Menu

ಡೇಟಿಂಗ್‌ ಆ್ಯಪ್‌: ಪುರುಷರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಯುವತಿ ವಂಚಿಸಿದ್ದು ಏಳು ಕೋಟಿ ರೂ.

ಯುವತಿ ಡೇಟಿಂಗ್‌ ಆ್ಯಪ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸಿ ಅವರೊಂದಿಗೆ ಆತ್ಮೀಯವಾಗಿರುವ ಪೋಟೊಗಳು ಹಾಗೂ ವೀಡಿಯೊಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಆರು ಕೋಟಿ ರೂ. ವಂಚಿಸಿರುವ ಪ್ರಕರಣ ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಬೆಳಕಿಗೆ ಬಂದಿದೆ.

ಯುವತಿಯು ಡೇಟಿಂಗ್‌ ಅಪ್ಲಿಕೇಷನ್‌, ಟಿಂಡರ್‌ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸಿ ನಂತರ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಲಾಗಿದೆ.

ಪಲ್ಲವಿ ಸಿಂಗ್ ರಜಪೂತ್ ವಂಚಕಿ ಯುವತಿ. ಡೇಟಿಂಗ್ ಆ್ಯಪ್‌ಗಳಲ್ಲಿ ‘ಹಾಯ್, ಹಲೋ.’ ಎಂದು ಮಾತು ಆರಂಭಿಸಿ ಸ್ನೇಹ ಬೆಳೆಸಿ ಪ್ರೀತಿಯೆಂದು ನಂಬಿಸಿ ಯುವಕರಿಂದ ಕೋಟಿಗಟ್ಟಲೇ ಹಣ ಲೂಟಿ ಮಾಡಿದ್ದಾಳೆ ಎನ್ನಲಾಗಿದೆ.

ಯುವಕರೊಂದಿಗಿನ ಖಾಸಗಿ ಕ್ಷಣಗಳ ಪೋಟೊ, ವೀಡಿಯೊ ತೆಗೆಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವುದೇ ಆಕೆಯ ಕೆಲಸವಾಗಿದ್ದು, ಎಷ್ಟು ಜನರಿಗೆ ಮೋಸ ಎಸಗಿದ್ದಾಳೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಈಕೆಯಿಂದ ವಂಚನೆಗೆ ಒಳಗಾದ ಅಲಹಾಬಾದ್‌ನ ವಕೀಲರೊಬ್ಬರು ದೂರು ನೀಡಿದ ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಈಕೆಯ ವಂಚನೆಯ ಜಾಲದ ಆಳ-ಅಗಲ ಅರಿವಿಗೆ ಬಂದಿದೆ.

ಆಕೆ ಆರು ಕೋಟಿ ರೂ.ಗೂ ಹೆಚ್ಚು ಹಣವನ್ನು ಅನೇಕರಿಂದ ವಸೂಲಿ ಮಾಡಿದ್ದಾಳೆ ಎಂದು ವಕೀಲರು ದೂರುನಲ್ಲಿ ಆರೋಪಿಸಿದ್ದಾರೆ. ಹಣ ನೀಡಲು ನಿರಾಕರಿಸಿದರೆ, ಅತ್ಯಾಚಾರ, ಕೊಲೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು. ಆಕೆ ನೀಡಿದ ಸುಳ್ಳು ದೂರುಗಳ ಹಿನ್ನೆಲೆಯಲ್ಲಿ ಐವರು ಜೈಲು ಸೇರಿದ್ದು, ಕೇಸ್​ನ ಭಯ, ಕಾನೂನು ಹೋರಾಟ ಹಾಗೂ ಅವಮಾನದ ಆತಂಕದಿಂದ ಸಂತ್ರಸ್ತರು ಹಣ ನೀಡಿದ್ದಾರೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *