Menu

ಇಂದಿನ ಬಹುತೇಕ ಮುಸ್ಲಿಮರು ಮಾಜಿ ದಲಿತರು ಎಂದ ಸಚಿವ ರಿಜ್ವಾನ್ ಅರ್ಷದ್

ಉದಯಕಾಲ ನ್ಯೂಸ್, ಬೆಂಗಳೂರು: ಮುಸ್ಲಿಂ ಸಮುದಾಯ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ಬೇರೆ ಬೇರೆಯಲ್ಲ. ಇಂದಿನ ಬಹುತೇಕ ಮುಸ್ಲಿಮರು ಹಿಂದಿನ ಎಸ್‌ಸಿ, ಎಸ್‌ಟಿ ಸಮುದಾಯದವರೇ ಆಗಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಗಾಢ ಸಾಮಾಜಿಕ ಬಾಂಧವ್ಯ ಹಾಗೂ ಸಮಾನ ಸವಾಲುಗಳ ಕುರಿತು ಮಾತನಾಡಿದರು.
ದಲಿತ ಕೇರಿಗಳು ಎಲ್ಲೆಲ್ಲಿ ಇರುತ್ತವೆಯೋ, ಮುಸ್ಲಿಮರು ಕೂಡ ಅದೇ ಪರಿಸರದಲ್ಲಿ ವಾಸಿಸುತ್ತಾರೆ. ನಮ್ಮ ಪೂರ್ವಿಕರು ಮತಾಂತರಗೊಂಡ ಕಾರಣಗಳು ಎಲ್ಲರಿಗೂ ತಿಳಿದಿದೆ. ಧರ್ಮ ಬದಲಾದ ಮಾತ್ರಕ್ಕೆ ಮೈಯಲ್ಲಿ ಹರಿಯುವ ರಕ್ತ ಬದಲಾಗುವುದಿಲ್ಲ. ಹೀಗಾಗಿ ನಾವೆಲ್ಲರೂ ಒಂದೇ ಸಮುದಾಯದವರು, ಮುಸ್ಲಿಮರೆಲ್ಲರೂ ಮಾಜಿ ದಲಿತರು ಎಂದು ಅವರು ಪ್ರತಿಪಾದಿಸಿದರು.
ದಲಿತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಕಷ್ಟ-ಕಾರ್ಪಣ್ಯಗಳನ್ನೇ ಮುಸ್ಲಿಂ ಸಮುದಾಯವೂ ಎದುರಿಸುತ್ತಿದೆ ಎಂದರು.ದಲಿತ ಸಮುದಾಯದ ಪೂಜ್ಯ ಸ್ವಾಮೀಜಿಗಳು ಮುಸ್ಲಿಮರ ಪರವಾಗಿಯೂ ನಿಲ್ಲಬೇಕು ಹಾಗೂ ನಮ್ಮ ಕಷ್ಟಗಳಿಗೂ ಧ್ವನಿಯಾಗಬೇಕು ಎಂದು ಸಚಿವರು ವೇದಿಕೆಯಲ್ಲಿ ಕೋರಿದರು.
#RizwanArshad #ValmikiJayanti #DalitMuslimUnity #KarnatakaPolitics #Udayakala #SCST #MuslimCommunity #BengaluruNews #KarnatakaNews

Related Posts

Leave a Reply

Your email address will not be published. Required fields are marked *