Menu

ಆನ್‌ಲೈನ್‌ ಗೇಮಿಂಗ್‌ ಚಟ: ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹತ್ತಿರದ ಮಾರಪ್ಪನಪಾಳ್ಯದಲ್ಲಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡು ಮೂರು ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 20 ವರ್ಷದ ಉದಯ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಉದಯ್, ಓದಿನ ಜೊತೆಗೆ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ. ಉದಯ್‌ ಓದಿಗೆ ಅನುಕೂಲವಾಗಲೆಂದು ಪೋಷಕರಾದ ಸುರೇಶ್ ಹಾಗೂ ಪ್ರೇಮಲತಾ ಮನೆಯ ಮೇಲ್ಭಾಗದಲ್ಲಿ

ಬದಲಾಗುತ್ತಿರುವ ಬೆಂಗಳೂರಿಗೆ ಹಸಿರು ವಿನ್ಯಾಸ ಪರಿಕಲ್ಪನೆ!

ಬೆಂಗಳೂರು: ಖ್ಯಾತ ಲ್ಯಾಂಡ್‌ ಸ್ಕೇಪ್ ಡಿಸೈನರ್ ಸೂರಜ್ ನಾಯಕ್ ನೇತೃತ್ವದ ಎಕೋಸ್ಕೇಪ್ಸ್ ಲ್ಯಾಂಡ್‌ ಸ್ಕೇಪಿಂಗ್ ಸಂಸ್ಥೆ ಒಣಗುತ್ತಿರುವ ಕೆರೆಗಳು, ನಿರಂತರವಾಗಿ ಏರುತ್ತಿರುವ ತಾಪಮಾನ ಹಾಗೂ ತೀವ್ರವಾಗಿ ಕ್ಷೀಣಿಸುತ್ತಿರುವ ನಗರದ ಜೈವಿಕ ವೈವಿಧ್ಯತೆ ಸೇರಿದಂತೆ ಸಿಲಿಕಾನ್ ಸಿಟಿ ಬೆಂಗಳೂರು ಎದುರಿಸುತ್ತಿರುವ ಸಾಲು ಸಾಲು

3.38 ಕೋಟಿ ರೂ. ಅಕ್ರಮ ಪಾವತಿ: ಬೌರಿಂಗ್ಸ್ ಕ್ಲಬ್ ಮಾಜಿ ಪದಾಧಿಕಾರಿ ಎಚ್.ಎಸ್.ಶ್ರೀಕಾಂತ್ ಅಮಾನತು

ಕೇಟರಿಂಗ್ ಕಂಪನಿಯೊಂದಕ್ಕೆ ರೂ 3.38 ಕೋಟಿಯನ್ನು ನಿಯಮಬಾಹಿರವಾಗಿ ಪಾವತಿಸಿರುವ ಆರೋಪದ ಮೇಲೆ ಬೆಂಗಳೂರಿನ  ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಬೌರಿಂಗ್ ಇನ್ ಸ್ಟಿಟ್ಯೂಟ್ ನ (ಬೌರಿಂಗ್ಸ್ ಕ್ಲಬ್) ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತ್ ಅವರ ಸದಸ್ಯತ್ವವನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.

ಜಿಬಿಎ ಚುನಾವಣೆ ಕಾಲಾವಕಾಶ ಡಿಸೆಂಬರ್‌ಗೆ ವಿಸ್ತರಿಸಿದ ಸುಪ್ರೀಂಕೋರ್ಟ್‌

ಜಿಬಿಎ ಚುನಾವಣೆ ನಡೆಸಲು ನೀಡಿದ್ದ ಗಡುವು ವಿಸ್ತರಣೆ ಕೋರಿ ರಾಜ್ಯ ಸರ್ಕಾರ ನೀಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿ ಡಿಸೆಂಬರ್‌ವರೆಗೆ ಅವಕಾಶ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಈ ಹಿಂದೆ ಆದೇಶಿಸಿತ್ತು.

