Menu

ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ: ಮೂವರ ಸಾವು

ಹಾವೇರಿಯಲ್ಲಿ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ಬಳಿಕ ದೀಪಾವಳಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ. ಕೋಡಿಹಳ್ಳಿ ಹೆಸ್ಕಾಂ ನಿವೃತ್ತ ನೌಕರ, ದಾನೇಶ್ವರಿ ನಗರದ ಚಂದ್ರಶೇಖರ ಕೋಡಿಹಳ್ಳಿ (75) ಮನೆಗೆ ಹೊರಟಿದ್ದಾಗ ಬರೋಡಾ ಬ್ಯಾಂಕ್ ಎದುರುಗಡೆ ಹಿಂದಿನಿಂದ ಬಂದ ಹೋರಿ ಗುದ್ದಿದೆ. ಗಾಯಗೊಂಡಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಹಾವೇರಿ ನಗರದ

ಪ್ರಿಯಾಂಕ್‌ ಖರ್ಗೆ ಡಿಸಿಎಂ ಆಗಲಿದ್ದಾರೆ: ಶ್ರೀ ರಾಮುಲು

ಪ್ರಿಯಾಂಕ್‌ ಖರ್ಗೆ ರಾಜ್ಯದ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಿಯಾಂಕ್‌ ಖರ್ಗೆ ಉಪಮುಖ್ಯಮಂತ್ರಿ ಆಗುವ ಬಗ್ಗೆ ದೆಹಲಿಯಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಪ್ಲ್ಯಾನ್ ನಡೆದಿದೆ ಎಂದರು. ಒಂದು

ಹಾಸನಾಂಬೆ ಗರ್ಭಗುಡಿ ಬಂದ್: ದಾಖಲೆಯ 25 ಕೋಟಿ ಆದಾಯ ನಿರೀಕ್ಷೆ

ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ನೆರವೇರಿತು. ಈ ಮೂಲಕ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿಗೆ ಬಾಗಿಲು ಮುಚ್ಚಲಾಯಿತು. ಅಕ್ಟೋಬರ್ 9ರಿಂದ ನಡೆದ ಹಾಸನಾಂಬೆ ದೇವಿಯ ದರ್ಶನ ಒಂದು ತಿಂಗಳ ಕಾಲ ಸುಗಮನವಾಗಿ ನೆರವೇರಿದ್ದು, ದಾಖಲೆ

ದೀಪಾವಳಿ ಪಟಾಕಿ: ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಹಾನಿ

ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಬೇಕಿದ್ದ ಪಟಾಕಿಯಿಂದ ಬೆಂಗಳೂರಿನಲ್ಲಿ 250ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಹಾನಿಯಾಗಿದೆ. ಪಟಾಕಿ ಸಿಡಿದು ಕೆಲವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿರುವುದು ಆಘಾತಕಾರಿ ವಿಚಾರ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 90 ಗಾಯಾಳುಗಳು ದಾಖಲಾಗಿದ್ದರೆ, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 37, ಶಂಕರ

ಅ.25ರಿಂದ ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಆರಂಭ!

ಬೆಂಗಳೂರು: ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ ಈಗ ಎಲ್ಲರ ಅಚ್ಚುಮೆಚ್ಚಿನ ನಾನ್-ಫಿಕ್ಷನ್ ಶೋ ಕಾಮಿಡಿ ಖಿಲಾಡಿಗಳನ್ನು ಮತ್ತೆ ತಂದಿದೆ. ಇಡೀ ರಾಜ್ಯವನ್ನೇ ನಗಿಸಿದ ಯಶಸ್ವಿ ಸೀಸನ್‌ಗಳನ್ನು ನೀಡಿದ ನಂತರ, ಕಾಮಿಡಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ

ಡಿಕೆ ಶಿವಕುಮಾರ್ ದಾರಿ ತಪ್ಪಿದ ಮಗ, ಪಂಗನಾಮ ಪಕ್ಕಾ ಎಂದ ಆರ್‌. ಅಶೋಕ

ಡಿಸಿಎಂ ಡಿಕೆ ಶಿವಕುಮಾರ್ ದಾರಿ ತಪ್ಪಿದ ಮಗ. ಅವರು ಚಾಮುಂಡಿ, ಮಾರಮ್ಮ, ಗೌರಮ್ಮ, ರಾಘವೇಂದ್ರ ಸ್ವಾಮಿ ಎಂದು ಟೆಂಪಲ್ ರನ್ ಮಾಡುವುದರಿಂದ ಪ್ರಯೋಜನವಿಲ್ಲ. ಇಟಲಿ ಟೆಂಪಲ್ ಸುತ್ತಬೇಕು. ಅಲ್ಲಿ ಸರಿಯಾದ ಕಪ್ಪ ಕಾಣಿಕೆ ಕೊಟ್ಟು, ಪ್ರದಕ್ಷಿಣೆ ಹಾಕಿದರೆ ಮಾತ್ರ ಮುಖ್ಯಮಂತ್ರಿ ಆಗುತ್ತಾರೆ

