ಉದಯಕಾಲ ನ್ಯೂಸ್, ಬೆಂಗಳೂರು: ಕಳೆದ ಕೆಲ ದಿನಗಳಿಂದ ತೀವ್ರ ವಾಗ್ವಾದ, ಪರಸ್ಪರ ಆರೋಪ-ಪ್ರತ್ಯಾರೋಪ ಹಾಗೂ ವೈಯಕ್ತಿಕ ಟೀಕೆಗಳಿಂದಾಗಿ ಬಿರುಗಾಳಿಯಂತೆ ಎದ್ದಿದ್ದ ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಸದ್ಯ ಪಾಸಿಟಿವ್ ವೈಬ್ ಕಾಣಿಸಿಕೊಂಡಿದೆ. ಹಿಂದಿನ ವಾರಗಳಲ್ಲಿ ವೈಯಕ್ತಿಕ ವಿಚಾರಗಳನ್ನು ಕೆದಕಿ ತೀವ್ರವಾಗಿ ಜಗಳವಾಡಿಕೊಂಡಿದ್ದ ಸ್ಪರ್ಧಿಗಳಾದ ಗಾನವಿ (Ganavi) ಹಾಗೂ ಗಗನ್ (Gagan) ತಮ್ಮ ನಡುವಿನ ಎಲ್ಲಾ ಮನಸ್ತಾಪಗಳನ್ನು ಬದಿಗಿಟ್ಟು ಹೊಸ ಸ್ನೇಹದ ಹೆಜ್ಜೆ ಇಟ್ಟಿದ್ದಾರೆ.
ಈ ಕುರಿತು ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಡುಗಡೆ ಮಾಡಿದ್ದು, ದೊಡ್ಮನೆಯಲ್ಲಿ ಉಂಟಾಗಿದ್ದ ಉದ್ವಿಗ್ನ ವಾತಾವರಣವು ಕೊನೆಗೂ ತಿಳಿಯಾಗಿದೆ. ಇಬ್ಬರೂ ಪರಸ್ಪರ ಮನಬಿಚ್ಚಿ ಮಾತನಾಡಿ, ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿರುವುದು ವೀಕ್ಷಕರ ಗಮನ ಸೆಳೆದಿದೆ.
ಭಾವುಕರಾಗಿ ಕ್ಷಮೆಯಾಚಿಸಿದ ಗಗನ್ ಮತ್ತು ಗಾನವಿ
ಕಳೆದ ವಾರ ನಡೆದ ಟಾಸ್ಕ್‌ಗಳು ಹಾಗೂ ವೈಯಕ್ತಿಕ ನಿಂದನೆಗಳಿಂದ ನೊಂದುಕೊಂಡಿದ್ದ ಗಗನ್ ಮತ್ತು ಗಾನವಿ, ಈ ಹೊಸ ಬೆಳವಣಿಗೆಯಲ್ಲಿ ತಮ್ಮ ಮುನಿಸನ್ನು ಮರೆತಿದ್ದಾರೆ.
ಗಗನ್ ಮಾತನಾಡುತ್ತಾ, “ನಿನ್ನ ಜೊತೆ ಪ್ರತಿ ಸಲ ಮಾತನಾಡುವಾಗಲೂ ಆ ಹಳೆಯ ಘಟನೆ ನೆನಪಾಗಿ ಟ್ರಿಗರ್ ಆಗುತ್ತೆ. ಅದನ್ನೆಲ್ಲಾ ಮರೆತು ನಾನಿಲ್ಲಿಂದ ಖುಷಿಯಾಗಿ ಹೊರಹೋಗಬೇಕು. ಐ ಆಮ್ ಸಾರಿ (I am sorry)” ಎಂದು ಭಾವುಕರಾಗಿ ನುಡಿದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಗಾನವಿ ಕೂಡ ತಮ್ಮ ತಪ್ಪನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. “ನಮ್ಮಿಬ್ಬರ ವೈಯಕ್ತಿಕ ಜಗಳದಲ್ಲಿ ನಿನ್ನ ಫ್ಯಾಮಿಲಿಯನ್ನು ಎಳೆದು ತಂದುದು ನಾನು ಮಾಡಿದ ಅತ್ಯಂತ ದೊಡ್ಡ ತಪ್ಪು. ನಿಜವಾಗಿಯೂ ಮನಸ್ಸಿನಿಂದ ಕ್ಷಮೆ ಕೇಳ್ತೀನಿ” ಎಂದು ಹೇಳಿ ಸಾರಿ ಕೇಳಿದ್ದಾರೆ.ಕೊನೆಗೆ ಇಬ್ಬರೂ ಪರಸ್ಪರ ಕೈಕುಲುಕಿ ಹಳೆ ಕಹಿ ಘಟನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ.
ರಣರಂಗದಲ್ಲಿ ಮೊಳಗಿದ ಭಾವನೆಗಳ ಅಲೆ
ಬಿಗ್‌ಬಾಸ್ ರಣಾಂಗಣದಲ್ಲಿ ಪ್ರತಿದಿನವೂ ಸ್ಪರ್ಧಿಗಳ ನಡುವೆ ಕೋಪ, ಆಕ್ರೋಶ, ಜಗಳದ ಬಿರುಗಾಳಿಯೇ ಎದ್ದಿರುತ್ತದೆ. ಆದರೆ, ಅದೇ ಅಂಗಳದಲ್ಲಿ ಕೆಲವೊಮ್ಮೆ ಮಾನವೀಯ ಸಂಬಂಧಗಳು ಮತ್ತು ಭಾವನೆಗಳ ಹೊಳೆಯೂ ಹರಿಯುತ್ತದೆ ಎಂಬುದಕ್ಕೆ ಗಗನ್ ಹಾಗೂ ಗಾನವಿ ನಡುವಿನ ಈ ರಾಜಿ ಸಂಧಾನವೇ ಸಾಕ್ಷಿಯಾಗಿದೆ. ಕಿಚ್ಚ ಸುದೀಪ್ ಅವರ ವಾರದ ಕಥೆಯಲ್ಲಿ ನಡೆದ ಗದರಿಕೆಯ ಬಳಿಕ ಸ್ಪರ್ಧಿಗಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಮುನಿಸಿನ ಅಧ್ಯಾಯಕ್ಕೆ ತೆರೆಬಿದ್ದು ಸ್ನೇಹದ ಹೊಸ ಅಧ್ಯಾಯ ಆರಂಭವಾಗಿದೆ.
#BigBossKannada #BBK13 #GanaviGowda #GaganChinnappa #ColorsKannada #BiggBossUpdates #UdayakalaNews #KannadaRealityShow #BiggBoss13


