ಬೆಂಗಳೂರಿನ 10 ವರ್ಷದ ಬಾಲಕಿ ಪರಿಣಿತಾ ಬರೆದ ‘ಟೇಲ್ಸ್ ಬೈ ಪರಿ’ ಕೃತಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ
ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ ‘ಟೇಲ್ಸ್ ಬೈ ಪರಿ’ ಪುಸ್ತಕ ಬರೆದು ಬೆಂಗಳೂರಿನ ಪುಟ್ಟ ಲೇಖಕಿ ಪರಿಣಿತಾ ಬಿ. ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರಳಾಗಿದ್ದಾಳೆ. ಬಸವನಗುಡಿಯ ಎನ್ಇಟಿ ಪಬ್ಲಿಕ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಪರಿಣಿತಾ ಬರೆದಿರುವ ಪುಸಕ್ತ ‘ಟೇಲ್ಸ್ ಬೈ ಪರಿ’. ಈಗ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡಿದ್ದು, “ಯುವ ಲೇಖಕಿ” ಎಂಬ ಮನ್ನಣೆಯನ್ನೂ ತಂದುಕೊಟ್ಟಿದೆ. ಪರಿಣಿತಾಳ
ಸ್ವಿಜರ್ಲೆಂಡ್ ನಲ್ಲಿ ಹೊಸ ವರ್ಷಾಚರಣೆ ವೇಳೆ ಬಾರ್ ನಲ್ಲಿ ಸ್ಫೋಟ: 40 ಮಂದಿ ದುರ್ಮರಣ
ಹೊಸ ವರ್ಷದ ಸಂಭ್ರಮ ಆಚರಣೆ ವೇಳೆ ಸ್ವಿಜರ್ಲೆಂಡ್ ನ ಬಾರ್ ನಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 40 ಮಂದಿ ಮೃತಪಟ್ಟಿದ್ದಾರೆ. ಬುಧವಾರ ತಡರಾತ್ರಿ ಕ್ರಾನ್ಸ್ ಮೊಂಟಾನಾ ಎಂಬಲ್ಲಿ ಸ್ಕೀ ರೆಸಾರ್ಟ್ (ಪರ್ವತಾರೋಹಿಗಳ ರೆಸಾರ್ಟ್) ಲೇ ಕಾನ್ಸಲ್ಟೇಷನ್ ಬಾರ್ ಅಂಡ್ ರೆಸ್ಟೋರೆಂಟ್
ಮನೆಯೊಳಗೆ ಆಭರಣ ವ್ಯಾಪಾರಿ ಮತ್ತು ಪತ್ನಿಗೆ ಗುಂಡಿಕ್ಕಿ ಹತ್ಯೆ
ಮಧ್ಯಪ್ರದೇಶದ ಮಂದ್ಸೌರ್ನಲ್ಲಿ ಆಭರಣ ವ್ಯಾಪಾರಿ ಮತ್ತು ಪತ್ನಿಯನ್ನು ಮನೆಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವ್ಯವಹಾರದ ವಿವಾದವೇ ಈ ಕೊಲೆಗಳಿಗೆ ಕಾರಣ ಎನ್ನಲಾಗಿದೆ. ಅದೇ ಸ್ಥಳದಲ್ಲಿ ಮತತ್ತೊಬ್ಬ ವ್ಯಕ್ತಿ ವಿಕಾಸ್ ಎಂಬವವರ ಶವವೂ ಪತ್ತೆಯಾಗಿದೆ. ದಿಲೀಪ್ ಜೈನ್ ಮತ್ತು ಅವರ
ಜೈಲಲ್ಲಿದ್ದಾಗ ಡಿಸಿಎಂ ಆತ್ಮಸ್ಥೈರ್ಯ ತುಂಬಿದ್ದರು, ಯಾವುದೇ ಸಹಿ ಹಾಕಿಸಿಕೊಂಡಿಲ್ಲ: ವೀರೇಂದ್ರ ಪಪ್ಪಿ
ನಾನು ಬಿಹಾರ ಚುನಾವಣೆಗೆ ಯಾವುದೇ ಹಣ ನೀಡಿಲ್ಲ. ಜೈಲಲ್ಲಿ ಇದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಭೇಟಿಯಾಗಿದ್ದರು. ನನಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರು ನನ್ನಿಂದ ಯಾವುದೇ ಸಹಿ ಹಾಕಿಸಿಕೊಂಡಿಲ್ಲ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದ್ದಾರೆ. ಅಕ್ರಮ ಹಣ
ಇಷ್ಟೊಂದು ಅಕ್ರಮ ವಾಸಿಗಳು ಕೋಗಿಲು ಸೇರಿದ್ದು ಹೇಗೆಂದು ತನಿಖೆಯಾಗಲಿ: ಸುರೇಶ್ ಕುಮಾರ್ ಆಗ್ರಹ
ಕೋಗಿಲು ಕ್ರಾಸ್‌ನ ಡಂಪ್ ಸೈಟ್‌ನಲ್ಲಿ ಇಷ್ಟೊಂದು ಜನ ಬಂದು ಅಕ್ರಮವಾಗಿ ಶೆಡ್ ನಿರ್ಮಿಸಿಕೊಂಡು ವಾಸಿಸಿದ್ದು ಹೇಗೆ ಎಂಬುದು ಮೊದಲು ತನಿಖೆಯಾಗಬೇಕು ಎಂದು ಶಾಸಕ ಸುರೇಶ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೋಗಿಲು ಲೇಔಟ್ ಅಕ್ರಮ ಮನೆ ಸಕ್ರಮ ಮಾಡಿದ ಸರ್ಕಾರದ ಕ್ರಮವನ್ನು ಕಾಂಗ್ರೆಸ್
ತರೀಕೆರೆಯಲ್ಲಿ ಯುವತಿಗೆ ಬರ್ತ್‌ಡೇ ವಿಶ್ ಮಾಡಿದ ಯುವಕನ ಕೊಲೆ
ಸೋಶಿಯಲ್ ಮೀಡಿಯಾದಲ್ಲಿ ಯುವತಿಗೆ ಬರ್ತ್‌ಡೇ ವಿಶ್ ಮಾಡಿದ ಕಾರಣಕ್ಕೆ ಯುವಕನೊಬ್ಬ ಕೊಲೆಯಾಗಿ ಹೋದ ಘಟನೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ. ಉಡೇವಾ ಗ್ರಾಮದ ನಿವಾಸಿ ಮಂಜುನಾಥ್ (28) ಎಂಬ ಯುವಕನನ್ನು ವೇಣು ಹಾಗೂ ಅವನ ಸ್ನೇಹಿತರು ಕೊಲೆ ಮಾಡಿದ್ದಾರೆ. ಕೊಲೆಯಾಗಿ
ಉದ್ಯಮಿ, ಶಿಕ್ಷಣ ತಜ್ಞ ನಿಟ್ಟೆ ಡಾ. ಎನ್. ವಿನಯ ಹೆಗ್ಡೆ ನಿಧನ
ಅವಿಭಜಿತ ದಕ್ಷಿಣ ಕನ್ನಡದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್. ವಿನಯ ಹೆಗ್ಡೆ (86) ಅವರು ಗುರುವಾರ ಬೆಳಗಿನ ಜಾವ ನಿಧನರಾದರು. ಶಿಕ್ಷಣ ತಜ್ಞ, ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದ ಅವರು, ನಿಟ್ಟೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬುರ್ಖಾ ಧರಿಸಿ ಲಿಪ್ಸ್ಟಿಕ್ ಹಚ್ಚಿ ಓಡಾಡುತ್ತಿದ್ದ ಬಾಲಕಿಯ ರೇಪಿಸ್ಟ್ ಪಿಸಿ ರಾಜೇಂದ್ರ ಸಿಸೋಡಿಯಾ ಅರೆಸ್ಟ್
ರಾಜಸ್ಥಾನದ ಧೋಲ್ಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಬುರ್ಖಾ ಧರಿಸಿ ಲಿಪ್ಸ್ಟಿಕ್ ಹಚ್ಚಿಕೊಂಡು ಮಹಿಳೆಯಂತೆ ನಟಿಸುತ್ತ ತಪ್ಪಿಸಿಕೊಳ್ಳುತ್ತಿದ್ದ ಪೊಲೀಸ್ ಪೇದೆಯನ್ನು ಪೊಲೀಸರು ಬಂಧಿಸಿದ್ದಾರೆ. ಧೋಲ್ಪುರದಲ್ಲಿ ಬಾಲಕಿ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ರಾಜೇಂದ್ರ ಸಿಸೋಡಿಯಾ ಎಂಬಾತ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಆತನನ್ನು
ಬೆಂಗಳೂರಿನಲ್ಲಿ ಎಂಟು ಕೋಟಿ ರೂ. ಮೌಲ್ಯದ 160 ಕೆಜಿ ಮಾದಕ ಎಲೆ ಜಪ್ತಿ ಮಾಡಿದ NCB
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಬೆಂಗಳೂರಿನಲ್ಲಿ ಎಂಟು ಕೋಟಿ ರೂಪಾಯಿ ಮೌಲ್ಯದ 160 ಕೆಜಿ ‘ಖಾಟ್ ಎಲೆಗಳು’ ಎಂಬ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದೆ. 2018ರಲ್ಲಿ ಮಾದಕ ದ್ರವ್ಯಗಳು ಮತ್ತು ಮಾದಕ ವಸ್ತುಗಳ ಕಾಯ್ದೆಯಡಿ ಖಾಟ್ ಎಲೆಗಳನ್ನು ಮಾದಕ ವಸ್ತು ಎಂದು ಸೇರಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಅಕ್ರಮ: ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ಜಸ್ಟಿಸ್ ಡಿ ಕುನ್ಹಾ ಆಯೋಗ
ರಾಜ್ಯದಲ್ಲಿ ಕೋವಿಡ್ ಅವಧಿಯಲ್ಲಿ ಸಂಭವಿಸಿದ ಸಾವುಗಳು ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳ ಕುರಿತಂತೆ ತನಿಖೆ ನಡೆಸಿರುವ ನ್ಯಾ. ಜಾನ್ ಮೈಕಲ್ ಡಿ ಕುನ್ಹಾ ಆಯೋಗ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. ಬೆಳಗಾವಿ ಜಿಲ್ಲೆ ವ್ಯಾಪ್ತಿಯ




