ಉದಯಕಾಲ ನ್ಯೂಸ್, ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ (Traffic Jam) ವಾಹನ ಸವಾರರಿಗೆ ಮಾತ್ರವಲ್ಲ, ಸರ್ಕಾರಕ್ಕೂ ದೊಡ್ಡ ಸವಾಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಡಿಕೆ ಶಿವಕುಮಾರ್ ರವರು ಇದೀಗ ಹೊಸ ಪ್ಲ್ಯಾನ್ ರೂಪಿಸಲಾಗಿದೆ.
ನಗರದ ವಿವಿಧ ಭಾಗಗಳಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗುವ 6 ಜಂಕ್ಷನ್‌ಗಳಲ್ಲಿ ಎಲಿವೇಟೆಡ್ ರಸ್ತೆ, ಫ್ಲೈಓವರ್ ಹಾಗೂ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ ಸಿಎಂ ಮುಂದಾಗಿದ್ದಾರೆ
ಒಟ್ಟು 1,640 ಕೋಟಿ ರೂ. ವೆಚ್ಚದಲ್ಲಿ ಈ 6 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ಯೋಜನೆಗಳು ಜಾರಿಯಾದರೆ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.
ಮಿನರ್ವ ಸರ್ಕಲ್ ಟು ಹಡ್ಸನ್ ಸರ್ಕಲ್
ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್‌ವರೆಗೆ ಲೂಪ್ ಫ್ಲೈಓವರ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್‌ನಿಂದ ಟೌನ್ ಹಾಲ್ ಕಡೆಗೆ ಲೂಪ್ ಫ್ಲೈಓವರ್ ನಿರ್ಮಾಣವಾಗಲಿದೆ. ಹಾಗೆಯೇ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ನೃಪತುಂಗ ರಸ್ತೆಯಲ್ಲಿರುವ ಕೆ.ಆರ್. ಸರ್ಕಲ್‌ವರೆಗೆ ಸಂಪರ್ಕ ಕಲ್ಪಿಸುವ ಯೋಜನೆಯೂ ಇದೆ.
ಶೂಲೇ ಸರ್ಕಲ್ ಟು ಮಡಿವಾಳ ಚೆಕ್‌ಪೋಸ್ಟ್
ಹೊಸೂರು ರಸ್ತೆಯ ಆನೇಪಾಳ್ಯ, ಅಡುಗೋಡಿ ಮೂಲಕ ಸೇಂಟ್ ಜಾನ್ ಆಸ್ಪತ್ರೆ ರಸ್ತೆಯವರೆಗೆ ಫ್ಲೈಓವರ್ ಅಥವಾ ಎಲಿವೇಟೆಡ್ ರಸ್ತೆ ನಿರ್ಮಿಸುವ ಯೋಜನೆ ಇದೆ. ಈ ಯೋಜನೆಯಿಂದ 7 ಜಂಕ್ಷನ್‌ಗಳನ್ನು ಬೈಪಾಸ್ ಮಾಡಲು ಉದ್ದೇಶಿಸಲಾಗಿದೆ.
ದೊಡ್ಡಬಳ್ಳಾಪುರ ರೋಡ್ ಟು ಕೋಗಿಲು ಸರ್ಕಲ್
ಪೊಲೀಸ್ ಸ್ಟೇಷನ್ ಜಂಕ್ಷನ್‌ನಿಂದ NH-7ರ ನವಯುಗ ಫ್ಲೈಓವರ್‌ವರೆಗೆ ಹಳೆ ಯಲಹಂಕ ಮಾರ್ಗವಾಗಿ ಸುಮಾರು 4 ಕಿ.ಮೀ. ಉದ್ದದ ರಸ್ತೆ ಯೋಜನೆ ರೂಪಿಸಲಾಗಿದೆ.
ಪೈಪ್‌ಲೈನ್ ರಸ್ತೆ ಗ್ರೇಡ್ ಸಪರೇಟರ್
ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಪಶ್ಚಿಮ ಭಾಗದಿಂದ ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್ ಮೂಲಕ ಔಟರ್ ರಿಂಗ್ ರಸ್ತೆಯವರೆಗೆ ಸುಮಾರು 4.5 ಕಿ.ಮೀ. ಉದ್ದದ ಗ್ರೇಡ್ ಸಪರೇಟರ್ ನಿರ್ಮಿಸುವ ಯೋಜನೆ ಇದೆ.
OI ಜಂಕ್ಷನ್ ಸ್ಪ್ಲಿಟ್ ಫ್ಲೈಓವರ್
ತುಮಕೂರು ರಸ್ತೆಯಲ್ಲಿರುವ OI ಜಂಕ್ಷನ್‌ನಲ್ಲಿ, KRS ಮುಂಭಾಗ ಸುಮಾರು 0.5 ಕಿ.ಮೀ. ಉದ್ದದ ಸ್ಪ್ಲಿಟ್ ಫ್ಲೈಓವರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಕೋಣನಕುಂಟೆ ಕ್ರಾಸ್ ಫ್ಲೈಓವರ್
ಕನಕಪುರ ರಸ್ತೆ ಮಾರ್ಗದಲ್ಲಿ ಕೋಣನಕುಂಟೆ ಕ್ರಾಸ್‌ನಲ್ಲಿ ಫ್ಲೈಓವರ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.
ಒಟ್ಟಿನಲ್ಲಿ, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ 6 ಯೋಜನೆಗಳನ್ನು ರೂಪಿಸಲಾಗಿದೆ. 1,640 ಕೋಟಿ ರೂ. ವೆಚ್ಚದ ಈ ಯೋಜನೆಗಳ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
#NammaBengaluru#CMDKShivakumar#BengaluruTraffic#Flyovers#BSMILE#UdayakalaNews#KarnatakaNews#TrafficSolutions


