Sunday, September 27, 2026
Menu

ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್‌ ದಿಶಾ ಸಾಲ್ಯಾನ್‌ ಸಾವು: ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್‌ ಆದೇಶ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಅವರ ಮಾಜಿ ಮ್ಯಾನೇಜರ್‌ ಆಗಿದ್ದ ದಿಶಾ ಸಾಲ್ಯಾನ್‌ ೨೦೨೦ರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್‌ ಆದೇಶಿಸಿದೆ. ದಿಶಾ ಅವರದು ಆತ್ಮಹತ್ಯೆಯಲ್ಲ, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ತಂದೆ ಸತೀಶ್ ಸಾಲ್ಯಾನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಎಫ್‌ಐಆರ್‌ ದಾಖಲಿಸಿಕೊಂಡು ಸಿಬಿಐನ ಅನುಭವಿ ಅಧಿಕಾರಿಯಿಂದ ತನಿಖೆ ನಡೆಸುವಂತೆ ಆದೇಶಿಸಿದೆ. ತನಿಖೆ ಮುಗಿಯುವವರೆಗೂ ಯಾರನ್ನೂ ಆರೋಪಿ ಎಂದು ಉಲ್ಲೇಖಿಸದೆ ಘಟನೆಯ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಎಂಟು ಮಕ್ಕಳು ಸೇರಿ 11 ಜನ ಸಾವು

ಉತ್ತರಪ್ರದೇಶದ ಪ್ರಯಾಗ್‌ರಾಜ್‌ ಮತ್ತು ಕೌಶಂಬಿ ಗಡಿ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.  ದುರಂತಕ್ಕೆ ಬಲಿಯಾದವರಲ್ಲಿ ಎಂಟು ಮಕ್ಕಳೂ ಸೇರಿದ್ದಾರೆ. ಕಾರ್ಖಾನೆಯ ಸಮೀಪವಿರುವ ಮನೆಗಳಲ್ಲಿ ವಾಸವಿದ್ದ ಮಕ್ಕಳು ಸ್ಫೋಟದಲ್ಲಿ ಅಸು ನೀಗಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆ

ಅಮೆರಿಕದಲ್ಲಿ ಹಠಾತ್‌ ಪ್ರವಾಹ: ಒಂದು ಸಾವು, 20 ಕ್ಕೂ ಹೆಚ್ಚು ಮಂದಿ ನಾಪತ್ತೆ

ಅಮೆರಿಕದ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಏಕಾಏಕಿ ಭೀಕರ ಪ್ರವಾಹವುಂಟಾಗಿ 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈ ಹಠಾತ್‌ ಪ್ರವಾಹವು ಬ್ರೈಟ್‌ ಏಂಜಲ್‌ ಕ್ಯಾನ್ಯನ್‌ ಮತ್ತು ಫ್ಯಾಂಟಮ್‌ ರಾಚ್‌ ಪ್ರದೇಶಕ್ಕೆ ಅಪ್ಪಳಿಸಿದೆ. ದೊಡ್ಡ ಬಂಡೆಗಳು ಮತ್ತು ಇತರ

ನೇಪಾಳ ಪ್ರವಾಹ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್‌ ಚೀಫ್‌ ನಾಪತ್ತೆ

ನೇಪಾಳವನ್ನು ಕಾಡಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಇನ್ಫೊಸಿಸ್‌ ಪಬ್ಲಿಕ್‌ ಸರ್ವಿಸಸ್‌ನ ಮುಖ್ಯಸ್ಥ ಲ್ಯಾಕ್ಸ್‌ ಗೋಪಿ ಸೆಟ್ಟಿ ಎಂಬವರು ನಾಪತ್ತೆಯಾಗಿದ್ದಾರೆ, ಸಂಪರ್ಕಕ್ಕೆ ಸಿಗುತ್ತಿಲ್ಲ  ಎಂದು ಇನ್ಫೊಸಿಸ್‌ ಹೇಳಿದೆ. ಐಟಿ ಸೇವಾ ಸಂಸ್ಥೆ ಇನ್ಫೊಸಿಸ್‌ನ ಅಂಗ ಸಂಸ್ಥೆ ಇನ್ಫೊಸಿಸ್‌ ಪಬ್ಲಿಕ್‌ ಸರ್ವಿಸಸ್‌ ಅಮೆರಿಕ

ಬೆಂಗಳೂರಿನ ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ ಬಲಿ

ಮಧ್ಯಪ್ರದೇಶದ ರಾಜ್‌ಘಡದ ಬಿಯೋರಾ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ. ಬಸ್‌ ಸೇತುವೆಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ, ಅಪಘಾತದಲ್ಲಿ ಹಲವರಿಗೆ ಗಂಭೀರ ಗಾಯವಾಗಿದ್ದು, ಒಬ್ಬ ಪೊಲೀಸ್​​ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ.

ನೇಪಾಳದಲ್ಲಿ ಮತ್ತೊಂದು ಪ್ರವಾಹದ ಆತಂಕ

ನೇಪಾಳ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಈಗಾಗಲೇ ನಲುಗಿದ್ದು, ಮತ್ತೊಂದು ಪ್ರವಾಹದ ಅಪಾಯ ಎದುರಾಗಿದೆ. ಭೋಟೆ ಕೋಶಿ ನದಿಯ ಮೂಲದ ಸಮೀಪ ಮತ್ತೊಂದು ತಡೆ ಜಲಾಶಯ ನಿರ್ಮಾಣ ಆಗಿರುವುದರಿಂದ ಕೆಳ ಭಾಗದಲ್ಲಿ ಭಾಗದಲ್ಲಿ ಪ್ರವಾಹದ ಅಪಾಯ ಎದುರಾಗಿದೆ. ಈ ತಡೆ ಜಲಾಶಯ

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ರಾಜ್ಯದ ಪೈಲಟ್‌ ಸೇರಿ ಇಬ್ಬರ ಸಾವು

ಕಾನ್ಪುರ ಗಂಗಾನದಿ ದಡದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ಕರ್ನಾಟಕ ಮೂಲದ ಪೈಲಟ್‌ ಸೇರಿ ಇಬ್ಬರು ಮೃತಪಟ್ಟಿರುವುದಾಗಿ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. ಗಾರ್ಗ್ ಏವಿಯೇಷನ್‌ಗೆ ಸೇರಿದ್ದ ಟೆಕ್ನಮ್ ವಿಮಾನವು ಗುರುವಾರ ಬೆಳಗ್ಗೆ 11.30ಕ್ಕೆ ಟೇಕ್ ಆಫ್ ಆಗಿ 20

ನೇಪಾಳ ಪ್ರವಾಹ: ಸಿಲುಕಿರುವ ಕನ್ನಡಿಗರಿಗೆ ಸಿಎಂ ಡಿಕೆ ಶಿವಕುಮಾರ್ ಅಭಯ

ಧೈರ್ಯವಾಗಿರಿ. ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ ಹೊರ ಬರುವ ಪ್ರಯತ್ನ ಮಾಡುವುದು ಬೇಡ. ನಿಮ್ಮ ಜೊತೆ ನಮ್ಮ ಸರ್ಕಾರವಿದೆ. ನಿಮ್ಮ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರಿಗೆ ಧೈರ್ಯ ತುಂಬಿದರು. ನವದೆಹಲಿಯ

ನೇಪಾಳ ಪ್ರವಾಹ: ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿ ಪ್ರಧಾನಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ನೇಪಾಳ ಪ್ರವಾಹದಲ್ಲಿ ಕರ್ನಾಟಕ ಮಾತ್ರವಲ್ಲದೆ  ದೇಶದ ಸಾಕಷ್ಟು ಜನ ಸಿಲುಕಿದ್ದಾರೆ. ನೂರಾರು ಕೊಚ್ಚಿಕೊಂಡು ಹೋಗಿದ್ದಾರೆ,  ದುರಂತದಲ್ಲಿ ಮೃತಪಟ್ಟವರಿಗೆ  ಶ್ರದ್ಧಾಂಜಲಿ ಅರ್ಪಿಸುತ್ತ್ತೆತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಎಷ್ಟು ಜನ

ನೇಪಾಳ ಪ್ರವಾಹ: ಇಶಾ ಫೌಂಡೇಷನ್‌ನ 77 ಯಾತ್ರಿಗಳು ನಾಪತ್ತೆ

ನೇಪಾಳದಲ್ಲಿ ಬುಧವಾರ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಜಗ್ಗಿ ವಾಸುದೇವ್‌ ನಡೆಸುತ್ತಿರುವ ಇಶಾ ಫೌಂಡೇಷನ್‌ನ ೭೭ ಯಾತ್ರಿಗಳು ನಾಪತ್ತೆಯಾಗಿದ್ದಾರೆ. ಟಿಬೆಟ್‌ ಮಾನಸ ಕೈಲಾಸ ಸರೋವರ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ಯಾತ್ರಿಗಳ ತಂಡವು ವಲಸೆ ಕಚೇರಿಯಲ್ಲಿದ್ದಾಗ ಈ ದುರಂತ ಸಂಭವಿಸಿರುವುದಾಗಿ ಜಗ್ಗಿ ವಾಸುದೇವ್‌