ನವೆಂಬರ್‌ನಿಂದ ದೇಶಾದ್ಯಂತ ಚುನಾವಣಾ ಪಟ್ಟಿ ವಿಶೇಷ ಪರಿಷ್ಕರಣೆ

ಚುನಾವಣಾ ಆಯೋಗವು ನವೆಂಬರ್ ಆರಂಭದಿಂದ ಹಂತ ಹಂತವಾಗಿ ದೇಶಾದ್ಯಂತ ಚುನಾವಣಾ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR ) ನಡೆಸಲಿದೆ. 2026 ರಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಮೊದಲು ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಸಂಬಂಧ ದೇಶದ ಎಲ್ಲಾ ರಾಜ್ಯಗಳು ಮತ್ತು

ಖಾದ್ಯ ತೈಲ ಘಟಕ: ಪಾಲುದಾರರ ನೋಂದಣಿ ಕಡ್ಡಾಯವೆಂದ ಸಚಿವ ಪ್ರಲ್ಹಾದ್ ಜೋಶಿ

ಖಾದ್ಯ ತೈಲ ತಯಾರಕರು, ಸಂಸ್ಕರಣಾ ಘಟಕಗಳು, ಮಿಶ್ರಣಕಾರರು, ಮರು-ಪ್ಯಾಕರ್‌ಗಳು ಮತ್ತಿತರ ಪಾಲುದಾರರ ನೋಂದಣಿ ಕಡ್ಡಾಯವಾಗಿದೆ. ಆನ್‌ಲೈನ್ ಪೋರ್ಟಲ್ ಮೂಲಕ ಮಾಸಿಕ ಉತ್ಪಾದನೆ ಮತ್ತು ಸ್ಟಾಕ್ ರಿಟರ್ನ್‌ ಸಲ್ಲಿಕೆ ಕೂಡ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್

ಹೀಗೆಲ್ಲ ತನಿಖೆಯಾಗುವುದು ಗೊತ್ತಿದ್ದರೆ ಕೃತಿಕಾಳ ಕೊಲೆ ಮಾಡುತ್ತಿರಲಿಲ್ಲವೆಂದ ಪತಿ ಡಾ. ಮಹೇಂದ್ರ ರೆಡ್ಡಿ

ಅನಸ್ತೇಷಿಯಾ ಕೊಟ್ಟು ಸಾಯಿಸಿದರೆ ಸಾವಿನ ನಿಖರ ಕಾರಣ ಪೊಲೀಸರ ತನಿಖೆಯಲ್ಲಿ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದೆ. ಪೊಲೀಸರು ಇಷ್ಟು ಟೆಕ್ನಿಕಲ್ ಆಗಿ ಮತ್ತು ಆಳವಾಗಿ ತನಿಖೆ ನಡೆಸುತ್ತಾರೆ ಎಂದು ಗೊತ್ತಿರಲಿಲ್ಲ. ಹೀಗೆ ತನಿಖೆಯಾಗುತ್ತದೆ ಎಂದು ತಿಳಿದಿದ್ದರೆ ಕೊಲೆಯೇ ಮಾಡುತ್ತಿರಲಿಲ್ಲ ಎಂದು ವೈದ್ಯೆ ಕೃತಿಕಾ

ಮೈಸೂರು ರೈಲು ನಿಲ್ದಾಣದಲ್ಲಿ ಮಗು ಅಪಹರಣ: ರಕ್ಷಿಸಿದ ಪೊಲೀಸ್‌

ಮೈಸೂರು ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಣ ಮಾಡಲು ವೃದ್ಧ ಮಹಿಳೆಯೊಬ್ಬರು ಯತ್ನಿಸಿ ಪೊಲೀಸ್‌ ಕೈಗೆ ಸಿಕ್ಕಿ ಬಿದ್ದಿದ್ದಾರೆ, ಮಗುವನ್ನು ಕೂಡ ಪೊಲೀಸರು ಸುರಕ್ಷಿತವಾಗಿ ಕುಟುಂಬಕ್ಕೆ ಒಪ್ಪಿಸಿದ್ದಾರೆ. 50 ವರ್ಷದ ಆರೋಪಿ ವೃದ್ಧೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರು