Sunday, September 27, 2026
Menu

ಪಣವಿಟ್ಟು ಆಡುವ ಆನ್‌ಲೈನ್‌ ಗೇಮ್‌ಗಳು, ಬೆಟ್ಟಿಂಗ್‌ ಗೇಮ್‌ಗಳಿಗೆ ಕಾನೂನು ರಕ್ಷಣೆ ಇಲ್ಲ: ಸುಪ್ರೀಂ ತೀರ್ಪು

ಹಣ ಅಥವಾ ಪಣ ಒಡ್ಡಿ ಆಡುವ ಆನ್‌ಲೈನ್ ಗೇಮ್‌, ಜೂಜು ಮತ್ತು ಇತರ ಕೌಶಲ್ಯ ಆಟಗಳ ಮೇಲಿನ ಬೆಟ್ಟಿಂಗ್‌ಗೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಕಾನೂನುಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಈ ಮೂಲಕ ಎತ್ತಿಹಿಡಿದಿದೆ. ಹೈಕೋರ್ಟ್‌ಗಳ ಈ ಹಿಂದಿನ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ

ದೆಹಲಿಯ ಹೋಟೆಲ್‌ನಲ್ಲಿ ಬೆಂಕಿ: 21 ಮಂದಿ ಸಾವು

ದೆಹಲಿಯ ಮಾಳವೀಯ ನಗರದ ಐದು ಅಂತಸ್ತಿನ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.  ಈ ಹೋಟೆಲ್‌ ಇಕ್ಕಟ್ಟಾದ ಬೀದಿಯಲ್ಲಿರುವ ಕಾರಣ ದಟ್ಟ ಹೊಗೆ ನಡುವೆ ರಕ್ಷಣಾ ಕಾರ್ಯಾಚರಣೆ ಬಹಳಷ್ಟು ಕಷ್ಟವಾಗಿತ್ತು. ಬುಧವಾರ ಬೆಳಗ್ಗೆ ಒಂಬತ್ತು ಗಂಟೆ ವೇಳೆ

ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ದಾಳಿ

ಇರಾನ್‌ನ ಕೆಶ್ಮ್ ದ್ವೀಪದ ಘಟನೆಗೆ ಪ್ರತೀಕಾರವಾಗಿ ಬುಧವಾರ ಮುಂಜಾನೆ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್‌ನ ಸಶಸ್ತ್ರ ಪಡೆಗಳು ಹೇಳಿಕೊಂಡಿದೆ, ಆದರೆ ಅಮೆರಿಕ ಸೇನೆಯು ಈ ಎಲ್ಲ ವರದಿಗಳನ್ನು ನಿರಾಕರಿಸಿದೆ.

ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ

ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದ ಕೆ ಅಣ್ಣಾಮಲೈ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.  ರಾಜ್ಯಸಭಾ ಸ್ಥಾನವನ್ನೂ ನಿರಾಕರಿಸಿ ಪಕ್ಷ ತೊರೆದಿದ್ದಾರೆ. ಜೂನ್ 4 ಅಣ್ಣಾಮಲೈ ಹುಟ್ಟುಹಬ್ಬ ಇದ್ದು, ಅಂದೇ

ಹುಚ್ಚನಂತೆ ವರ್ತಿಸುತ್ತಿದ್ದಿ, ನಾನಿಲ್ಲದಿದ್ದರೆ ನೀನು ಜೈಲಲ್ಲಿ ಇರುತ್ತಿದ್ದೆ: ನೆತನ್ಯಾಹು ವಿರುದ್ಧ ಟ್ರಂಪ್‌ ಆಕ್ರೋಶ

ನೀನು ಹುಚ್ಚನಂತೆ ವರ್ತಿಸುತ್ತಿದ್ದಿ, ನಾನು ಇರದೆ ಇದ್ದರೆ ಈಗಾಗಲೇ ಜೈಲಿನಲ್ಲಿರುತ್ತಿದ್ದೆ. ನಿನ್ನನ್ನು ನಾನು ಉಳಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ನಿನ್ನಿಂದ ಇಸ್ರೇಲ್ ಮೇಲಿನ ಜಾಗತಿಕ ಬೆಂಬಲವೂ ಕುಸಿಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಅಮೆರಿಕದ ಗ್ರೀನ್‌ಕಾರ್ಡ್‌ಗೆ ಮಾತೃ ದೇಶದಿಂದಲೇ ಅರ್ಜಿ ಸಲ್ಲಿಸಲು ಆದೇಶ

ಅಮೆರಿಕದ ಗ್ರೀನ್‌ಕಾರ್ಡ್ ಆಕಾಂಕ್ಷಿಗಳು ಇನ್ಮುಂದೆ ತಮ್ಮ ಮಾತೃದೇಶಗಳಿಗೆ ಹಿಂತಿರುಗಿ ಅಲ್ಲಿಂದಲೇ ಅಮೆರಿಕ ಕಾನ್ಸುಲೆಟ್ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಅಮೆರಿಕ ಪೌರತ್ವ ಮತ್ತು ವಲಸೆ ವಿಭಾಗವು ಆದೇಶ ಹೊರಡಿಸಿದೆ. ತಾತ್ಕಾಲಿಕ ವೀಸಾದಲ್ಲಿ ಇರುವವರು, ಅಕ್ರಮವಾಗಿ ವಾಸಿಸುತ್ತಿರುವವರು, ಗಂಡ/ಹೆಂಡತಿ ಅಥವಾ ಮಕ್ಕಳ

ಮದುವೆ ಮಂಟಪದಿಂದ ಹನಿಮೂನ್‌ಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್‌ ಪತನ: ವರ, ಪೈಲಟ್‌ ಸಾವು

ಮದುವೆ ಸಂಭ್ರಮದಿಂದ ಹನಿಮೂನ್‌ಗೆ ತೆರಳುತ್ತಿದ್ದ ಜೋಡಿಯಿದ್ದ ಹೆಲಿಕಾಪ್ಟರ್‌ ಅಮೆರಿಕದ ಜಾರ್ಜಿಯಾದಲ್ಲಿ ಪತನಗೊಂಡಿದ್ದು, ಕೇರಳದ ವರ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ವಧು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ವರ ಕೇರಳದ 26 ವರ್ಷದ ಡೇವ್ ಫಿಜಿ, ವೃತ್ತಿಯಲ್ಲಿ ಪೈಲಟ್‌ ಆಗಿದ್ದವರು, ಮದುವೆ ಸಮಾರಂಭದ ಬಳಿಕ

ಇರಾನ್‌ನ ರಾಡಾರ್, ಡ್ರೋನ್ ಕೇಂದ್ರಗಳ ಮೇಲೆ ಅಮೆರಿಕ ದಾಳಿ

ಅಮೆರಿಕ ಇರಾನ್‌ನ ಗೊರುಕ್ ಮತ್ತು ಕ್ವೆಶ್ಮ್ ದ್ವೀಪಗಳಲ್ಲಿರುವ ರಾಡಾರ್ ಮತ್ತು ಡ್ರೋನ್ ನಿಯಂತ್ರಣ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಎಂಕ್ಯೂ-1 ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿತ್ತು. ಇದಕ್ಕೆ ಪ್ರತಿಯಾಗಿ ಈ

ದೇಶದ ಹಲವೆಡೆ ದಾಳಿ ಸಂಚು: ಒಂಬತ್ತು ಉಗ್ರರ ಬಂಧನ

ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಆಧರಿಸಿ ದೆಹಲಿ ಪೊಲೀಸ್ ವಿಶೇಷ ಘಟಕ ಒಂಬತ್ತು ಶಂಕಿತ ಉಗ್ರರನ್ನು ಬಂಧಿಸಿದೆ. ಈ ಉಗ್ರರು ಐಸಿಸ್​​ ಹಾಗೂ ಮುಂಬೈ ಭೂಗತ ಜಗತ್ತಿನ ಜೊತೆ ಸಂಪರ್ಕ

ಪ್ರಿಯತಮೆಯ ಪತಿ ಬಂದಾಗ 30 ಅಂತಸ್ತಿನ ಕಟ್ಟಡದಿಂದ ಜಿಗಿದು ಮೃತಪಟ್ಟ ಜಿಮ್‌ ಟ್ರೈನರ್

ಪ್ರಿಯತಮೆಯ ಮನೆಯಲ್ಲಿ ಜೊತೆಯಲ್ಲಿದ್ದಾಗ ಆಕೆಯ ಪತಿ ಮನೆಗೆ ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿ 30 ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದು ಫಿಟ್‌ನೆಸ್ ಟ್ರೈನರ್ ಮೃತಪಟ್ಟಿದ್ದಾನೆ. ಸಿಂಗಾಪುರದ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿ 30 ವರ್ಷದ ಫಿಟ್‌ನೆಸ್ ಟ್ರೈನರ್ ಆಗಿದ್ದು,