ನಗೋಯಾ (ಜಪಾನ್): ಜಪಾನ್ನ ಐಚಿ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಅಸಾಧಾರಣ ಸಾಮರ್ಥ್ಯವನ್ನು ಮುಂದುವರಿಸಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತದ ಸಂದೀಪ್ ಸಿಂಗ್ ಮನ್ ಮತ್ತು ಜಾವ್ಲಿನ್ ಥ್ರೋ ವಿಭಾಗದಲ್ಲಿ ಹ್ಯಾನಿ ಅವರು ಅದ್ಭುತ ಪ್ರದರ್ಶನ ನೀಡಿ, ವಿಶ್ವ ದಾಖಲೆಯೊಂದಿಗೆ ದೇಶಕ್ಕೆ ಮತ್ತೆರಡು ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದಾರೆ.
ಸಂದೀಪ್ ಸಿಂಗ್ ಮನ್ ಮತ್ತು ಅಜಯ್ ಕುಮಾರ್ ಸಾಧನೆ
ಪುರುಷರ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಭಾರತದ ಸಂದೀಪ್ ಸಿಂಗ್ ಮನ್ ಅತ್ಯುತ್ತಮ ನಿರ್ವಹಣೆ ತೋರಿದ್ದಾರೆ. ರೇಸ್ ಆರಂಭದಿಂದಲೂ ಮುನ್ನಡೆ ಸಾಧಿಸಿದ ಅವರು, ಇಡೀ ಸ್ಪರ್ಧೆಯಲ್ಲಿ ಆ ಮುನ್ನಡೆಯನ್ನು ಯಶಸ್ವಿಯಾಗಿ ಕಾಯ್ದುಕೊಂಡು ಕೇವಲ 52.28 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಈ ರೋಮಾಂಚಕಾರಿ ರೇಸ್ನಲ್ಲಿ ಸೌದಿ ಅರೇಬಿಯಾದ ಅಲ್ಸಾನಾ ನೂರ್ ಅವರು ಕೊನೆಯ ಹಂತದಲ್ಲಿ ತೀವ್ರ ಪೈಪೋಟಿ ನೀಡಿದರಾದರೂ, ಸಂದೀಪ್ ಸಿಂಗ್ ಗಟ್ಟಿಯಾಗಿ ನಿಂತು ಭಾರತಕ್ಕೆ ಅಗ್ರಸ್ಥಾನ ತಂದುಕೊಟ್ಟರು. ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡ ಮತ್ತೊಬ್ಬ ಭಾರತೀಯ ಕ್ರೀಡಾಪಟು ಅಜಯ್ ಕುಮಾರ್ಅವರು 53.61 ಸೆಕೆಂಡುಗಳ ಪ್ರಯತ್ನದೊಂದಿಗೆ ಕಂಚಿನ ಪದಕವನ್ನು ಗೆದ್ದು ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.
ಜಾವೆಲಿನ್ನಲ್ಲಿ ಹ್ಯಾನಿ ಮಿಂಚು
ಟ್ರ್ಯಾಕ್ ಮತ್ತು ಫೀಲ್ಡ್ನ ಮತ್ತೊಂದು ಪ್ರಮುಖ ವಿಭಾಗವಾದ ಜಾವೆಲಿನ್ ಎಸೆತದಲ್ಲಿ ಹ್ಯಾನಿ ಅವರು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಇವರ ಈ ಶ್ರೇಷ್ಠ ಸಾಧನೆಯು ಭಾರತೀಯ ಪ್ಯಾರಾ ಅಥ್ಲೀಟ್ಗಳ ಆತ್ಮವಿಶ್ವಾಸವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
ವಿಶ್ವ ದಾಖಲೆಯೊಂದಿಗೆ ಭಾರತಕ್ಕೆ ಹೆಮ್ಮೆ ತಂದಿರುವ ಈ ಕ್ರೀಡಾಪಟುಗಳ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
#AsianParaGames2026 #TeamIndia #SandeepSinghMann #Haney #GoldMedal #WorldRecord #AichiNagoya #UdayakalaNews #ParaAthletics #IndianSports


