Menu

ಜಾತ್ರೆಯಿಂದ ಬರುತ್ತಿದ್ದಾಗ ಬೈಕ್‌ಗೆ ಟಿಪ್ಪರ್‌ ಡಿಕ್ಕಿ: ಇಬ್ಬರ ಸಾವು

ರಾಯಚೂರಿನ ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆ ನೋಡುವುದಕ್ಕೆ ಹೋಗಿ ವಾಪಸ್‌ ಬರುತ್ತಿದ್ದಾಗ ನಾಲ್ವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು, ಇಬ್ಬರು ಮೃತಪಟ್ಟಿದ್ದಾರೆ.

ರಥೋತ್ಸವ ಮುಗಿಸಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದಾಗ ಸಿರವಾರ ತಾಲೂಕಿನ. ಶಾಖಾಪುರ ಮುಖ್ಯರಸ್ತೆಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರ ದೇಹ ನಜ್ಜುಗುಜ್ಜಾಗಿವೆ, ಬೈಕ್ ಓಡಿಸುತ್ತಿದ್ದ 37 ವರ್ಷದ ಅಂಜಿನಯ್ಯ ನಾಯಕ, 10 ವರ್ಷದ ಅರ್ಚನಾ ಮೃತಪಟ್ಟವರು. 19 ಶ್ವೇತಾ ಅವರ ಕಾಲು ಕಟ್ ಆಗಿದೆ ಹಾಗೂ 22 ವರ್ಷದ ಲಕ್ಷ್ಮಿ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *