Menu

ಸಿಜೆಪಿ ಪ್ರತಿಭಟನೆ ಕಾವು, ದೆಹಲಿಯಲ್ಲಿ ವಿಭಿನ್ನ ದಸರಾ ಆಚರಣೆ: ರಾವಣನ ಜೊತೆ 30 ಅಡಿ ʻಜಿರಳೆʼ ದಹನಕ್ಕೆ ಸಿದ್ಧತೆ!

ಉದಯಕಾಲ ನ್ಯೂಸ್, ನವದೆಹಲಿ: ಬಿಜೆಪಿ ಕೇಂದ್ರ ಸರ್ಕಾರ ಅಕ್ಷರಸಃ ಸಿಜೆಪಿಗೆ ಪ್ರತಿಭಟನೆಗಳಿಗೆ ಹೆದರಿ ಹೈರಾಣಾಗಿದೆ. ಸಾಮಾನ್ಯವಾಗಿ ದಸರಾ ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ದಶಮುಖ ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳನ್ನು ದಹನ ಮಾಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಆದರೆ ಈ ಬಾರಿಯ ದಸರಾ ಹಬ್ಬದ ಆಚರಣೆಗೆ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ತನ್ನ ದುರಾಡಳಿತ ಸಮರ್ಥನೆಗೆ ವಿನೂತನ ಪ್ರಯೋಗಕ್ಕೆ ಸಜ್ಜಾಗಿದೆ.ಪಿತಾಂಪುರದ ‘ಶ್ರೀ ಕೇಶವ್ ರಾಮಲೀಲಾ ಸಮಿತಿ’ಯು ರಾವಣನ ಪ್ರತಿಕೃತಿಯೊಂದಿಗೆ ಅಶುಚಿತ್ವದ ಸಂಕೇತವಾಗಿ 30 ಅಡಿ ಎತ್ತರದ ʻಜಿರಳೆʼಯ (Cockroach) ಪ್ರತಿಕೃತಿಯನ್ನು ದಹನ ಮಾಡಲು ಮುಂದಾಗಿರುವುದು ಅತ್ಯಂತ ಬಾಲಿಶ ಸಂಗತಿ

‘ಸ್ವಚ್ಛ ದೆಹಲಿ’ ಅಭಿಯಾನವೆಂಬ ಕಪಟ ನಾಟಕ!
ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ’ ಹಾಗೂ ‘ಸ್ವಚ್ಛ ದೆಹಲಿ’ ಅಭಿಯಾನಗಳಿಗೆ ಬೆಂಬಲವಾಗಿ ಈ ವಿಶೇಷ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಅಶೋಕ್ ಗೋಯೆಲ್, “ಇದು ಯಾವುದೇ ರಾಜಕೀಯ ಪ್ರೇರಿತ ನಿರ್ಧಾರವಲ್ಲ. ಸಮಾಜದಲ್ಲಿರುವ ಕೊಳಕು, ರೋಗರುಜಿನಗಳು ಮತ್ತು ನೈರ್ಮಲ್ಯದ ಕೊರತೆಗೆ ಜಿರಳೆ ಸಂಕೇತವಾಗಿದೆ. ರಾವಣನ ದುಷ್ಟ ಶಕ್ತಿಗಳ ಸೈನ್ಯದಲ್ಲಿ ಜಿರಳೆಯನ್ನು ಸಂಕೇತವಾಗಿಟ್ಟುಕೊಂಡು ಅದನ್ನು ಸುಡುವುದರಿಂದ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮತ್ತು ಸ್ವಚ್ಛತೆಯ ಸಂದೇಶವನ್ನು ಸಮಾಜಕ್ಕೆ ಬಲವಾಗಿ ತಲುಪಿಸಬಹುದಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

‘ಕಾಕ್ರೋಚ್‌ ಜನತಾ ಪಾರ್ಟಿ’ (CJP) ಪ್ರತಿಭಟನೆಯ ಸದ್ದು

ಮತ್ತೊಂದೆಡೆ, ದೆಹಲಿಯಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಕೂಡ ತೀವ್ರ ಕುತೂಹಲ ಮೂಡಿಸಿವೆ. ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ನೀಟ್‌ ಹಗರಣದಲ್ಲಿ (NEET Scam) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರ ರಾಜೀನಾಮೆಯ ಬೆನ್ನಲ್ಲೇ, ಇದೀಗ ಎಸ್‌ಐಆರ್ (SIR) ಪ್ರಕ್ರಿಯೆಗಳಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಧ್ವನಿ ಎತ್ತಿರುವ ‘ಕಾಕ್ರೋಚ್‌ ಜನತಾ ಪಾರ್ಟಿ’ (CJP)ಯು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಭಾರಿ ಪ್ರತಿಭಟನೆಗಳನ್ನು ನಡೆಸುತ್ತಿದೆ.

ಈ ರಾಜಕೀಯ ಘಟನೆಗಳ ಹಲ್‌ಚಲ್ ನಡುವೆಯೇ ಮೋದಿ ಸರ್ಕಾರದ ನಿರ್ದೇಶನದಂತೆ ರಾಮಲೀಲಾ ಸಮಿತಿಯು ʻಜಿರಳೆ ದಹನʼದ ನಿರ್ಧಾರವನ್ನು ಪ್ರಕಟಿಸಿರುವುದು ರಾಷ್ಟ್ರ ರಾಜಧಾನಿಯ ರಾಜಕೀಯದಲ್ಲಿ ನಡುಕ ಉಂಟಾಗಿರುವುದಕ್ಕೆ ಸ್ಪಷ್ಟ ನಿದರ್ಶನವೆಂಬಂತಿದೆ. ದಸರಾ ಆಚರಣೆಯ ಈ ವಿಶಿಷ್ಟ ಪ್ರಯೋಗವು ದೆಹಲಿ ಜನತೆಯನ್ನು ಆಕರ್ಷಿಸುವುದರ ಜೊತೆಗೆ ದೇಶಾದ್ಯಂತ ರಾಜಕೀಯ ಅಸ್ಥಿರತೆಯ ಲಕ್ಷಣಗಳನ್ನು ಸ್ಪಷ್ಟಪಡಿಸಿದೆ.
#DelhiRamlila #CockroachBurning #SwachhDelhi #CJPProtest #UdayakalaNews #DelhiNews #Dussehra2026 #AshokGoyal #PoliticalNewsKannada #NeetScam

Related Posts

Leave a Reply

Your email address will not be published. Required fields are marked *