ಅಪರಾಧ
ಬೆಂಗಳೂರಿಂದ ಬಸ್ಸಲ್ಲಿ 30.93 ಲಕ್ಷ ರೂಪಾಯಿ ಸಾಗಿಸುತ್ತಿದ್ದ ಕೇರಳದ ಯುವಕ ಅರೆಸ್ಟ್
ವಯನಾಡಿನ ಕೇರಳ-ಕರ್ನಾಟಕ ಗಡಿಯ ತೋಲ್ಪೆಟ್ಟಿಯಲ್ಲಿ 30.93 ಲಕ್ಷ ರೂಪಾಯಿ ಸಾಗಿಸುತ್ತಿದ್ದ ಯುವಕನನ್ನು ಅಬಕಾರಿ ಇಲಾಖೆ ಬಂಧಿಸಿದೆ. ಕೋಯಿಕ್ಕೋಡ್‌ನ ಕೊಡುವಳ್ಳಿಯ ಮೊಹಮ್ಮದ್ ಸಾಮಿರ್ ಬಂಧಿತ ಯುವಕ. 30,93,900 ರೂಪಾಯಿಯೊಂದಿಗೆ ಬೆಂಗಳೂರಿನಿಂದ ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವಕ ಪ್ರಯಾಣಿಸುತ್ತಿದ್ದ. ಚೆಕ್‌ಪೋಸ್ಟ್‌ಗೆ ಬಂದಾಗ ಅಬಕಾರಿ ಇಲಾಖೆ ಮಾದಕವಸ್ತು ಸಾಗಣೆ ಬಗ್ಗೆ ತಪಾಸಣೆ ನಡೆಸುತ್ತಿದ್ದಾಗ ಯುವಕ ಗಾಬರಿಯಾಗಿದ್ದ, ಇದರಿಂದ ಅನುಮಾನಗೊಂಡ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ನೋಟಿನ ಕಂತೆಗಳು ಸಿಕ್ಕಿವೆ. ಹಣವನ್ನು ಯಾರಿಗೆ,
ಸೀಟ್ ಬ್ಲಾಕಿಂಗ್, ಪಿಎಸ್‌ಐ ನೇಮಕ ಅಕ್ರಮ: ಇಡಿಯಿಂದ ಆಸ್ತಿ ಮುಟ್ಟುಗೋಲು
ಬೆಂಗಳೂರಿನ ಬಿಎಂಎಸ್ ಎಜುಕೇಶನ್ ಟ್ರಸ್ಟ್‌ಗೆ ಸಂಬಂಧಿಸಿದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣ ಪ್ರಕರಣದಲ್ಲಿ ಇಡಿ 19.46 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರೆ, ರಾಜ್ಯದಲ್ಲಿ 2021–22ರಲ್ಲಿ ನಡೆದ 545 ಪಿಎಸ್‌ಐ ನೇಮಕದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 1.53 ಕೋಟಿ ರೂ.
ಸೊಸೆಯ ಎಂಗೇಜ್ಮೆಂಟ್ ಸೀರೆ ಮಗನ ಪ್ರೇಯಸಿಗೆ ಗಿಫ್ಟ್, ಅಂತರ್ಜಾತಿ ವಿವಾಹವಾದ ಜೋಡಿ ತಿಂಗಳೊಳಗೆ ಪೊಲೀಸ್ ಠಾಣೆಗೆ
ಆನೇಕಲ್‌ನ ಅತ್ತಿಬೆಲೆಯಲ್ಲಿ ನವವಿವಾಹಿತ ಅಂಬರೀಶ್ ಮತ್ತು ನಂದಿನಿ ಪರಸ್ಪರ ಗಂಭೀರ ಆರೋಪ-ಪ್ರತ್ಯಾರೋಪ ಮಾಡಿ ಪೊಲೀ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪತ್ನಿಯ ಸಂಬಂಧಿಕರು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಪತಿ ಆರೋಪಿಸಿದ್ದರೆ, ಪತಿಗೆ ಅನೈತಿಕ ಸಂಬಂಧವಿದ್ದು, ಕಿರುಕುಳ ಮತ್ತು ಜಾತಿ ನಿಂದನೆ ಮಾಡುತ್ತಾನೆಂದು
ದರೋಡೆಯಾಗಿದ್ದ 400 ಕೋಟಿ ರೂ.ಗಳ ಕಂಟೇನರ್ ಬೆಳಗಾವಿ ಗಡಿ ಭಾಗದಲ್ಲಿ ವಶ, ಇಬ್ಬರ ಬಂಧನ
ಬೆಳಗಾವಿ-ಗೋವಾ ಗಡಿ ಚೋರ್ಲಾ ಘಾಟ್ದಿಂದ ನಾಪತ್ತೆಯಾಗಿದ್ದ 400 ಕೋಟಿ ರೂ.ಗಳ ಎರಡು ಕಂಟೇನರ್ಗಳನ್ನು ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾಗ ಬೆಳಗಾವಿ ಗಡಿ ಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2025 ಅಕ್ಟೋಬರ್ 16ರಂದು ನಡೆದಿರುವ ದೇಶದ ಅತಿ ದೊಡ್ಡ ದರೋಡೆ ಪ್ರಕರಣ ಈ ಮೂಲಕ
ಯಾದಗಿರಿಯಲ್ಲಿ ಶಿಕ್ಷಕರು ಬೈದರೆಂದು ಬಾಲಕ ಆತ್ಮಹತ್ಯೆ
ಯಾದಗಿರಿಯಲ್ಲಿ ಶಿಕ್ಷಕರು ಬೈದರೆಂದು ಮನ ನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶಾಲೆಯ ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಪವನ್ (15) ಆತ್ಮಹತ್ಯೆ ಮಾಡಿಕೊಂಡ ಒಂಬತ್ತನೇ ತರಗತಿಯ ವಿದ್ಯಾರ್ಥಿ.
