Wednesday, September 09, 2026
Menu

ಐಫೋನ್ ಬದಲು ಎಣ್ಣೆ ನೀಡಿದ ಫ್ಲಿಪ್‌ಕಾರ್ಟ್‌ಗೆ 80 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌

ಗ್ರಾಹಕನಿಗೆ ಬುಕ್‌ ಮಾಡಿದ್ದ ಐಫೋನ್ ಬದಲು ಗಡ್ಡಕ್ಕೆ ಬಳಸುವ  ಎಣ್ಣೆ ನೀಡಿದ ಫ್ಲಿಪ್‌ಕಾರ್ಟ್‌ಗೆ  ಗ್ರಾಹಕರ ನ್ಯಾಯಾಲಯವು ಎಂಬತ್ತು ಸಾವಿರ ರೂ. ದಂಡ ವಿಧಿಸಿರುವ ಘಟನೆ ಮುಂಬಯಿನಲ್ಲಿ ನಡೆದಿದೆ.

ಮುಂಬಯಿನ  ಪೊವಾಯ್‌ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್ ಮೂಲಕ 2023ರಲ್ಲಿ 1,11,793 ರೂ. ಪಾವತಿಸಿ ಐಪೋನ್‌ ಆರ್ಡರ್ ಮಾಡಿದ್ದರು. ಪಾರ್ಸೆಲ್ ಬಂದಾಗ ಐಫೋನ್ ಬದಲಿಗೆ ಗಡ್ಡ ಬೆಳೆಸುವ ಎಣ್ಣೆ ಬಾಟಲಿ ಇತ್ತು. ಗ್ರಾಹಕ ಕೂಡಲೇ ಸೂಕ್ತ ದಾಖಲೆಗಳೊಂದಿಗೆ ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್‌ಗೆ ದೂರು ನೀಡಿದರೂ ಕಂಪನಿ ಯಾವುದೇ ಪರಿಹಾರ ನೀಡದೆ ದೂರನ್ನು ಕ್ಲೋಸ್ ಮಾಡಿತ್ತು. ಬೇಸತ್ತ ಗ್ರಾಹರು ಮುಂಬೈನ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ದೂರು ದಾಖಿಲಿಸಿಕೊಂಡು ವಿಚಾರಣೆ ನಡೆಸಿದ ಮುಂಬೈನ ಹೆಚ್ಚುವರಿ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಮತ್ತು ಅದರ ಸೆಲ್ಲರ್ ಇಬ್ಬರನ್ನೂ ದೋಷಿ ಎಂದು ಘೋಷಿಸಿ, ಒಟ್ಟು ₹1.8 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ನೀಡಲು ಆದೇಶಿಸಿದೆ. ಐಫೋನ್ ಬೆಲೆಯಾದ 1,11,793 ರೂಪಾಯಿಗಳನ್ನು 9% ವಾರ್ಷಿಕ ಬಡ್ಡಿಯೊಂದಿಗೆ ವಾಪಸ್ ನೀಡಬೇಕು. ಗ್ರಾಹಕರಿಗೆ ಉಂಟು ಮಾಡಿದ ಮಾನಸಿಕ ತೊಂದರೆಗಾಗಿ 50,000 ರೂಪಾಯಿ ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 20,000 ರೂಪಾಯಿ ಪಾವತಿಸಬೇಕು ಎಂದು ತೀರ್ಪು ನೀಡಿದೆ.

ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮಧ್ಯವರ್ತಿ ಎಂದು ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಗ್ರಾಹಕರು ತಪ್ಪು ಸರಕು ಬಂದಿದೆ ಎಂದು ತಕ್ಷಣವೇ ತಿಳಿಸಿದಾಗ ಸೂಕ್ತ ಪರಿಹಾರ ಒದಗಿಸುವುದು ಕಂಪನಿಯ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ಆಪಲ್ ಕಂಪನಿಯನ್ನೂ ಆರೋಪಿ ಮಾಡಲಾಗಿತ್ತು. ಇದು ಡೆಲಿವರಿ ಮತ್ತು ಮಾರಾಟಗಾರರ ತಪ್ಪಾಗಿರುವುದರಿಂದ ಆಪಲ್ ಕಂಪನಿಯನ್ನು ತಪ್ಪಿನಿಂದ ಮುಕ್ತಗೊಳಿಸಲಾಗಿದೆ.

Related Posts

Leave a Reply

Your email address will not be published. Required fields are marked *