Menu

ಮುಸ್ಲಿಂ ಮೀಸಲಾತಿಯನ್ನು ಬಾಬಾ ಸಾಹೇಬ್‌ ಅಂಬೇಡ್ಕರರೇ ವಿರೋಧಿಸಿದ್ದರು: ಆರ್‌.ಅಶೋಕ

ಬೆಂಗಳೂರು: ಈ ಅಧಿವೇಶನದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಬಿಜೆಪಿ ಬೆಳಕು ಚೆಲ್ಲಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ. ಪ್ರತಿಭಟನೆ ಮಾಡಿರುವುದಕ್ಕೆ ಶಾಸಕರನ್ನೇ ಅಮಾನತು ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ ಪುಸ್ತಕದಲ್ಲಿ ಬಹಳ ಸುಳ್ಳುಗಳಿವೆ. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವವರು ಗ್ಯಾರಂಟಿಯನ್ನು ಹೊಗಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಧಿವೇಶನದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳನ್ನ ಜನರ

ಮುಸ್ಲಿಮರಿಗೆ 4% ಗುತ್ತಿಗೆ ಮೀಸಲು ಸಾಮಾಜಿಕ ನ್ಯಾಯ: ಹೆಚ್‌ಡಿಕೆ

ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ನಿಲುವು ಸ್ಪಷ್ಟಪಡಿಸಿರುವ ಜೆಡಿಎಸ್ ಪಕ್ಷವು  ಬಿಜೆಪಿ-ಜೆಡಿಎಸ್  ಮೈತ್ರಿ ನಡುವೆ ಮೀಸಲಾತಿ ಬೆಂಕಿ ಹಚ್ಚಲು ಹೊರಟಿದ್ದವರನ್ನು ಕಕ್ಕಾಬಿಕ್ಕಿಯಾಗಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ, ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಬಗ್ಗೆ ಮಾಧ್ಯಮ ಹೇಳಿಕೆ

ಕಲಬುರಗಿ ಆಸ್ಪತ್ರೆಯಲ್ಲಿ ಬಾಣಂತಿ, ಶಿಶು ಸಾವು: ಕುಟುಂಬದ ದಾಂಧಲೆ

ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ತಾಯಿ ಹಾಗೂ ನವಜಾತ ಶಿಶು ಮೃತಪಟ್ಟಿದ್ದಾರೆ. ಹೆರಿಗೆಗೂ ಮುನ್ನ ಗರ್ಭದಲ್ಲಿಯೇ ಮಗು ಸತ್ತಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದು, ಲೋ ಬಿಪಿಯಿಂದ ತಾಯಿಯೂ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕಲಬುರಗಿ ನಗರದ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿರುವ

ವಿಜಯಪುರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ತಂದೆ ಅಪಘಾತಕ್ಕೆ ಬಲಿ

ವಿಜಯಪುರ ಜಿಲ್ಲೆಯ ಕಗ್ಗೋಡ ಗ್ರಾಮದ ಬಳಿಯ 52ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಬೈಕ್‌ಗೆ ಲಾರಿ ಡಿಕ್ಕಿಯಾಗಿ ತಂದೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ವೆಂಕು ಚವ್ಹಾಣ (43). ಮೃತ ಬೈಕ್ ಸವಾರ. ಈ ಅಪಘಾತದಲ್ಲಿ ಪುತ್ರಿಯರಾದ

ಬಿಜೆಪಿಯಿಂದ ಅಪಪ್ರಚಾರ, ನನ್ನ ಹೇಳಿಕೆ ತಿರುಚಿರುವವರ ವಿರುದ್ಧ ಕಾನೂನು ಹೋರಾಟ: ಡಿ.ಕೆ.ಶಿವಕುಮಾರ್

“ಸಂವಿಧಾನ ಬದಲಾವಣೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿ ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುವೆ ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ

ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ, ರಜತ್‌ ವಿರುದ್ಧ ಎಫ್‌ಐಆರ್‌

ಬಿಗ್ ಬಾಸ್ ಸೀಸನ್ ೧೧ರ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿನಯ್ ಗೌಡ ಹಾಗೂ ರಜತ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿ ವೀಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು,

ಸೈಕಲ್‌ ಕಳ್ಳರ ಬಂಧಿಸಿದ ಪೊಲೀಸರಿಗೆ ಸಿಂಧನೂರು ಕಮಿಷನರ್‌ ಶ್ಲಾಘನೆ

21 ಮೋಟಾರ್ ಸೈಕಲ್ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ,ಮಾಲೀಕರಿಗೆ ಮುಟ್ಟಿಸುವ ಕೆಲಸ ಸಿಂಧನೂರಿನ ಪೊಲೀಸರು ಮಾಡುತ್ತಿದ್ದಾರೆ, ಇವರ ಕೆಲಸ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಪುಟ್ಟ ಮಾದಯ್ಯ ಹೇಳಿದರು. ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಬಳಗನೂರ್

ಬಂಗಾರಪೇಟೆಯಲ್ಲಿ ವಾಕಿಂಗ್‌ ಮಾಡುತ್ತಿದ್ದವರಿಗೆ ಬೈಕ್‌ ಡಿಕ್ಕಿ: ನಿವೃತ್ತ ಉಪನ್ಯಾಸಕರಿಬ್ಬರು ಬಲಿ

ಕೋಲಾರದ ಬಂಗಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ಯು ವಿಹಾರಕ್ಕೆಂದು ತೆರಳಿದ್ದ ನಿವೃತ್ತ ಉಪನ್ಯಾಸಕರಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ನಿವೃತ್ತ ಕನ್ನಡ ಉಪನ್ಯಾಸಕ ಕೆ.ಬಿ.ಮೋಹನ್ (64), ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀ ನಾರಾಯಣ (62) ಮೃತಪಟ್ಟವರು. ಸಂಜೆ ವಾಯು

ಸುಪ್ರೀಂ ತಲುಪಿದ ಕರ್ನಾಟಕದ ಹನಿ ಟ್ರ್ಯಾಪಿಂಗ್

ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಹನಿ ಟ್ರ್ಯಾಪಿಂಗ್ ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಅರ್ಜಿದಾರರು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎದುರು ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್​ ಸಮ್ಮತಿಸಿದ್ದು,

ಹಾಸನದಲ್ಲಿ ಫೋಟೋಶೂಟ್ ಮಾಡುತ್ತಿದ್ದ ಯುವಕ ನೀರಿಗೆ ಬಿದ್ದು ಸಾವು

ಹಾಸನ ತಾಲೂಕಿನ ಹಾಲುವಾಗಿಲು ಗ್ರಾಮದಲ್ಲಿ ಫೋಟೋಶೂಟ್ ಮಾಡುತ್ತಿದ್ದ ವೇಳೆ ಯುವಕನೊಬ್ಬ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನಾಗೇಂದ್ರ (19) ಮೃತ ಯುವಕ. ಖಾಸಗಿ ಚಿನ್ನಾಭರಣ ಮಳಿಗೆಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಹಾಗೂ ಮಂಜುನಾಥ್ ಮುಗಿಸಿ ಹಾಲುವಾಗಿಲು ಬಳಿ