್​ ಜಾಲವನ್ನು ಭೇದಿಸಿರುವುದು ಮತ್ತು ದು ಮತ್ತು ವಿದೇಶಿ ಪ್ರಜೆಯ ಬಂಧನವು ಮಾದಕವಸ್ತುಗಳ ವಿರುದ್ಧದ ಭಾರತದ ಶೂನ್ಯ ಸಹಿಷ್ಣುತೆಗೆ ನಮ್ಮ ಬದ್ಧತೆಯ ಉದಾಹರಣೆ. ಭಾರತಕ್ಕೆ ಪ್ರವೇಶಿಸುವ ಅಥವಾ ನಮ್ಮ ಪ್ರದೇಶವನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಂಡು ಸಾಗಾಟವಾಗುವ ಪ್ರತಿ ಗ್ರಾಂ ಮಾದಕವಸ್ತುಗಳನ್ನು ನಾವು ತಡೆಯುತ್ತೇವೆ. ಎನ್‌ಸಿಬಿಯ ಧೈರ್ಯಕ್ಕೆ ನಮ್ಮ ಧನ್ಯವಾದಗಳು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕ್ಯಾಪ್ಟಗನ್ ಹೆಚ್ಚು ವ್ಯಸನಕಾರಿಯಾದ ಸಿಂಥೆಟಿಕ್ ಆಂಫೆಟಮೈನ್ ಮಾದರಿಯ ಉತ್ತೇಜಕವಾಗಿದೆ. ಇದಕ್ಕೆ ಜಿಹಾದಿ ಡ್ರಗ್ ಎಂದೂ ಹೇಳಲಾಗುತ್ತದೆ. ಐಸಿಸ್​​ನಂತಹ ಉಗ್ರಗಾಮಿ ಗುಂಪುಗಳು ದಾಳಿಯ ವೇಳೆ ಭಯ ಕಡಿಮೆ ಮಾಡಿಕೊಳ್ಳಲು, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಡ್ರಗ್ಸ್ ಬಳಸುತ್ತಾರೆ ಎಂದು ವರದಿಯಾಗಿದೆ.

ಭಾರತವು ಕನಿಷ್ಠ 200 ಪ್ರಮುಖ ಮತ್ತು ಸಣ್ಣ ಬಂದರುಗಳನ್ನು ಹೊಂದಿದೆ. ಅವುಗಳಲ್ಲಿ 65 ಮಾತ್ರ ಸರಕು ಸಾಗಣೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. 13 ಪ್ರಮುಖ ಬಂದರುಗಳು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಪಡೆ ಶೀಘ್ರದಲ್ಲೇ 67 ಹೆಚ್ಚುವರಿ ಬಂದರುಗಳಲ್ಲಿ ಭದ್ರತೆಯನ್ನು ವಹಿಸಿಕೊಳ್ಳಲಿವೆ.

Related Posts

Leave a Reply

Your email address will not be published. Required fields are marked *