ಇರಾನ್ ಮೇಲೆ ದಾಳಿ ಬಳಿಕ ಪ್ರತಿದಾಳಿ ಸಾಧ್ಯತೆ: ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇಸ್ರೇಲ್‌ನಾದ್ಯಂತ ‘ವಿಶೇಷ ಮತ್ತು ಶಾಶ್ವತ ತುರ್ತು ಪರಿಸ್ಥಿತಿ’ಯನ್ನು ಘೋಷಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ. ಇಸ್ರೇಲ್ ದಾಳಿಯನಂತರ ಇರಾನ್ ಕಡೆಯಿಂದ ಡ್ರೋನ್‌ಗಳು ಹಾಗೂ ಖಂಡಾಂತರ ಕ್ಷಿಪಣಿಗಳ ಮೂಲಕ ಪ್ರತಿದಾಳಿ ನಡೆಯುವ ಸಾಧ್ಯತೆ ಹೆಚ್ಚಿರುವ ಹಿನ್ನೆಯಲ್ಲಿ ನಾಗರಿಕರ ರಕ್ಷಣೆಗಾಗಿ ಇಸ್ರೇಲ್ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. ದಾಳಿಯ ಪರಿಣಾಮವಾಗಿ ಇರಾನ್ ರಾಜಧಾನಿ ಟೆಹ್ರಾನ್‌ನ ಮಧ್ಯಭಾಗದಲ್ಲಿ ಮೂರು
ಕಾರು ಚಲಾಯಿಸಿ ವ್ಯಕ್ತಿಯ ಹತ್ಯೆ: ಮೂವರು ವಿದ್ಯಾರ್ಥಿಗಳ ಬಂಧನ
ರಾಜ್ಯದ ಗಡಿಭಾಗ, ಬೆಂಗಳೂರು ಸಮೀಪವಿರುವ ತಮಿಳುನಾಡಿನ ಹೊಸೂರು ನಗರದಲ್ಲಿ ಕುಡಿದ ನಶೆಯಲ್ಲಿ ವಾಹನ ಚಾಲನೆ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳು ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದಾರೆ. ಹೊಸೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಸಿಸ್ಟೆಂಟ್ ಲೇಬರ್ ಇನ್ಸ್‌ಪೆಕ್ಟರ್ ಶಿವಮೂರ್ತಿ (54)
ವಿವಾಹೇತರ ಸಂಬಂಧ: ಮಹಿಳೆಯ ಕೊಲೆಗೈದ ಯುವಕ, ಅನಾಥವಾದ ಮಕ್ಕಳು
ಚಿಕ್ಕಬಳ್ಳಾಪುರದಲ್ಲಿ ಯುವಕನೊಬ್ಬ ವಿವಾಹಿತ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ, ಆಕೆಯ ಮಕ್ಕಳಿಬ್ಬರು ಈಗ ಅನಾಥರಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ತೇಜಸ್ವಿನಿ ಎಂಬಾಕೆ ಗಂಡನಿಂದ ದೂರವಾಗಿ ಇನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತಿದ್ದರು. ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಹೋಟೆಲ್‌ನವರೇ ಕೊಟ್ಟಿದ್ದ ಒಂದು ರೂಂನಲ್ಲಿ
ಜ್ಯೋತಿಷಿಯ ಮಾತಿಗೆ ಹೆದರಿ ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡರಾ?
ಬೆಂಗಳೂರು ನಗರದ ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಜ್ಯೋತಿಷಿಯು ಅಲ್ಪಾಯುಷಿ ಎಂದು ಭವಿಷ್ಯ ನುಡಿದಿದ್ದಕ್ಕೆ ಹೆದರಿಕೊಂಡ ಟೆಕ್ಕಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ವಿದ್ಯಾಜ್ಯೋತಿ (29) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಕೆ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿ ವರ್ಕ್ ಫ್ರಂ ಹೋಮ್‌ನಲ್ಲಿದ್ದರು.
ನನ್ನ ಪರ ಯಾರೂ ದೆಹಲಿಗೆ ಹೋಗ್ಬೇಕಿಲ್ಲ, ನಾವು ಹಳಬರಾಗಿದ್ದೇವೆ, ಹೊಸಬರಿಗೆ ಮಂತ್ರಿಯಾಗುವ ಆಸೆ: ಡಿಕೆ ಶಿವಕುಮಾರ್
“ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಖಾಸಗಿ ಹೋಟೆಲ್ ಹಾಗೂ ಅರಮನೆ ಮೈದಾನದ ಗಾಯತ್ರಿ ವಿಹಾರ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಗುರುವಾರ ಸಭೆ ಸೇರಿದ್ದ ಸಚಿವರು, ಶಾಸಕರು ದೆಹಲಿಗೆ ಹೋಗಿ
ಲಿಟಿಗೇಷನ್ ಮುಕ್ತ ನೇಮಕಾತಿಯೇ ಸರ್ಕಾರದ ಮುಂದಿನ ದೊಡ್ಡ ಸವಾಲು
ಸರ್ಕಾರದ ಮೇಲೆ ಯುವಜನತೆಗೆ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸ ಉಂಟಾಗುವುದು ಘೋಷಿತ ಹುದ್ದೆಗಳ ನೇಮಕಾತಿ ಪ್ರಕ್ರಿಯೆ, ಯಾವ ಲಿಟಿಗೇಷನ್ ಚಕ್ರವ್ಯೂಹಕ್ಕೂ ಸಿಲುಕದೆ ಇದು ಪೂರ್ಣಗೊಂಡಾಗ ಮಾತ್ರ. ಸರ್ಕಾರವೀಗ ಘೋಷಿಸಿರುವ ಹುದ್ದೆಗಳ ಭರ್ತಿ ಯುವ ಸಮೂಹಕ್ಕೆ ಬಹುದೊಡ್ಡ ಪರಿಹಾರ ಎಂಬುದು ಗೋಚರಿಸಿದರೂ, ಕಾನೂನು
ಗಂಡನ ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಬೆಳ್ಳಿ ಕದ್ದ ಮಹಿಳೆಯ ಬಂಧನ
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗಂಡನ ಚಿಕಿತ್ಸೆ ವೆಚ್ಚಕ್ಕಾಗಿ ಮಹಿಳೆ ಬೆಂಗಳೂರಿನಲ್ಲಿ ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ 12.5 ಕೆಜಿ ಬೆಳ್ಳಿ ಕಳವು ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ. ಜೀವನ್ ಭೀಮಾ ನಗರ ಪೊಲೀಸರು ಆರೋಪಿ ಚೈತ್ರಾ ಎಂಬಾಕೆಯನ್ನು ಬಂಧಿಸಿ 35 ಲಕ್ಷ ರೂ. ಮೌಲ್ಯದ
2028ರ ವೇಳೆಗೆ 50 ಸಾವಿರ ವಿದ್ಯಾರ್ಥಿಗಳಿಗೆ ಎವಿಜಿಸಿ-ಎಕ್ಸ್ ಆರ್ ತರಬೇತಿ; ಡಿಸಿಎಂ
ಎವಿಜಿಸಿ- ಎಕ್ಸ್ ಆರ್ ವಿಭಾಗದಲ್ಲಿ 2028 ರ ವೇಳೆಗೆ ಸುಮಾರು 50,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. 70% ಉದ್ಯೋಗಿಗಳು ಸೃಜನಶೀಲ ವೃತ್ತಿಪರರಾಗಿದ್ದಾರೆ. ಈ ಮೂಲಕ, 2028 ರ ವೇಳೆಗೆ 30,000 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ
ಮಾಜಿ ಸಿಎಂ ದಿ. ಕೆಸಿ ರೆಡ್ಡಿಯವರ ಆದರ್ಶಗಳು ನಮಗೆ ಸ್ಫೂರ್ತಿ: ಸಿದ್ದರಾಮಯ್ಯ
ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಕೆಸಿ ರೆಡ್ಡಿಯವರ ಆದರ್ಶಗಳು ನಮಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನ ನೀಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆ ಸಿ ರೆಡ್ಡಿ ಯವರ ಪುಣ್ಯ ತಿಥಿಯ
ಕಮಿಶನ್ ಆಸೆಗಾಗಿ ಕ್ರೀಡಾಂಗಣ, ಕೆಎಸ್‌ಐಸಿ ಮುಚ್ಚಿಹಾಕುತ್ತಿರುವ ಕಾಂಗ್ರೆಸ್ ಸರ್ಕಾರ: ಆರ್ ಅಶೋಕ
ಕಮಿಶನ್ ಆಸೆಗಾಗಿ ಹಾಗೂ ಕೆಎಸ್‌ಐಸಿ ಮುಚ್ಚಿಹಾಕಲು ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಈ ಯೋಜನೆ ಕೈ ಬಿಡದೇ ಇದ್ದರೆ ಬಿಜೆಪಿಯಿಂದ ʼಸೇವ್ ಮೈಸೂರು ಸಿಲ್ಕ್ʼ ಎಂಬ ಹೆಸರಿನ ಜನಾಂದೋಲನವನ್ನು ರೂಪಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ




