Menu

ಫಿಫಾ ವಿಶ್ವಕಪ್ ಪಂದ್ಯ: ಬೆಂಗಳೂರಿನಲ್ಲಿ ಅಭಿಮಾನಿಗಳಿಗೆ ರಾತ್ರಿ 3.30ರವರೆಗೆ ಹೊಟೇಲ್, ರೆಸ್ಟೋರೆಂಟ್ ಸೇವೆ

ಬೆಂಗಳೂರಿನ ಫುಟ್ಬಾಲ್ ಪ್ರಿಯರಿಗಾಗಿ ರಾಜ್ಯ  ಸರ್ಕಾರ ಗುಡ್ ನ್ಯೂಸ್  ನೀಡಿದೆ.  ಫಿಫಾ ವಿಶ್ವಕಪ್ ಪಂದ್ಯಗಳ ಹಿನ್ನೆಲೆ ಪಂದ್ಯ ನಡೆಯುವ ಮೂರು ದಿನ ಮಧ್ಯರಾತ್ರಿ 3.30ರವರೆಗೆ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಆಹಾರ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಭಾರತ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ ಮನವಿ ಹಿನ್ನೆಲೆಯಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ ಜು. 14, 15 ಹಾಗೂ 19ರಂದು ಈ ಆದೇಶ ಅನ್ವಯವಾಗುವಂತೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.  ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ತಡರಾತ್ರಿ ಪಂದ್ಯ ಪ್ರದರ್ಶನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.

2026ರ ಫಿಫಾ ವಿಶ್ವಕಪ್ ಸೆಮಿಫೈನಲ್​ ಅಖಾಡ ಸಜ್ಜಾಗಿದೆ. 48 ತಂಡಗಳೊಂದಿಗೆ ಪ್ರಾರಂಭವಾದ ಪಂದ್ಯ ನಾಲ್ಕು ತಂಡಗಳಿಗೆ ಇಳಿದಿದೆ. ಈ ಮೆಗಾ ಟೂರ್ನಮೆಂಟ್‌ನ ಫೈನಲ್ ಪಂದ್ಯವು ಜುಲೈ 19 ರಂದು ಅಮೆರಿಕದ ನ್ಯೂಯಾರ್ಕ್‌ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈವರೆಗಿನ ಪಂದ್ಯಗಳಲ್ಲಿ ಭಾರತದಲ್ಲಿ ಉಚಿತ ನೇರಪ್ರಸಾರಕ್ಕೆ ಅವಕಾಶ ಇರಲಿಲ್ಲ. ಈಗ ಸೆಮೀಸ್​ ಮತ್ತು ಫೈನಲ್​ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವಿದೆ. ಡಿಡಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯಗಳ ನೇರ ಪ್ರಸಾರ ಸಿಗಲಿದೆ. ಪ್ರೇಕ್ಷಕರು ಚಂದಾದಾರಿಕೆ ಶುಲ್ಕ ಪಾವತಿಸದೆ ವೀಕ್ಷಿಸಬಹುದು.

Related Posts

Leave a Reply

Your email address will not be published. Required fields are marked *