Sunday, September 13, 2026
Menu

ಬೆಂಗಳೂರಿನ ರಸ್ತೆಯಲ್ಲಿ ಹಗಲಲ್ಲೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಾಡುಹಗಲೇ ನಡು ರಸ್ತೆಯಲ್ಲಿ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ನಡೆದಿದೆ.

ಸಂತೋಷ್​​ ಎಂಬಾತನ ಮೇಲೆ 68 ಬಾರಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ದಾಳಿ ನಡೆದಿದೆ. ಶರತ್​​ ಮತ್ತು ಗ್ಯಾಂಗ್​​ ಈ ದಾಳಿ ನಡೆಸಿದ ಬಳಿಕ ಡ್ಯಾನ್ಸ್​​ ಮಾಡಿ ವಿಕೃತಿ ತೋರಿದ್ದಾರೆ.

ಕಾರು ಓಡಿಸುವ ವಿಚಾರಕ್ಕೆ ಸ್ನೇಹಿತ ಮೋಹನ್​​ ಎಂಬಾತನ ಜೊತೆಗೆ ಸಂತೋಷ್​​ ಬೆಂಗಳೂರಿನಲ್ಲಿ ಗಲಾಟೆ ಮಾಡಿಕೊಂಡಿದ್ದ. ಬಳಿಕ ಮಂಡ್ಯದಲ್ಲಿ ಕುಡಿದು ಕೊಳ್ಳೇಗಾಲಕ್ಕೆ ಹೋಗಿದ್ದಾಗ ಮೋಹನ್​​ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದ. 2024ರಲ್ಲಿ ಈ ಘಟನೆ ನಡೆದಿದ್ದು, ಮೋಹನನ್ನು ಕಾರಿನಲ್ಲಿ ಕೂರಿಸಿ ಸಂತೋಷ್​​ ಪರಾರಿಯಾಗಿದ್ದ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಆರೋಪಿ ಸಂತೋಷನನ್ನು ಬಂಧಿಸಿದ್ದರು. ಜೈಲು ಸೇರಿದ್ದ ಸಂತೋಷ್ 4 ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ. ಈತನಿಂದ ಕೊಲೆಯಾಗಿದ್ದ ಮೋಹನ್​​ನ​​ ಸಹೋದರ ಶರತ್ ತಂಡಕಟ್ಟಿಕೊಂಡು ಬಂದು ಸಂತೋಷ್​​ ಮೇಲೆ ದಾಳಿ ಮಾಡಿದ್ದಾನೆ ಎನ್ನಲಾಗಿದೆ.

ಹಳೆ ದ್ವೇಷದ ಹಿನ್ನಲೆ ಶರತ್ ಆ್ಯಂಡ್​​ ಗ್ಯಾಂಗ್ ಸಂತೋಷ್​​ ಮೇಲೆ ಭಯಾನಕ ದಾಳಿ ನಡೆಸಿದೆ, . ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಂತೋಷ್‌ ಸಂತೋಷ್​​ ಬದುಕಿರುವುದೇ ಪವಾಡ ಎಂಬಂತಿದೆ.

Related Posts

Leave a Reply

Your email address will not be published. Required fields are marked *