ಕುಕಿ ಪ್ರೇಯಸಿ ಭೇಟಿಗೆ ಬಂದ ಮೈಥಿಯಿ ಪ್ರಿಯಕರನ ಗುಂಡಿಕ್ಕಿ ಕೊಲೆ: ಮಣಿಪುರ ಮತ್ತೆ ಉದ್ವಿಗ್ನ
ಕುಕಿ ಸಮುದಾಯದ ತನ್ನ ಪ್ರೇಯಸಿಯ ಭೇಟಿಗಾಗಿ ಬಂದಿದ್ದ ಮೈಥಿಯಿ ಯುವಕನ ಕೈಕಾಲು ಕಟ್ಟಿ ಹಾಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಣಿಪುರದ ಚುರಾಚಂದ್‌ಪುರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ. ಮಣಿಪುರವು ಕುಕಿ ಹಾಗೂ ಮೈಥಿಯಿ ಸಮುದಾಯಗಳ ನಡುವಿನ ಸಂಘರ್ಷದಿಂದ
ಬಳ್ಳಾರಿಯಿಂದ ಗುಜರಾತ್ ಗೆ ಅಕ್ರಮವಾಗಿ ಸಾಗಿಸುತ್ತಿದ್ದ 523 ಚೀಲ ಪಡಿತರ ಅಕ್ಕಿ ವಶ
ಬಳ್ಳಾರಿಯಿಂದ ಗುಜರಾತ್‌ಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 523 ಚೀಲ ಪಡಿತರ ಅಕ್ಕಿಯನ್ನು ಸಹಾಯಕ ಆಯುಕ್ತ ರಾಜೇಶ್ ಹೆಚ್. ಡಿ ತಂಡ ಎಸ್.ಎಲ್.ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡನ ಒಳ ಆವರಣದಲ್ಲಿ ತಡೆ ಹಿಡಿದಿದೆ. ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಅಡ್ಡೆ
ಪತ್ನಿಗೆ ಗುಂಡಿಕ್ಕಿ ಕೊಂದು ಪೊಲೀಸರ ಸಮ್ಮುಖ ಸುಸೈಡ್ ಮಾಡಿಕೊಂಡ ಪತಿ
ಅಹಮದಾಬಾದ್‌ನ ವಸ್ತ್ರಾಪುರ ಪ್ರದೇಶದಲ್ಲಿ ನಡೆದಿದೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಶಕ್ತಿಸಿಂಹ ಗೋಹಿಲ್ ಅವರ ಸೋದರಳಿಯ ಯಶ್‌ರಾಜ್ ಸಿಂಗ್ ಗೋಹಿಲ್ ಅವರು ಪತ್ನಿ ರಾಜೇಶ್ವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದು, ನಂತರ ಪೊಲೀಸರ ಎದುರೇ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಯಶ್‌ರಾಜ್
ಬೈಲಹೊಂಗಲದಲ್ಲಿ ಮಕ್ಕಳಾಗಿಲ್ಲವೆಂದು ಹೆಂಡತಿಯ ಕಿರಿಕಿರಿ: ಕೊಲೆಗೈದು ಹೃದಯಾಘಾತ ಕತೆ ಕಟ್ಟಿದ ಗಂಡ
ಬೆಳಗಾವಿಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮದುವೆ ಆಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಕಾಟ ಕೊಡುತ್ತಿದ್ದ ಹೆಂಡತಿಯನ್ನು ಗಂಡನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪತ್ನಿ ರಾಜೇಶ್ವರಿ (21) ಕೊಲೆಯಾಗಿದ್ದು, ಪತಿ ಫಕೀರಪ್ಪ ಗಿಲಕ್ಕನವರ ಕೊಲೆ ಆರೋಪಿ. ಪತ್ನಿಯನ್ನು
ಮನೆಯವರ ವಿರೋಧವಿದ್ದರೂ ಮದುವೆ: ಯುವ ಜೋಡಿಯನ್ನು ಹತ್ಯೆಗೈದ ಕುಟುಂಬ
ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದ ಯುವ ಜೋಡಿಯನ್ನು ಯುವತಿಯ ಸಹೋದರರು ಕೊಂದು ಹೊಲದಲ್ಲಿ ಹೂತು ಹಾಕಿರು ಭಯಾನಕ ಘಟನೆಯೊಂದು ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆದಿದೆ. ಈ ಜೋಡಿ ಕೊಲೆಗೆ ಸಂಬಂಧಿಸಿದಂತೆ ಯುವತಿಯ ಸೋದರರನ್ನು ಬಂಧಿಸಲಾಗಿದೆ. ಕಾಜಲ್ ಮತ್ತು ಆಕೆಯ ಸಂಗಾತಿ ಅರ್ಮಾನ್




