Saturday, October 24, 2026
Menu

ಮಂತ್ರಾಲಯದಲ್ಲಿ ಹುಂಡಿ ಹಣ ಎಣಿಕೆ: 22 ದಿನಗಳಲ್ಲಿ 3.46 ಕೋಟಿ ರೂ.ಸಂಗ್ರಹ!

ಉದಯಕಾಲ ನ್ಯೂಸ್, ರಾಯಚೂರು:ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುರು ರಾಘವೇಂದ್ರ ಸ್ವಾಮಿಗಳ ದೇವಸ್ಥಾನ ಮಂತ್ರಾಲಯವಾಗಿದೆ. ಈ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕೇವಲ 22 ದಿನಗಳ ಅವಧಿಯಲ್ಲಿ ಬರೋಬ್ಬರಿ 3,46,53,864 ರೂಪಾಯಿ ಕಾಣಿಕೆ ರೂಪದಲ್ಲಿ ಹರಿದುಬಂದಿದೆ. ಪ್ರತಿನಿತ್ಯದಂತೆ ಈ ಬಾರಿಯೂ ಸಹ ಭಕ್ತರ ದೊಡ್ಡ ದಂಡು ಮಠಕ್ಕೆ ಭೇಟಿ ನೀಡಿ ರಾಯರಿಗೆ ತಮ್ಮ ಕಾಣಿಕೆಯನ್ನು ಸಮರ್ಪಿಸಿದ್ದಾರೆ.

ಹುಂಡಿ ಸಂಗ್ರಹದ ವಿವರ

ಮಂತ್ರಾಲಯದ ರಾಯರ ಮಠದಲ್ಲಿ ನಡೆದ ಅಕ್ಟೋಬರ್ ತಿಂಗಳಿನ 22 ದಿನಗಳ ಹುಂಡಿ ಎಣಿಕೆಯಲ್ಲಿ ಒಟ್ಟು ₹3,46,53,864 ಸಂಗ್ರಹವಾಗಿದ್ದು, ಇದರ ವಿವರ ಈ ಕೆಳಗಿನಂತಿದೆ.

ಕರೆನ್ಸಿ ನೋಟುಗಳು ₹3,36,41,364
ನಾಣ್ಯಗಳು:₹10,12,500
ಚಿನ್ನದ ಕಾಣಿಕೆ: 42 ಗ್ರಾಂ
ಬೆಳ್ಳಿಯ ಕಾಣಿಕೆ: 645 ಗ್ರಾಂ

ಬಿಗಿ ಭದ್ರತೆಯಲ್ಲಿ ಎಣಿಕೆ ಕಾರ್ಯ

ಈಗಾಗಲೇ ಹಲವಾರು ಮಠಗಳಲ್ಲಿ ಹುಂಡಿ ಹಣ ಕಳುವಾಗಿರುವ ಹಾಗೂ ಕಳ್ಳತನಕ್ಕೆ ಪ್ರಯತ್ನಿಸುವ ಘಟನೆಗಳು ನಡೆದಿವೆ. ಈ ನಿಟ್ಟಿನಲ್ಲಿ ಮಠದ ಆವರಣದಲ್ಲಿ ಅತ್ಯಂತ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಹುಂಡಿ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಪವಿತ್ರ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರ ಸೇವಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದರೊಂದಿಗೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ಶ್ರೀಮಠದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಹುಂಡಿ ಎಣಿಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದರು.
#Mantralaya #RaghavendraSwamy #MantralayaHundi #RaichurNews #UdayakalaNews #Rayaru #TempleDonations #KarnatakaNews #SriRaghavendraSwamyMatha

Related Posts

Leave a Reply

Your email address will not be published. Required fields are marked *