ಆಟೋರಿಕ್ಷಾ ಪ್ರಯಾಣ ದರ ಏರಿಕೆ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿವೆ. ಒಂದು ಕಿಲೋಮೀಟರ್ಗೆ 5 ರೂಪಾಯಿ, ಎರಡು ಕಿಲೋಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಮಾಡಿವೆ. ಬಸ್ ಟಿಕೆಟ್ ದರ ಏರಿಕೆಯಿಂದ ಕಂಗೆಟ್ಟ ಜನರಿಗೆ ಈಗ ಆಟೊ ಪ್ರಯಾಣದರ ಹೆಚ್ಚಳದ ಬಿಸಿ ತಾಗಲಿದೆ.
ಆಟೋ ಪ್ರಯಾಣ ದರ ಕಿಲೋಮೀಟರ್ಗೆ 30 ರೂಪಾಯಿ ಇದೆ, ಇದೀಗ 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ. ದರ ಏರಿಕೆ ಸಂಬಂಧ 2024ರ ಡಿಸೆಂಬರ್ 23 ರಂದು ಅಸೋಸಿಯೇಷನ್ಗಳ ಸಭೆ ಕರೆಯಲಾಗಿತ್ತು. ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿತ್ತು. ಮತ್ತೆ ಇದೇ ತಿಂಗಳು ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣ ದರ ಏರಿಕೆ ಬಗ್ಗೆ ತೀರ್ಮಾನ ಆಗಲಿದೆ.
ಆಟೋ ಸಂಘಟನೆಗಳಲ್ಲೇ ದರ ಏರಿಕೆ ಬಗ್ಗೆ ಒಮ್ಮತವಿಲ್ಲ. ಬೈಕ್, ಟ್ಯಾಕ್ಸಿ ಬ್ಯಾನ್ ಆಗುವವರೆಗೂ ಆಟೋ ಪ್ರಯಾಣ ದರ ಏರಿಕೆ ಬೇಡ ಎನ್ನುತ್ತಿದ್ದಾರೆ. ಎಲ್ಲ ಚಾಲಕ ಸಂಘಟನೆಗಳಿಂದ ಒಂದೇ ಅಭಿಪ್ರಾಯ ನೀಡಿದ ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ.