ಉದಯಕಾಲ ನ್ಯೂಸ್, ನವದೆಹಲಿ: ಎಸ್‌ಐಆರ್ ಆಗಿರುವ ಅಕ್ರಮ ಲೋಪದೋಷಗಳಿಗಾಗಿ ನೇರ ಹೊಣೆಯಾಗಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆದರಿದಂತೆ ಕಾಣುವ ಕೇಂದ್ರ ಸರ್ಕಾರ ದೆಹಲಿಯೆಲ್ಲೆಡೆ ಪೊಲೀಸರ ಸರ್ಪಗಾವಲನ್ನು ಏರ್ಪಡಿಸಿದೆ. ಪ್ರತಿಭಟನಾಕಾರರ ಸಂಚಾರವನ್ನು ನಿಯಂತ್ರಿಸಲು ಅವರ ಹೋರಾಟವನ್ನು ಹತ್ತಿಕ್ಕಲು ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ದೆಹಲಿಯಲ್ಲಿ ಮೆಟ್ರೋ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.ಇದರಿಂದ ನಾಗರಿಕರಿಗೆ ತೊಂದರೆ ಉಂಟಾಗುವ ಸಂಭವವಿದೆ. ಅಷ್ಟೇ ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬರೋಬ್ಬರಿ 23,000 ಪೊಲೀಸರನ್ನು ನಿಯೋಜಿಸಲಾಗಿದ್ದು ಇದು ಪ್ರಜಾಪ್ರಭುತ್ವದ ಹಕ್ಕನ್ನು ಹತ್ತಿಕ್ಕಲು ಜರುಗಿಸಿರುವ ಕ್ರಮ ಎಂದೇ ಬಿಂಬಿತವಾಗುತ್ತಿದೆ.
ರೈಲು ಸಂಚಾರ ವ್ಯತ್ಯಯ
ನವದೆಹಲಿ ಹಾಗೂ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಬರುವ ರೈಲುಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಅಕ್ಟೋಬರ್ 10ರ ಮುಂಜಾನೆ 4ರಿಂದ ಮಧ್ಯಾಹ್ನ 2ರವರೆಗೆ ನಿಗದಿಯಾಗಿದ್ದ ಹಲವು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಅಕ್ಟೋಬರ್ 9ರ ಮಧ್ಯಾಹ್ನ 2 ಗಂಟೆಯ ಬಳಿಕ ಮೂಲ ನಿಲ್ದಾಣದಿಂದ ಹೊರಟು, ಮರುದಿನ ನಿಗದಿತ ಅವಧಿಯಲ್ಲಿ ದೆಹಲಿ ತಲುಪಬೇಕಿದ್ದ ಪ್ರಮುಖ ರೈಲುಗಳನ್ನು ಅವುಗಳ ಆರಂಭಿಕ (ಮೂಲ) ನಿಲ್ದಾಣದಿಂದಲೇ ರದ್ದುಗೊಳಿಸಲಾಗಿದೆ. ಇದರಿಂದಾಗಿ ರೈಲು ನಿಲ್ದಾಣಗಳ ಸುತ್ತಮುತ್ತ ಭಾರಿ ವಾಹನ ದಟ್ಟಣೆ ಹಾಗೂ ಪ್ರಯಾಣಿಕರಿಗೆ ಪರದಾಟ ಉಂಟಾಗುವ ಆತಂಕ ಎದುರಾಗಿದೆ.
ಬಿಗಿ ಭದ್ರತೆ ಮತ್ತು ಸಂಚಾರ ಕಡಿತ
ಪ್ರತಿಭಟನೆಯ ಕಾವು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತೀವ್ರತೆಯನ್ನು ಅರಿತ ಕೇಂದ್ರ ಸರ್ಕಾರ ದೆಹಲಿಯ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧ ಹೇರಿದ್ದು, ದೆಹಲಿ ಗಡಿ ಹಾಗೂ ಪ್ರಮುಖ ವಲಯಗಳಲ್ಲಿ ಬಿಗಿ ಪೊಲೀಸ್ ಕಣ್ಗಾವಲು ಇರಿಸಿರುವುದು ಜನರ ಹಾಗೂ ವಿದ್ಯಾರ್ಥಿಗಳ ಹಕ್ಕನ್ನು ದಮನಿಸಲು ಮಾಡಿರುವ ಹುನ್ನಾರವೇ ಆಗಿದೆ.
#CJPprotest #DelhiPolice #ChiefElectionCommissioner #GyaneshKumar #DelhiMetro #TrainCancelled #UdayakalaNews #NationalNews #DelhiProtest #CockroachJanataParty