ಲಿವ್‌ ಇನ್‌ ರಿಲೇಷನ್‌ಶಿಪ್‌: ಮಗು ಅನುಮಾನಾಸ್ಪದ ಸಾವು

ಲಿವ್‌ ಇನ್‌ ರಿಲೇಷನ್‌ಶಿಪ್‌ ಜೋಡಿಯೊಂದಿಗೆ ಇದ್ದ ಎರಡು ವರ್ಷದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಬೆಂಗಳೂರಿನ ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ ನಡೆದಿದೆ. ಜೇಸನ್ ಆಂಥೋನಿ ಮತ್ತು ರೋಸ್ಲಿನ್‌ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದು, ಅವರ ಎರಡು ವರ್ಷದ ಮಗು ಕಾರ್ಲೆಟ್ ಡೈಸಿ ಮೃತಪಟ್ಟಿದೆ.

ಬೆಂಗಳೂರಿನಲ್ಲಿ ಗರ್ಭಿಣಿಯ ಕೊಲೆಗೈದು ಪತಿ ಆತ್ಮಹತ್ಯೆ

ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯು ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಮನೋಜ್ (28) ಮತ್ತು ಸ್ವಪ್ನ (26) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದವರಾದ ಇವರು

ಅಣ್ಣನ ಪ್ರೀತಿ ನಿರಾಕರಿಸಿದಳೆಂದು ಯುವತಿಯ ಕೊಂದ ತಮ್ಮ

ಅಣ್ಣನ ಪ್ರೀತಿ ನಿರಾಕರಿಸಿದ ಯುವತಿಯನ್ನು ತಮ್ಮ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋಡಿಹಳ್ಳಿಯ ಹೆಚ್‌ಎಎಲ್ ರಸ್ತೆಯಲ್ಲಿ ನಡೆದಿದೆ. ಅಮೃತ ಕೊಲೆಯಾದ ಯುವತಿ. ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳು ಪರಿಚಿತರಾಗಿ ಧನುಷ್ ಮತ್ತು ಅಮೃತ ಆತ್ಮೀಯರಾಗಿ ಬಳಿಕ ಇಬ್ಬರು

ಶಾಲೆಯಲ್ಲಿ ಕುಸಿದು ಐದನೇ ತರಗತಿ ವಿದ್ಯಾರ್ಥಿ ಸಾವು

ಬೆಂಗಳೂರು ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಶಾಲೆಯಲ್ಲಿ 12 ವರ್ಷದ ಬಾಲಕನೊಬ್ಬ ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಅರ್ಹಾನ್ ಪಾಷಾ (12) ಮೃತಪಟ್ಟ ವಿದ್ಯಾರ್ಥಿ. ನ್ಯೂ ಬ್ಲಾಸಮ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ. ತರಗತಿಯಲ್ಲಿದ್ದ

ಬಿಎಂಟಿಸಿ ಕಂಡಕ್ಟರ್‌ ಪರ್ಸ್‌ ಎಗರಿಸಿದ ತಮಿಳ್ನಾಡು ಮಹಿಳೆ

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬಳು ಕಂಡಕ್ಟರ್ ಬ್ಯಾಗ್‌ ಎಗರಿಸಿದ್ದು, ಸಮಯಪ್ರಜ್ಞೆಯಿಂದ ಬಸ್‌ನ ಬಾಗಿಲು ಮುಚ್ಚಿಸಿ ಆಕೆಯನ್ನು ಕಂಡಕ್ಟರ್‌ ಹಿಡಿದಿದ್ದಾರೆ. ತಮಿಳುನಾಡು ಮೂಲದ ಈ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯವೀಡಿಯೊ ವೈರಲ್ ಆಗಿದೆ. ಬಿಎಂಟಿಸಿ ಬಸ್‍ ಬಸ್​ ರಶ್​ ಇದ್ದ ಕಾರಣ ಆಕೆ

ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ: ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವೆಂದ ಸಿಎಂ

ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳ ಮುಕ್ತಿಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಏಕಪಕ್ಷೀಯ ನಿರ್ಧಾರ ನಮ್ಮ ಧೋರಣೆಯಲ್ಲ. ಆಸ್ತಿಯನ್ನು ನೀವು ಕೊಂಡುಕೊಂಡ ಮೇಲೆ ನೀವೇ ಅದರ ಮಾಲೀಕರು. ಈ ವಿಚಾರದಲ್ಲಿ ಅನುಮಾನವಿಲ್ಲ‌ ಎಂದು ಸಿಎಂ‌ ಡಿಕೆ