ಅಪರಾಧ
ಕೊಟ್ಟಿಗೆಯಿಂದ ಕರು ಕದ್ದು ಬಾಡೂಟ ಮಾಡಿದವರ ಬಂಧನ
ಹಾಸನದ ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದಲ್ಲಿ ಕೊಟ್ಟಿಗೆಯಿಂದ ಕರುವೊಂದನ್ನು ದುಷ್ಕರ್ಮಿಗಳು ಕದ್ದು ಬಾಡೂಟ ಮಾಡಿದ್ದು, ಈ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಹೂವಣ್ಣ ಎಂಬವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು ಕಡಿದು ಮಾಂಸದೂಟ ಮಾಡಿದ್ದಾರೆ. ಕರುವಿಗಾಗಿ ಹುಡುಕಾಟ ನಡೆಸಿದಾಗ ಮಡಬಲು ಗ್ರಾಮದ ರೈಲ್ವೆ ಗೇಟ್ ಸಮೀಪ ಕರುವಿನ ರುಂಡ ಪತ್ತೆಯಾಗಿತ್ತು. ಗ್ರಾಮದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್ ಮತ್ತು ಅಜಿತ್ ಬಂಧಿತ ಆರೋಪಿಗಳು.
ಹಾಸನದಲ್ಲಿ ಪ್ರಿಯಕರನೊಂದಿಗೆ ಸೇರಿ ಸುಪಾರಿ ನೀಡಿ ಪತಿಯ ಕೊಲೆಗೈದ ಪತ್ನಿ
ಚನ್ನರಾಯಪಟ್ಟಣದ ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದೆ. ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಬಯಲಾಗಿದೆ. ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ನಂಜುಂಡೇಗೌಡ ಎಂಬವರ ಹತ್ಯೆಯಾಗಿತ್ತು. ಪೊಲೀಸರು
ನಟ ಸೈಫ್‌ಗೆ ಇರಿದ ದಾಳಿಕೋರನ ಬಂಧನ
ಮುಂಬಯಿನ ಬಾಂದ್ರಾದ ನಿವಾಸದಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿ ನಟ ಸೈಫ್ ಅಲಿಖಾನ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮನೆಗೆ ದರೋಡೆಗೆಂದು ಬಂದಿದ್ದನಾ ಅತವಾ ಸೈಪ್ ಕೊಲೆ ಮಾಡಲೆಂದು ಬಂದಿದ್ದನಾ ಎಂಬ ಬಗ್ಗೆ ಹಲವು ಆಯಾಗಳಿಂದ ತನಿಖೆ
ದರ್ಶನ್‌ಗೆ ಮತ್ತೆ ಬಂಧನ ಭೀತಿ: ಪೊಲೀಸರು ಸುಪ್ರೀಂಗೆ ಸಲ್ಲಿಸಿರುವ ಮೇಲ್ಮನವಿ ಜ.24ಕ್ಕೆವಿಚಾರಣೆ
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮನವಿಯ ವಿಚಾರಣೆ ಜನವರಿ 24ರಂದು ನಡೆಯಲಿದೆ. ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು
ಬೀದರ್: ಎಟಿಎಂ ವಾಹನದ ಮೇಲೆ ಗುಂಡು ಹಾರಿಸಿ 90 ಲಕ್ಷ ರೂ. ದರೋಡೆ: ಇಬ್ಬರು ಸಿಬ್ಬಂದಿ ಸಾವು
ಎಟಿಎಎಂ ವಾಹನದ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಸುಮಾರು 90 ಲಕ್ಷ ರೂ. ಹಣ ದರೋಡೆ ಮಾಡಿದ ಆಘಾತಕಾರಿ ಘಟನೆ ಬೀದರ್ ನಲ್ಲಿ ನಡೆದಿದ್ದು, ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಗುರುವಾರ ಬೆಳಿಗ್ಗೆ ಶಿವಾಜಿ ರಾವ್ ವೃತ್ತದ ಬಳಿ ಬೈಕ್ ನಲ್ಲಿ ಬಂದ
