ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಏಕಾಏಕಿ ಭೀಕರ ಪ್ರವಾಹವುಂಟಾಗಿ 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಈ ಹಠಾತ್ ಪ್ರವಾಹವು ಬ್ರೈಟ್ ಏಂಜಲ್ ಕ್ಯಾನ್ಯನ್ ಮತ್ತು ಫ್ಯಾಂಟಮ್ ರಾಚ್ ಪ್ರದೇಶಕ್ಕೆ ಅಪ್ಪಳಿಸಿದೆ. ದೊಡ್ಡ ಬಂಡೆಗಳು ಮತ್ತು ಇತರ ಭಗ್ನಾವಶೇಷಗಳು ಪ್ರವಾಹದೊಂದಿಗೆ ಕೊಲೊರಾಡೊ ನದಿಗೆ ನುಗ್ಗಿದೆ, ದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಪಾದಚಾರಿ ಸೇತುವೆಗಳು ನಾಶವಾಗಿರುವುದಾಗಿ ರಾಷ್ಟ್ರೀಯ ಉದ್ಯಾನವನ ಸೇವೆ ತಿಳಿಸಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರನ್ನು ಸ್ಥಳಾಂತರಿಸು ಕಾರ್ಯಾಚರಣೆ ನಡೆದಿದೆ. ನಾಪತ್ತೆಯಾದವರ ಬಗ್ಗೆ ಮತ್ತು ಆ ಪ್ರದೇಶದಲ್ಲಿದ್ದ ಪಾದಯಾತ್ರಿಕರ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಸ್ಥಳೀಯರಿಗೆ ತಿಳಿಸಲಾಗಿದೆ.


