ಅಪರಾಧ
ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿ ಸ್ಫೋಟಕಗಳು ಪತ್ತೆ
ಕೇರಳದ ವಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿ ಸ್ಫೋಟಕಗಳು ಪತ್ತೆಯಾವೆ. ತಮಿಳುನಾಡಿನ ಧರ್ಮಪುರಿಯ ಪಾಪರಪಟ್ಟಿಯ ಲಾರಿ ಚಾಲಕ ಸೆಂಥಿಲ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಇದ್ದ ಜಿಲೆಟಿನ್ ಹಾಗೂ ಸ್ಪೋಟಕಗಳನ್ನು ಜಪ್ತಿ ಮಾಡಿದ್ದಾರೆ. ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಸರ್ವೀಸ್ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲಾರಿಯ ಮೇಲೆ ರಾಶಿ ಹಾಕಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆಗೆದು ಪರಿಶೀಲಿಸಿದಾಗ ಪೆಟ್ಟಿಗೆಗಳಲ್ಲಿ ಸ್ಫೋಟಕಗಳನ್ನು ತ್ರಿಶೂರ್ಗೆ
ಅಮಿತ್ ಶಾ ಆಪ್ತನೆಂದು ಹೇಳುತ್ತ ವಂಚಿಸುತ್ತಿದ್ದವನ ವಿರುದ್ಧ ಈಗ ರಾಜ್ಯಪಾಲರ ಕಚೇರಿ ಕೇಸ್ ದಾಖಲು
ಕೇಂದ್ರ ಸಚಿವ ಅಮಿತ್ ಶಾ ಅವರ ಆಪ್ತ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಸುಜಯೇಂದ್ರ ಎಂಬಾತನ ವಿರುದ್ಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ವಿಧಾನಸೌಧ ಠಾಣೆಯಿಂದ ಕೇಸನ್ನು ವಿಜಯನಗರ
ದೆಹಲಿಯಲ್ಲಿ ಖಲಿಸ್ತಾನ್ ಪರ ಘೋಷಣೆ: ಖಲಿಸ್ತಾನಿ ಉಗ್ರರ ಸಂಪರ್ಕದಲ್ಲಿರುವ ಇಬ್ಬರ ಬಂಧನ
ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್‌ನ ಮುಖ್ಯಸ್ಥ ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್‌ಗೆ ಸಂಬಂಧಿಸಿದ ಸ್ಲೀಪರ್ ಸೆಲ್‌ನೊಂದಿಗೆ ಸಂಪರ್ಕವಿರುವ ಇಬ್ಬರು ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗಣರಾಜ್ಯೋತ್ಸವಕ್ಕೆ ಮೊದಲು ದೆಹಲಿಯಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದು ಸಾರ್ವಜನಿಕ ಸುವ್ಯವಸ್ಥೆಯನ್ನು ಭಂಗಗೊಳಿಸುವ
ಹಿಂದೂ ಮಹಿಳೆಯ ಮನೆಯಲ್ಲಿದ್ದ ಯುವ ಕಾಂಗ್ರೆಸ್ ಮುಖಂಡನಿಗೆ ಸ್ಥಳೀಯರಿಂದ ಹಲ್ಲೆ
ಚಿಕ್ಕಮಗಳೂರಿನ ಗಾಂಧಿನಗರದಲ್ಲಿ ಒಂಟಿಯಾಗಿರುವ ವಿವಾಹಿತ ಹಿಂದೂ ಮಹಿಳೆಯ ಮನೆಯಲ್ಲಿದ್ದ ಯುವ ಕಾಂಗ್ರೆಸ್ ಮುಖಂಡನ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಶರೀಫ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾತ್ರಿ ಮಹಿಳೆಯ ಮನೆಗೆ ರಾಹಿಲ್
ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು ಅಮಾನತು
ಕೆಲವು ದಿನಗಳ ಹಿಂದೆ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದು, ರಂಪಾಟ ನಡೆಸಿದ ಬೆಂಗಳೂರಿನ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ಮತ್ತು
ಹೊಸಕೋಟೆಯಲ್ಲಿ ಪ್ರಿಯಕರನಿಗಾಗಿ ಗಂಡನನ್ನೇ ಹತ್ಯೆ ಮಾಡಿದ ಹೆಂಡತಿ
ಬೆಂಗಳೂರು ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೊಲೆ ಆರೋಪಿ ಹೆಂಡತಿಯೇ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಪ್ರಿಯಕರನಿಗಾಗಿ ಹೆಂಡತಿಯೇ ಗಂಡನನ್ನು ಹತ್ಯೆ ಮಾಡಿ ಅಪಘಾತವೆಂದು ನಂಬಿಸಿದ್ದ ಈ ಪ್ರಕರಣದ
ರೋಣದಲ್ಲಿ ರಸ್ತೆ ಅಪಘಾತಕ್ಕೆ ಮೂವರು ಮಹಿಳೆಯರು ಬಲಿ
ಗದಗದ ರೋಣ ತಾಲೂಕಿನ ಜಿಗಳೂರ ಕ್ರಾಸ್ ಬಳಿ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಗಜೇಂದ್ರಗಡದ ಶಿವಾಜಿಪೇಟೆ ನಿವಾಸಿಗಳಾದ ಅನ್ನಪೂರ್ಣ (56), ಸಂಗೀತ ಹೊಸಮನಿ (48), ಮರಿಯಂಬೂ ಹುನಗುಂದ (55)
ಬೆಳಗಾವಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ: ಅಪರಾಧಿಗಳಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ
ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಅಪರಾಧಿಗಳಿಗೆ ನ್ಯಾಯಾಲಯ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ಎಚ್.ಎಸ್.ಮಂಜುನಾಥ ಅವರು ಅಪರಾಧಿಗಳಾದ ಬಸಪ್ಪ,
ಜಾತಕ ತೋರಿಸಲು ಹೋದರೆ ರೇಪ್: ಮೂಡಿಗೆರೆಯಲ್ಲಿ ಅರ್ಚಕನ ಬಂಧನ
ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಮದುವೆಯಾಗುತ್ತಿರುವ ಯುವತಿ ತನ್ನ ಜಾತಕ ತೋರಿಸಲು ಹೋಗಿದ್ದ ಯುವತಿ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ಯುವತಿ ಬಣಕಲ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅರ್ಚಕ ಕೃಷ್ಣರಾವ್ ಎಂಬವರನ್ನು ಬಂಧಿಸಿದ್ದಾರೆ. ಆರೋಪಿ ಕೃಷ್ಣರಾವ್
ವ್ಯಕ್ತಿಯ ಕೊಲೆ: ಕಮಲಾಕರ ಭಟ್ ಸೇರಿ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಸಿದ್ದಾಪುರದಲ್ಲಿ ಅಕ್ರಮ ಸಂಬಂಧ ಬಯಲಾದ ಹಿನ್ನೆಲೆ ನಡೆದ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳಾದ ಸುಚಿತ್ರಾ, ಲೋಕನಾಥ್, ಕಮಲಾಕರ ಭಟ್ ಮತ್ತು ಆಕಾಶ್ ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಸಿದ್ದಾಪುರ ಜೆಎಂಎಫ್ಸಿ ಕೋರ್ಟ್ ಆದೇಶ ಮಾಡಿದೆ. ಈ ಕೊಲೆ ಪ್ರಕರಣಕ್ಕೆ ಸಾರ್ವಜನಿಕ ವಲಯದಲ್ಲೂ




