Monday, September 28, 2026
Menu

ಮದುವೆ ನಿರಾಕರಿಸಿದಾಕೆಗೆ ಹೆಚ್‌ಐವಿ ಪಾಸಿಟಿವ್‌ ಇಂಜೆಕ್ಟ್‌, ಯುವತಿ ಸುಸೈಡ್‌

ಮದುವೆಗೆ ನಿರಾಕರಿಸಿದ್ದ ಯುವತಿಗೆ ವ್ಯಕ್ತಿಯೊಬ್ಬ ಹೆಚ್‌ಐವಿ ಪಾಸಿಟಿವ್‌ ರಕ್ತ ಇಂಜೆಕ್ಟ್‌ ಮಾಡಿದ್ದು, ಇದರಿಂದ ಭಯಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆರೋಪಿ ಮನೋಹರ್ ಎಂಬಾತ ಯುವತಿಗೆ ಮನೆಯಲ್ಲಿ ಬಲವಂತವಾಗಿ ತನ್ನ ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್‌ ಮಾಡಿ ಪರಾರಿಯಾಗಿದ್ದ. ಮನೋಹರ್‌ ಮತ್ತು ಯುವತಿ ಸಂಬಂಧಿಕರು. ಆತನ ಜೊತೆ ತಮ್ಮ ಮಗಳ ಮದುವೆ ಮಾಡಲು ಪೋಷಕರು ಮೊದಲೇ ಯೋಜಿಸಿದ್ದರು. ಆತನ ಪೋಷಕರು ಹೆಚ್ಐವಿ ಪೀಡಿತರಾಗಿದ್ದರು. ಯುವತಿಯ ಪೋಷಕರು ಕಳೆದ

ಪ್ರಿಯಕರನೊಂದಿಗೆ ಸೇರಿ ಆರು ವರ್ಷದ ಮಗುವನ್ನು ಕೊಂದ ತಾಯಿ

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯು ಪ್ರಿಯಕನ ಜೊತೆ ಸೇರಿ ತನ್ನ ಆರು ವರ್ಷದ ಮಗನನ್ನು ಬಕೆಟ್‌ನಲ್ಲಿದ್ದ ಮುಳುಗಿಸಿ ದೇಹವನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಗ ಸತ್ತಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೃತದೇಹವನ್ನು ನೆಲಕ್ಕೆ ಅಪ್ಪಳಿಸಿದ್ದಾರೆಂದು ಹೇಳಲಾಗಿದೆ. ಬಾಲಕ

ರೀಲ್ಸ್‌ ಹುಚ್ಚು: ಜಲಪಾತದಲ್ಲಿ ಮುಳುಗಿ ಮೂವರು ಯುವತಿಯರ ಸಾವು

ಆಂಧ್ರಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತ ಬಳಿ ರೀಲ್ಸ್‌ ಮಾಡಲು ಹೋಗಿದ್ದ ಮೂವರು ಯುವತಿಯರು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ರೀಲ್ಸ್ ಮಾಡುತ್ತಿದ್ದಂತೆಯೇ‌ ಕ್ಯಾಮೆರಾ ಮುಂದೆಯೇ ಮುಳುಗಿ ಮೃತಪಟ್ಟಿದ್ದಾರೆ. 17 ವರ್ಷದ ತ್ರಿಶಾ, 16 ವರ್ಷದ ರತ್ನ ಕುಮಾರಿ, 16

ಮೊದಲು ಲೆಬನಾನ್‌ನಲ್ಲಿ ಕದನ ವಿರಾಮ ಘೋಷಿಸಿ, ಮತ್ತೆ ಶಾಂತಿ ಮಾತುಕತೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್‌

ಇರಾನ್‌- ಅಮೆರಿಕ ಕದನ ವಿರಾಮದ ಮಧ್ಯೆಯೇ ಇಸ್ರೇಲ್‌ ಲೆಬನಾನ್‌ ಮೇಲೆ ತೀವ್ರ ದಾಳಿಗಳನ್ನು ನಡೆಸಿ 300 ಕ್ಕೂ ಹೆಚ್ಚು ಜನ ಮೃತಪಟ್ಟಿರುವುರಿಂದ ಕೆರಳಿರುವ ಇರಾನ್‌, ಲೆಬನಾನ್‌ನಲ್ಲಿ ಕದನ ವಿರಾಮ ಆಗುವವರೆಗೆ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕೃತವಾಗಿ ಪಾಕಿಸ್ತಾನಕ್ಕೆ

ಬಂಗಾಳದಲ್ಲಿ ಮಹಿಳೆಯರಿಗೆ, ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ.: ಬಿಜೆಪಿ ಘೋಷಣೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರತಿ ತಿಂಗಳು ಮಹಿಳೆಯರಿಗೆ 3 ಸಾವಿರ ರೂ., ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ

ಚಂದ್ರದ್ರೋಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಕೇರಳ ಬಾಲಕಿ ಶ್ರೀನಂದಾ ಮೃತದೇಹ ಪ್ರಪಾತದಲ್ಲಿ ಪತ್ತೆ

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. 40 ಜನರ ಪ್ರವಾಸಿ ತಂಡದಲ್ಲಿ ಕುಟುಂಬದೊಂದಿಗೆ ಚಾರಣಕ್ಕೆ ಬಂದಿದ್ದ ಆಕೆ

ಮಹಾರಾಷ್ಟ್ರದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಓದು, ಬರಹ ಕಡ್ಡಾಯ

ಮಹಾರಾಷ್ಟ್ರದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲನಾ ಪರವಾನಗಿ ಹೊಂದಿರಬೇಕಾದರೆ ಮರಾಠಿ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರುವುದು ಕಡ್ಡಾಯವಾಗಿದೆ. ಸಾರಿಗೆ ಇಲಾಖೆಯ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಚಾಲಕರ ಪರವಾನಗಿಯನ್ನು ರದ್ದುಗೊಳಿಸಲುವುದಾಗಿ ಸರ್ಕಾರ ಹೇಳಿದೆ. ಯೋಜನೆಯನ್ನು ಮೀರಾ ಭಯಂದರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ

ಅನುಮತಿಯಿಲ್ಲದೆ ಹರ್ಮುಜ್‌ ಜಲಸಂಧಿಗೆ ಬರುವ ಹಡಗು ಹೊಡೆದುರುಳಿಸುತ್ತೇವೆ: ಇರಾನ್‌

ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬಳಿಕ ಲೆಬೆನಾನ್ ಮೇಲೆ ಇಸ್ರೇಲ್ ಸೇನೆ 100ಕ್ಕೂ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಟ 250 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಮಧ್ಯೆ ಇರಾನ್ ನೌಕಾಪಡೆಯು ಹರ್ಮುಜ್ ಜಲಸಂಧಿಯ ಬಳಿಯ

ಕದನ ವಿರಾಮ ಮುರಿಯುವವರೆಗೆ ಮಾತ್ರ ಇರಾನ್‌ ಸುರಕ್ಷಿತ: ಟ್ರಂಪ್‌ ವಾರ್ನ್‌

ಕದನ ವಿರಾಮ ಮುರಿಯುವ ತನಕ ಮಾತ್ರ ಇರಾನ್‍ನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸುರಕ್ಷಿತವಾಗಿ ಇರಲಿವೆ. ಒಪ್ಪಂದ ಮುರಿದ ಕ್ಷಣದಿಂದಲೇ ದೊಡ್ಡ ದಾಳಿ ನಡೆಯಲಿದೆ. ಆ ದಾಳಿ ಹಿಂದೆಂದಿಗಿಂತಲೂ ಭೀಕರವಾಗಿ ಇರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಕದನ ವಿರಾಮ ಮಧ್ಯೆ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ: ಮತ್ತೆ ಹರ್ಮುಜ್‌ ಮುಚ್ಚಿದ ಇರಾನ್‌

ಅಮೆರಿಕ- ಇರಾನ್‌ ಕದನ ವಿರಾಮದ ಮಧ್ಯೆಯೇ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿಗಳನ್ನು ನಡೆಸಿದ್ದು 100 ಜನರು ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯನ್ನು ಖಂಡಿಸಿರುವ ಇರಾನ್‌ ಹರ್ಮುಜ್‌ ಜಲಸಂಧಿಯನ್ನು ಮುಚ್ಚಿದೆ. ಲೆಬನಾನ್‌ ಮೇಲಿನ ದಾಳಿ ಮೂಲಕ ಇಸ್ರೇಲ್ ಕದನವಿರಾಮ