Monday, September 28, 2026
Menu

ಮನೆಯಲ್ಲಿ ಸಂಗ್ರಹಿಸಿದ್ದ ಸ್ಫೋಟಕ ಸಿಡಿದು ನಾಲ್ವರ ಸಾವು

ಬಾಡಿಗೆ ಮನೆಯಲ್ಲಿ ಇರಿಸಲಾಗಿದ್ದ ಸ್ಫೋಟಕಗಳು ಸಿಡಿದು ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿರುವ ದಾರುಣ ಘಟನೆಯೊಂದು ಆಂಧ್ರ ಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಕದಿರಿ ಮಂಡಲದ ಕುಮ್ಮರವಂದ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಫೋಟಕಗಳನ್ನು ಇರಿಸಲಾಗಿತ್ತು ಎನ್ನಲಾದ ಬಾಡಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಪಾಯದ ಅರಿವಿಲ್ಲದ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಸಹಾಯ ಮಾಡಲೆಂದು ಘಟನಾ ಸ್ಥಳಕ್ಕೆ ಬಂದಾಗ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಸ್ಫೋಟಕಗಳ ಅಸುರಕ್ಷಿತ ಮತ್ತು ಅಕ್ರಮ ಸಂಗ್ರಹಣೆಯ ಬಗ್ಗೆ

ಮಹಿಳಾ ಮೀಸಲು ಸೇರಿ ಲೋಕಸಭೆಯಲ್ಲಿ ಮೂರು ಮಹತ್ವದ ವಿಧೇಯಕ ಮಂಡನೆ

ಮಹಿಳಾ ಮೀಸಲಾತಿ, ಗಡಿ ನಿರ್ಣಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ವಿಧೇಯಕ 2026 ಲೋಕಸಭೆಯಲ್ಲಿ ಮಂಡನೆಯಾಗಿವೆ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಬಲವನ್ನು ಪ್ರಸ್ತುತ ಇರುವ 543 ರಿಂದ 850 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ವಿಧೇಯಕವು ಒಳಗೊಂಡಿದೆ. ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನೂ

ಮಂತ್ರಾಲಯ ಸನ್ನಿಧಿಗೆ ತೆರಳುತ್ತಿದ್ದ ವಾಹನಕ್ಕೆ ಟ್ಯಾಂಕರ್‌ ಡಿಕ್ಕಿ: ಚಿಕ್ಕಮಗಳೂರಿನ ಎಂಟು ಮಂದಿ ಸಾವು

ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಚಿಕ್ಕಮಗಳೂರಿನ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶ್ರೀ ಗುರು ರಾಘವೇಂದ್ರ ಸನ್ನಿಧಿ ಮಂತ್ರಾಲಯ ಕ್ಷೇತ್ರದಲ್ಲಿ ಗುರುಗಳ ದರ್ಶನಕ್ಕಾಗಿ ತೆರಳುತ್ತಿದ್ದ ವಾಹನಕ್ಕೆ ಸಿಮೆಂಟ್ ಮತ್ತು ಜಲ್ಲಿಕಲ್ಲು

ಹರ್ಮುಜ್ ಜಲಸಂಧಿಗೆ ಅಮೆರಿಕ ನಿರ್ಬಂಧ ಕೈ ಬಿಡಲು ಸೌದಿ ಅರೇಬಿಯಾ ಒತ್ತಾಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಎಲ್ಲ ಬಂದರುಗಳ ಮೇಲೆ ದಿಗ್ಭಂಧನ ವಿಧಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಅಮೆರಿಕದ ಮಿತ್ರ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಹೇಳಿದೆ. ಸೌದಿ ಅರೇಬಿಯಾ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆ ಹರ್ಮುಜ್ ಜಲಸಂಧಿ ಮೇಲಿನ ದಿಗ್ಬಂಧನವನ್ನು

ಮಗಳ ರೇಪ್‌: ಆರೋಪಿಯ ಜನನಾಂಗ ಕತ್ತರಿಸಿ ಕೊಲೆಗೈದ ತಾಯಿ ನಿರ್ದೋಷಿ ಎಂದ ಕೋರ್ಟ್‌

ಬ್ರೆಜಿಲ್‌ನಲ್ಲಿ ನಡೆದ ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಲಯವು, ಮಗಳ ಮೇಲೆ ಅತ್ಯಾಚಾರಗೈದ ಆರೋಪಿಯನ್ನು ಕೊಂದ ಮಹಿಳೆ ನಿರಪರಾಧಿ ಎಂದು ತೀರ್ಪು ನೀಡಿದೆ. 2025ರ ಮಾರ್ಚ್‌ನಲ್ಲಿ. ಎರಿಕಾ ಪೆರೇರಾ ಡ ಸಿಲ್ವೇರಾ ವಿಸೆಂಟೆ ಎಂಬ ಮಹಿಳೆಯ 11 ವರ್ಷದ ಮಗಳು ಬೆಲೊ

ನನ್ನ ಮುಟ್ಟಬೇಕಾದರೆ 90 ಲಕ್ಷ ಕೊಡು ಎಂದ ನವವಧು ಚಿನ್ನಾಭರಣ ದೋಚಿ ಪೋಷಕರೊಂದಿಗೆ ಪರಾರಿ

ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್ಪುರದಲ್ಲಿ ಮದುವೆಯಾದ ಮೊದಲ ರಾತ್ರಿ ವಧು ತನ್ನನ್ನು ಮುಟ್ಟಬೇಕಾದರೆ ನೀನು 90 ಲಕ್ಷ ರೂಪಾಯಿ ಕೊಡಬೇಕು ಎಂದು ವರನಲ್ಲಿ ಹಠ ಹಿಡಿದಿದ್ದು ಮಾತ್ರವಲ್ಲದೆ, ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ವರನ ಕುಟುಂಬ ಈಗ ನ್ಯಾಯಕ್ಕಾಗಿ ಕೋರ್ಟ್ ಕದ ತಟ್ಟಿದೆ.

ಹರ್ಮುಜ್‌ ಜಲಸಂಧಿಗೆ ಅಮೆರಿಕ ದಿಗ್ಬಂಧನವೆಂದ ಟ್ರಂಪ್‌: ನಮ್ಮ ನಿಯಂತ್ರಣದಲ್ಲೇ ಇದೆ ಎಂದ ಇರಾನ್‌

ಇರಾನ್‌ ಜೊತೆಗಿನ ಮಾತುಕತೆ ವಿಫಲಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹರ್ಮುಜ್‌ ಜಲಸಂಧಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು, ಎಲ್ಲ ಬಂದರುಗಳಿಗೆ ದಿಗ್ಬಂಧನ ವಿಧಸಲಾಗಿದೆ. ಇರಾನ್‌ನ ಯಾವುದೇ ಹಡಗು ಜಲಸಂಧಿ ದಾಟದಂತೆ ಎಚ್ಚರಿಕೆ ನೀಡಲಾಗಿದೆ. ನಾವು ವಿಧಿಸಿರುವ ದಿಗ್ಬಂಧನದ ಮುರಿಯುವ ಪ್ರಯತ್ನವನ್ನು

ಇರಾನ್‌ ಮೇಲೆ ಯುದ್ಧ ಅನೈತಿಕವೆಂದ ಪೋಪ್‌: ನೀವು ನನ್ನಿಂದಲೇ ಪೋಪ್‌ ಆಗಿದ್ದು ಎಂದ ಟ್ರಂಪ್‌

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಪೋಪ್ ಲಿಯೋ ಟೀಕಿಸಿದ್ದು, ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಮತ್ತು ಇದು ಅನೈತಿಕ ಎಂದು ಹೇಳಿರುವುದಕ್ಕೆ ಡೊನಾಲ್ಟ್‌ ಟ್ರಂಪ್‌ ಪೋಪ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಟ್ರಂಪ್ ಮತ್ತು ಕ್ಯಾಥೋಲಿಕ್ ಧರ್ಮಗುರು ಪೋಪ್

ಅಮರನಾಥ ಯಾತ್ರೆಗೆ ಎಪ್ರಿಲ್ 15ರಿಂದ ನೋಂದಣಿ

ಅಮರನಾಥ ಗುಹೆಗೆ ವಾರ್ಷಿಕ ತೀರ್ಥಯಾತ್ರೆ ಈ ವರ್ಷ ಜುಲೈ 3ರಂದು ಆರಂಭವಾಗಲಿದೆ. ಯಾತ್ರೆಗೆ ಮುಂಗಡ ನೋಂದಣಿ ಎಪ್ರಿಲ್ 15ರಿಂದ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳಲ್ಲಿ ಪ್ರಾರಂಭವಾಗಲಿದೆ. ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಮತ್ತು ಶ್ರೀ ಅಮರನಾಥ ಶ್ರೈನ್ ಬೋರ್ಡ್ ಅಧ್ಯಕ್ಷ ಮನೋಜ್

ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಮುಂಬೈನಲ್ಲಿ ಭಾನುವಾರ ನಿಧನರಾದ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ಸೋಮವಾರ (ಇಂದು) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ  ನಡೆಯಲಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಮೂರರವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 92