Menu

ಅಭಿಷೇಕ್​ ರೌದ್ರ, ಕಿವೀಸ್​ ಪಡೆ ಧೂಳೀಪಟ: ನ್ಯೂಜಿಲೆಂಡ್​ ವಿರುದ್ಧ ಟಿ20 ಸರಣಿ ಇಂಡಿಯಾ ಪಾಲು!

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಕೇವಲ 4 ವಿಕೆಟ್ ಕಳೆದುಕೊಂಡು ಭರ್ಜರಿ ಜಯ ಸಾಧಿಸುವುದರೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಯುವ ಆಟಗಾರರಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಅವರ ಸಿಕ್ಸರ್‌ಗಳು ಮತ್ತು ಬೌಂಡರಿಗಳ ಸುನಾಮಿಗೆ ಎದುರಾಳಿ ಬೌಲರ್‌ಗಳು ಸಂಪೂರ್ಣವಾಗಿ ಧೂಳೀಪಟರಾದರು.

ನ್ಯೂಜಿಲೆಂಡ್ ಇನ್ನಿಂಗ್ಸ್ ವಿವರ

ವೆಲ್ಲಿಂಗ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವು, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆರಂಭದಲ್ಲೇ ಟಿಮ್ ಸೀಫರ್ಟ್ (2) ಬೇಗನೆ ಔಟಾದರೂ, ಫಿನ್ ಅಲೆನ್ (40) ಹಾಗೂ ಡೇರಿಲ್ ಮಿಚೆಲ್ 2ನೇ ವಿಕೆಟ್‌ಗೆ 86 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.
ಕೊನೆಯವರೆಗೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಡೇರಿಲ್ ಮಿಚೆಲ್ ಅಜೇಯ 89 ರನ್ ಗಳಿಸಿದರು. ಜತೆಗೆ ಗ್ಲೆನ್ ಫಿಲಿಪ್ಸ್ (17) ಮತ್ತು ಬೇವನ್ ಜೆಕಬ್ (ಅಜೇಯ 39) ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ಭಾರತದ ಪರ ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ನಿತಿಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದು ಯಶಸ್ವಿಯಾದರು.

ಅಭಿಷೇಕ್ ಶರ್ಮಾ ಅಬ್ಬರದ ಶತಕ

ಕೇವಲ 38 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ ಅವರು ಸಿಡಿಲಬ್ಬರದ 113 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಈ ಪಂದ್ಯದಲ್ಲಿ ಮತ್ತೊಬ್ಬ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 45 ರನ್ ಸಿಡಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.

ಪವರ್‌ಪ್ಲೇನಲ್ಲಿ ವಿಶ್ವದಾಖಲೆ

ನ್ಯೂಜಿಲೆಂಡ್ ನೀಡಿದ್ದ 199 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ತಂಡವು, ಆರಂಭಿಕ ಆರು ಓವರ್‌ಗಳಲ್ಲೇ (ಪವರ್‌ಪ್ಲೇ) ಬರೋಬ್ಬರಿ 118 ರನ್ ಕಲೆಹಾಕಿ ಅಚ್ಚರಿ ಮೂಡಿಸಿತು. ಮೊದಲ ವಿಕೆಟ್‌ಗೆ ಈ ಜೋಡಿ 133 ರನ್‌ಗಳ ಜೊತೆಯಾಟವಾಡಿ ಕಿವೀಸ್ ಪಾಳಯವನ್ನು ಬೆಚ್ಚಿಬೀಳಿಸಿತು ಉಳಿದಂತೆ ಸಂಜು ಸ್ಯಾಮ್ಸನ್ (18), ಶ್ರೇಯಸ್ ಅಯ್ಯರ್ (5), ತಿಲಕ್ ವರ್ಮಾ (1) ಮತ್ತು ನಮನ್ ಧೀರ್ (4) ರನ್ ಗಳಿಸಿ ಭಾರತಕ್ಕೆ ಜಯ ತಂದಿತ್ತರು.

#TeamIndia #AbhishekSharma #IndVsNZ #T20Series #UdayakalaNews #Wellington #CricketNews #VaibhavSuryavanshi #TeamIndiaWin

Related Posts

Leave a Reply

Your email address will not be published. Required fields are marked *