Menu

ಮದುವೆಯಾಗುತ್ತಿದ್ದಂತೆಯೇ ಸರ್ಕಾರದಿಂದ ಬ್ಯಾಂಕ್‌ ಖಾತೆಗೆ 12 ಲಕ್ಷ ರೂ.

ದಕ್ಷಿಣ ಕೊರಿಯಾದಲ್ಲಿ ಜನನ ಪ್ರಮಾಣ ಮತ್ತು ಜನಸಂಖ್ಯೆಯ ಕುಸಿತ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಅಲ್ಲಿನ ಸರ್ಕಾರವು ಜನಸಂಖ್ಯಾ ಹೆಚ್ಚಳಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ.

ಮದುವೆಯಾದ ಜೋಡಿಗೆ ಸರ್ಕಾರ 12 ಲಕ್ಷ ರೂಪಾಯಿ ನೀಡುತ್ತದೆ. ಡೇಟಿಂಗ್‌, ಎಂಗೇಜ್‌ಮೆಂಟ್‌, ಮ್ಯಾರೇಜ್‌, ಹನಿಮೂನ್‌ವರೆಗಿನ ಖರ್ಚನ್ನು ಭರಿಸುತ್ತದೆ. ಈ ಮೂಲಕ ಯುವಕರನ್ನು ಮದುವೆಯಾಗಲು ಪ್ರೋತ್ಸಾಹಿಸಿ ಜನಸಂಖ್ಯೆ ಹೆಚ್ಚಿಸುವ ಯೋಜನೆ ಜಾರಿಗೊಳಿಸಿದೆ.

ದಕ್ಷಿಣ ಕೊರಿಯಾದ ಬುಸಾನ್ ಜಿಲ್ಲೆಯಲ್ಲಿ ವಿಶೇಷ ಮ್ಯಾಚ್ಮೇಕಿಂಗ್ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾಗವಹಿಸಿ ಮದುವೆಯಾದ ದಂಪತಿಗೆ ಸರ್ಕಾರದಿಂದ $14,700 ಅಂದರೆ 12 ಲಕ್ಷ ಸಿಗುತ್ತದೆ. ಹಿಂದಿನ ವರ್ಷ ನಡೆದ ಕಾರ್ಯಕ್ರಮದಲ್ಲಿ ಸರ್ಕಾರ ನವವಿವಾಹಿತ ದಂಪತಿಗೆ 31 ಲಕ್ಷ ರೂಪಾಯಿ ನೀಡಿತ್ತು. ದಕ್ಷಿಣ ಕೊರಿಯಾ ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ದೇಶವಾಗಿದೆ. ಅಲ್ಲಿ ಸರ್ಕಾರಕ್ಕೆ ಜನಸಂಖ್ಯೆ ಹೆಚ್ಚಿಸುವುದು ಅನಿವಾರ್ಯವಾದ ಕಾರಣ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆ ಜನಸಂಖ್ಯಾ ನೀತಿಯ ಭಾಗವಾಗಿದೆ.

ಜಪಾನ್ ಕೂಡ ಜನಸಂಖ್ಯಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಪಾನ್‌ನಲ್ಲಿ ಜನನ ಪ್ರಮಾಣವು 50 ವರ್ಷಗಳ ದಾಖಲೆಗಿಂತ ಕಡಿಮೆಯಾಗುತ್ತಿದೆ. ಇಲ್ಲಿ ವರ್ಷಕ್ಕೆ 50 ಲಕ್ಷ ಜನನ ಪ್ರಮಾಣವಿತ್ತು, ಈಗ 7 ಲಕ್ಷ 60 ಸಾವಿರಕ್ಕೆ ಇಳಿದಿದೆ. ಜಪಾನ್ ಕೂಡ ಯುವಕರನ್ನು ಮದುವೆಯಾಗುವಂತೆ ಪ್ರೋತ್ಸಾಹಿಸುವ ಯೋಜನೆಗಳನ್ನು ಜಾರಿಗೆ ತಂದಿದೆ.

Related Posts

Leave a Reply

Your email address will not be published. Required fields are marked *