ಅಪರಾಧ
ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿ ಸಾವು
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಸ್ವಪ್ರೇರಿತವಾಗಿ ಒಳಗಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕಲಬುರಗಿಯ ನಾಗೇಶ್ (33) ಎಂದು ಗುರುತಿಸಲಾಗಿದೆ. ಕೃಷಿಕರಾಗಿದ್ದ ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಮೆಡಿಸನ್ಸ್ ಕಂಪನಿಯೊಂದಕ್ಕೆ ಆ್ಯಪ್ ಮೂಲಕ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಲು ನೋಂದಣಿ ಮಾಡಿಕೊಂಡಿದ್ದರು. ಕಳೆದ ಡಿಸೆಂಬರ್ 2ನೇ ವಾರದಲ್ಲಿ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿದ್ದರು. ಅದಾದ ಎರಡು ದಿನದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿ 10
ಮದುವೆಯಾಗುವುದಾಗಿ ನಂಬಿಸಿ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಗೆ 18 ಲಕ್ಷ ರೂ. ವಂಚನೆ
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಕಾನ್ಸ್‌ಟೇಬಲ್ ಗೆ ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿ 18 ಲಕ್ಷ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತೆಯು ಮ್ಯಾಟ್ರಿಮೋನಿ ತಾಣಗಳಲ್ಲಿ ಜೀವನ ಸಂಗಾತಿಯನ್ನು ಹುಡುಕುವಾಗ ಅಶೋಕ್ ಮುಸ್ತಿ ಎಂಬಾತ ಪರಿಚಯವಾಗಿದ್ದಾನೆ. ತೆಲಂಗಾಣ ಮೂಲದ
ಪೊಲೀಸರ ಮೇಲೆ ಕಲ್ಲೆಸೆದ ರೌಡಿ ಕಾಲಿಗೆ ಗುಂಡೇಟು
ಹಾಸನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದು ಹಲ್ಲೆ ಮಾಡಿದ್ದ ರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಒಂದು ಕೊಲೆ, ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿ ಮನುವನ್ನು ಬೆಂಗಳೂರಿನಲ್ಲಿ ಬಂಧಿಸಿ ನಗರ ಠಾಣೆ ಪೊಲೀಸರು ಹಾಸನಕ್ಕೆ ಕರೆ ತರುತ್ತಿದ್ದಾಗ
ನೆಲಮಂಗಲದಲ್ಲಿ ಉದ್ಯಮಿಯ ಅಪಹರಿಸಿ ಹಣ ದರೋಡೆ, ಚಿತ್ರಹಿಂಸೆ
ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ ಚಿತ್ರಹಿಂಸೆ ನೀಡಿ 28 ಲಕ್ಷ ರೂ. ದೋಚಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಲ್ವೆ ಗ್ರಾಮದ ಬಂಕ್ ಹಾಗೂ ಟ್ರಾನ್ಸ್ ಪೋರ್ಟ್ ಉದ್ಯಮಿ ಇಕ್ಬಾಲ್ ಅಪಹರಣಕ್ಕೆ ಒಳಗಾದವರು. ಜ.24ರಂದು
ನಿಡಗುಂದಿಯಲ್ಲಿ ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ
ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪೊಲೀಸ್ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೌನೇಶ್ ಅಬ್ಬಿಹಾಳ (30) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೃತನ ಸೋದರ ಮಾವ ಬಸವರಾಜ್ ಕಾಣೆಯಾಗಿದ್ದರು. ಈ
ರಾಜ್ಯದ ನಾನಾ ಕಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ರೇಡ್
ಬೆಂಗಳೂರು, ಬಾಗಲಕೋಟೆ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ನಿವಾಸ, ಕಚೇರಿಗಳಿಗೆ ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳು, ಬಾಗಲಕೋಟೆಯ ಗ್ರಾಮ ಪಂಚಾಯತ್ ಪಿಡಿಒ, ರಾಯಚೂರಿನಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಪತ್ರ ಅಧಿಕಾರಿಗಳ ಮನೆ, ಬೆಂಗಳೂರಿನಲ್ಲಿ
ಪಾಗಲ್ ಪ್ರೇಮಿಯಿಂದ ವಿದ್ಯಾರ್ಥಿನಿಯ ಕೊಲೆ; ಬೆಚ್ಚಿಬಿದ್ದ ಸಿಂಧನೂರು ಜನತೆ
ಸಿಂಧನೂರು : ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎಂ.ಎಸ್ ಸಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿಯನ್ನು ಪಾಗಲ್ ಪ್ರೇಮಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ, ಇದರಿಂದ ಸಿಂಧನೂರು ಜನತೆ ಭಯದ ವಾತಾವರಣ ಇದೆ. ಲಿಂಗಸ್ಗೂರು ಮೂಲದ ಯುವಕ ಶೇಕ್ ಮಹಿಬುಲ್ ಎಂಬ ಪಾಗಲ್
ಸಹಪಾಠಿಯ ರೇಪ್ ಮಾಡಲು 7ನೇ ತರಗತಿಯವನಿಂದ 9ನೇ ತರಗತಿಯವನಿಗೆ 100 ರೂ. ಸುಪಾರಿ
ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ಸಹಪಾಠಿ ವಿದ್ಯಾರ್ಥಿನಿ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲು 9ನೇ ತರಗತಿಯ ಬಾಲಕನಿಗೆ 100 ರೂ ಸುಪಾರಿ ನೀಡಿರುವ ಆತಂಕಕಾರಿ ಪ್ರಕರಣ ಬಹಿರಂಗಗೊಂಡಿದೆ. ಸುಪಾರಿ ಪಡೆದಿದ್ದ ಬಾಲಕ
ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಪೊಲೀಸ್ ದಾಳಿ: ನಾಲ್ವರ ಬಂಧನ
ಬೆಂಗಳೂರಿನ ನಾನಾ ಕಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ 9 ಮಹಿಳೆಯರನ್ನು ರಕ್ಷಿಸಿದ್ದಾರೆ. ಬಿಇಎಲ್ ಬಡಾವಣೆಯಲ್ಲಿ ಹೈಫೈ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು ಹೊರ ರಾಜ್ಯದಿಂದ ಕೆಲಸಕ್ಕೆ ಬರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಕೆಲಸದ
ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ತಡೆದು ರೌಡಿಯ ಹುಚ್ಚಾಟ
ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದ ರೌಡಿ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಸುಕಿನ ಜಾವ ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ರೌಡಿ




