Menu

ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲವೆಂದು ಜಗಳ: ಮದುವೆ ಮನೆಯಲ್ಲೇ ಮೂವರ ಕೊಲೆ

ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸಾಕ್ರಿ ತಾಲೂಕಿನ ಪಿಂಪಳ್ನರ್ ಗ್ರಾಮದಲ್ಲಿ  ಮದುವೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಲ್ಲ ಎಂಬ ಕಾರಣಕ್ಕೆ ಮದುವೆ ಮನೆಯಲ್ಲಿ ಶುರುವಾದ ಜಗಳ ಮೂವರ ಕೊಲೆಯಲ್ಲಿ ಅಂತ್ಯ ಕಂಡಿದೆ. ದೇವೇಂದ್ರ ಜ್ಞಾನೇಶ್ವರ ಪವಾರ್ (35), ಸುರೇಶಗೀರ್ ಮೋಜಗೀರ್ ಗೋಸಾವಿ (55) ಮತ್ತು ಸಾಹಿಲ್ ಸುರೇಶ್ ಗೋಸಾವಿ (35) ಮೃತಪಟ್ಟವರು. ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸಾಕ್ರಿ ತಾಲೂಕಿನ ಪಿಂಪಳ್ನರ್ ಗ್ರಾಮದ ಮದುವೆ ಸಮಾರಂಭದಲ್ಲಿ ಈ ದುರಂತ ಸಂಭವಿಸಿದೆ. ನೀಲಕಂಠ ನಗರದಲ್ಲಿ

ಶಿವಾಜಿ ಜಯಂತಿ: ಬಾಗಲಕೋಟೆಯಲ್ಲಿ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಶಿವಾಜಿ ಜಯಂತಿ ಪ್ರಯುಕ್ತ ಭಾವಚಿತ್ರ ಮೆರವಣಿಗೆ ನಡೆಯುತ್ತಿರಬೇಕಾದರೆ ವೇಳೆ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಾಟ ನಡೆಸಿರುವ ಘಟನೆ ನಡೆದಿದೆ. ಫೆ.24ರ ಮಧ್ಯರಾತ್ರಿವರೆಗೆ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಘಟನೆಯಲ್ಲಿ ಪೊಲೀಸ್​​ ಸಿಬ್ಬಂದಿ ಸೇರಿ

ರಾಮನಗರದಲ್ಲಿ ಶೀಲ ಶಂಕಿಸಿ ಪತ್ನಿಯ ಕೊಲೆಗೈದ ಪತಿ

ಬೆಂಗಳೂರು ದಕ್ಷಿಣ ‌ಜಿಲ್ಲೆ ರಾಮನಗರದಲ್ಲಿ ಕೌಟುಂಬಿಕ ಕಲಹ, ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಸುಫಿಯಾ ಬಾನು (21)ಹತ್ಯೆಯಾದ ಮಹಿಳೆ. ಸಲ್ಮಾನ್(22) ಹತ್ಯೆ ಆರೋಪಿ. ಇವರು ರಾಮನಗರದ ಯಾರಬ್ ನಗರ ನಿವಾಸಿಗಳು. ರಾಮನಗರದ ‌ಫಿಲೆಚೆರಿಯೊಂದರಲ್ಲಿ ಕೆಲಸ

ಅನುಮತಿಯಿಲ್ಲದೆ ದೇಶ ತೊರೆಯಲ್ಲ: ಸುಪ್ರೀಂಗೆ ಅನಿಲ್‌ ಅಂಬಾನಿ ಮುಚ್ಚಳಿಕೆ

ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ತಾನು ಭಾರತ ತೊರೆಯುವುದಿಲ್ಲ ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್ ಸಮೂಹ ಸಂಸ್ಥೆಗಳು ವಂಚನೆ ಎಸಗಿರುವ ಆರೋಪದ ತನಿಖೆಗೆ ಸಹಕರಿಸುತ್ತೇನೆ ಎಂದು ಉದ್ಯಮಿ ಅನಿಲ್ ಅಂಬಾನಿ ಸುಪ್ರೀಂಕೋರ್ಟ್‌ಗೆ ಮುಚ್ಚಳಿಕೆ ಸಲ್ಲಿಸಿದ್ದಾರೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ಅದರ ಸಮೂಹ ಸಂಸ್ಥೆಗಳು ವಂಚನೆ

ಪತ್ನಿಯ ಕೊಂದು ಮನೆಯಲ್ಲೇ ಹೂತು ಹಾಕಿ ನಾಪತ್ತೆ ದೂರು ದಾಖಲಿಸಿದ್ದ ಪತಿ

ವಿಜಯಪುರದಲ್ಲಿ ಕಳೆದ ತಿಂಗಳು ಪತ್ನಿಯನ್ನು ಕೊಂದು ಮನೆಯಲ್ಲೇ ಹೂತು ಹಾಕಿದ್ದ ಪ್ರಕರಣದಲ್ಲಿ ಕೊಲೆಗಟುಕ ಪತಿ ಪತ್ನಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡುವ ನಾಟಕವಾಡಿದ್ದ ಎಂಬ ವಿಚಾರ ಬಹಿರಂಗಗೊಂಡಿದೆ. ಕೊಲೆ ಆರೋಪಿ ಪತಿಯನ್ನು ಪ್ರಭು ರತ್ನಾಕರ್ (46) ಪತ್ನಿ ಸರೋಜಿನಿ ರತ್ನಾಕರ (45)

ಎಸ್ಟಿ ಯುವಕನ ಮದುವೆಯಾದ ಕುರುಬ ಯುವತಿಯ ಕೊಚ್ಚಿ ಕೊಲೆಗೆ ಯತ್ನಿಸಿದ ಸೋದರ

ಕೊಪ್ಪಳದ ಹಂದ್ರಾಳ ಗ್ರಾಮದಲ್ಲಿ ಎಸ್ಟಿ ಸಮುದಾಯದ ಯುವಕನನ್ನು ಮದುವೆಯಾಗಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಕುರುಬ ಸಮುದಾಯದ ಯುವತಿಯನ್ನು ಆಕೆಯ ಸೋದರ ಕೊಚ್ಚಿ ಕೊಲೆ ಮಾಡಲು ಯತ್ನಿಸಿ ವಿಫಲನಾಗಿದ್ದಾನೆ. 23 ವರ್ಷದ ಮೀನಾಕ್ಷಿ ಎರಡು ವರ್ಷಗಳ ಹಿಂದೆ ಎಸ್‌ಟಿ ಸಮುದಾಯದ ಯುವಕನನ್ನು ಪ್ರೀತಿಸಿ

ಹಾಸನ ಕಾರ್ಖಾನೆಯ ಸಂಪ್‌ನಲ್ಲಿ ಉದ್ಯೋಗಿಯ ಮೃತದೇಹ ಪತ್ತೆ

ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಅಲ್ಲಿನ ಉದ್ಯೋಗಿ ಯುವಕನ ಮೃತದೇಹ ಪತ್ತೆಯಾಗಿದೆ. ಕಳೆದ 6 ತಿಂಗಳಿನಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಪುನೀತ್ (27) ಮೃತ ಯುವಕ. ಬುಧವಾರ ಸಮವಸ್ತ್ರ ಧರಿಸಿ ಪುನೀತ್‌

ಬಳ್ಳಾರಿಯಲ್ಲಿ ಮಂಗಳಮುಖಿ ಮತ್ತು ಪ್ರಿಯತಮ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹಣಕಾಸು ವಿಚಾರಕ್ಕೆ ಮಂಗಳಮುಖಿ ಮತ್ತು ಪ್ರಿಯತಮನ ಮಧ್ಯೆ ಶುರುವಾದ ಜಗಳ ಅವರಿಬ್ಬರ ಆತ್ಮಹತ್ಯೆಯಲ್ಲಿ ಕೊನೆಯಾಗಿರುವ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಮೇದಾರ ಕೇತಯ್ಯ ನಗರದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಂಗಳಮುಖಿ ಸುಹಾಸಿನಿ (29) ಹಾಗೂ ಪ್ರಿಯಕರ ಶೇಖರ್ (27) ಶವಗಳು ನೇಣು ಬಿಗಿದ

ಪ್ರವಾಸದಲ್ಲಿ ಚಾಲಕನೊಂದಿಗೆ ಮಾತು: ಬೆಂಗಳೂರಿನಲ್ಲಿ ಪತ್ನಿಯ ಕೊಲೆಗೈದ ಪತಿ

ಪ್ರವಾಸಕ್ಕೆ ತೆರಳಿದ್ದ ವೇಳೆ ಚಾಲಕನ ಜೊತೆ ಮಾತನಾಡಿದ್ದ ಪತ್ನಿಯ ಮೇಲೆ ಅನುಮಾನಗೊಂಡ ಪತಿಯೊಬ್ಬ ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವಿಕಾ(50) ಕೊಲೆಯಾದ ಮಹಿಳೆ ಆಕೆಯನ್ನು ಪತಿ  ಕುಮಾರ್‌ ಮಚ್ಚಿನಿಂದ

ಹಾಸನದಲ್ಲಿ ಎರಡು ಎಕರೆ ಆಸ್ತಿ ವಿವಾದ: ದಾಯಾದಿಗಳಿಂದ ವ್ಯಕ್ತಿ ಕೊಲೆ

ಹಾಸನದ ಆಲೂರು ತಾಲೂಕಿನ ರಾಜನಹಳ್ಳಿ ಸಮೀಪ ಎರಡು ಎಕರೆ ಆಸ್ತಿ ವಿವಾದ ತಾರಕಕ್ಕೆ ಏರಿ, ಕೋರ್ಟ್‌ ಮೆಟ್ಟಿಲೇರಿದ್ದ ವ್ಯಕ್ತಿಯನ್ನು ದಾಯಾದಿಗಳು ಸೇರಿ ಹತ್ಯೆ ಮಾಡಿದ್ದಾರೆ. ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿದ್ದ ವೀರಪ್ಪ (58) ಹತ್ಯೆಯಾದವರು. ಕೋರ್ಟ್‌ ಕೇಸ್ ಮುಗಿಸಿ ಬಂದ ಬಳಿಕ