ಅವಳಿ ನಗರದಿಂದ 45 ಮಂದಿ ರೌಡಿಗಳು ಗಡಿಪಾರು
ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವ 45 ಮಂದಿ ರೌಡಿಗಳನ್ನು ಗಡಿಪಾರು ಮಾಡಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗಡಿಪಾರು ಮಾಡಿರುವ ರೌಡಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ
ಮಗುವಿನ ರೇಪ್ ಆರೋಪಿ ಕಾಲಿಗೆ ಪೊಲೀಸ್ ಗುಂಡೇಟು
ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಮಂಜುನಾಥ್ (26) ಮೇಲೆ ಬಳ್ಳಾರಿಯ ತೋರಣಗಲ್ ಪೊಲೀಸರು ಗುರುವಾರ ಬೆಳಗ್ಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ತಪ್ಪಿಸಲು ಯತ್ನಿಸಿದ್ದರಿಂದ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಮೂರು ದಿನದ ಹಿಂದೆ ನಡೆದ ಅತ್ಯಾಚಾರ
ಮನೆಗೆ ನುಗ್ಗಿದ ಕಳ್ಳನಿಂದ ನಟ ಸೈಫ್ ಅಲಿ ಖಾನ್ ಗೆ ಚೂರಿ ಇರಿತ
ಮುಂಬೈನ ಬಾಂದ್ರಾದಲ್ಲಿರುವ ನಟ ಸೈಫ್ ಅಲಿ ಖಾನ್ ಅವರ ಮನೆ ದರೋಡೆಗೆ ಮಧ್ಯರಾತ್ರಿ ನುಗ್ಗಿದ್ದ ಕಳ್ಳ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಸೈಫ್ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳನೊಂದಿಗೆ ಸೈಫ್ ವಾಗ್ವಾದ ನಡೆಸುತ್ತಿರುವಾಗ ಮಾಡಿದ ಚೂರಿ ಇರಿತದಿಂದ
ಪತ್ನಿ, ಪ್ರೇಯಸಿ ಸೇರಿ ಆಹಾರದಲ್ಲಿ ಮಾದಕ ದ್ರವ್ಯ ಬೆರಸಿ ವ್ಯಕ್ತಿಯ ಕೊಲೆ
ಉತ್ತರ ಪ್ರದೇಶದ ಇಟಾವಾದಲ್ಲಿ ಜಿಂದಾಲ್ ಕಂಪನಿಯ ಎಂಜಿನಿಯರ್ ರಾಘವೇಂದ್ರ ಯಾದವ್ ಎಂಬಾತನನ್ನು ಆತನ ಪತ್ನಿ ಮತ್ತು ಪ್ರೇಯಸಿ ಸೇರಿ ಕೊಂದಿದ್ದಾರೆ. ರಾಘವೇಂದ್ರ ಯಾದವ್ ಮದುವೆಯಾಗಿದ್ದ. ಆತ ಇನ್ನೊಬ್ಬ ಹುಡುಗಿ ಜೊತೆ ಸಂಬಂಧ ಬೆಳೆಸಿಕೊಂಡಿದ್ದ. ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಆಕೆಯನ್ನು ಬ್ಲ್ಯಾಕ್‌ಮೇಲ್
ರಾಜೌರಿಯಲ್ಲಿ ನೆಲಬಾಂಬ್ ಸ್ಫೋಟ: ಆರು ಯೋಧರಿಗೆ ಗಾಯ
ಕಾಶ್ಮೀರದ ನೌಶೇರಾ ರಾಜೌರಿ ಉಪ ವಿಭಾಗದ ಭವಾನಿ ಸೆಕ್ಟರ್ನ ಮಕ್ರಿ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್ ಸ್ಫೋಟಗೊಂಡು ಗೂರ್ಖಾ ರೈಫಲ್ಸ್‌ನ ಆರು ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಂಬಾ ಫೋರ್ಟ್ ರಾಜೌರಿ ಬಳಿ ಆರು ಸೈನಿಕರು ಗಸ್ತು




