ಉದಯಕಾಲ ನ್ಯೂಸ್, ಮೈಸೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲಕ್ಕೆ ಈಗ ಬಹುತೇಕ ಉತ್ತರ ಸಿಕ್ಕಿದೆ. ಅಂಬಾರಿ ಹೊರುವ ಆನೆಗಳ ರೇಸ್ನಲ್ಲಿದ್ದ ಮಹೇಂದ್ರನಿಗೆ ತಾಲೀಮಿನಲ್ಲಿ ಹಿನ್ನಡೆಯಾಗಿದ್ದು, ದೈತ್ಯಗಾತ್ರದ ಧನಂಜಯನ ಆಯ್ಕೆ ಬಹುತೇಕ ಖಚಿತಗೊಂಡಿದೆ.
ಅಭಿಮನ್ಯು ನಂತರ ಧನಂಜಯನ ಸಾರಥ್ಯ
ದೀರ್ಘಕಾಲ ಅಂಬಾರಿ ಹೊತ್ತಿದ್ದ ದಸರಾ ಗಜಪಡೆಯ ನಾಯಕ ಅಭಿಮನ್ಯು ಅವರ ನಿವೃತ್ತಿಯ ಬಳಿಕ, ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬ ತೀವ್ರ ಚರ್ಚೆ ನಡೆದಿತ್ತು. ಸದ್ಯ ಧನಂಜಯನ ಹೆಸರು ಮುಂಚೂಣಿಗೆ ಬಂದಿದ್ದು, ದಸರಾ ಗಜಪಡೆಯ ಹೊಸ ಕ್ಯಾಪ್ಟನ್ ಆಗುವ ನಿರೀಕ್ಷೆ ಗಣನೀಯವಾಗಿ ಹೆಚ್ಚಾಗಿದೆ.
ಚಿನ್ನದ ಅಂಬಾರಿ ಹೊರುವ ಆನೆಗಳ ಪೈಕಿ ಧನಂಜಯ ಅತ್ಯಂತ ದೈತ್ಯಗಾತ್ರದ ಆನೆಯಾಗಿದೆ. ಇತ್ತೀಚಿನ ತೂಕ ಪರೀಕ್ಷೆಯಲ್ಲಿ ಧನಂಜಯ ಬರೋಬ್ಬರಿ 5,530 ಕೆ.ಜಿ. ಅಂದರೆ ಸುಮಾರು 5.5 ಟನ್ ತೂಕವನ್ನು ಹೊಂದಿದ್ದಾನೆ.
ಆಯ್ಕೆಗೆ ಮಾನದಂಡವೇನು
ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸುವಾಗ ಅದರ ದೈಹಿಕ ಸಾಮರ್ಥ್ಯ, ತಾಲೀಮಿನ ಪ್ರಗತಿ ಮತ್ತು ರಾಜಮಾರ್ಗದಲ್ಲಿನ ನಡಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಈ ಎಲ್ಲ ಪ್ರಮುಖ ಅಂಶಗಳ ಹಿನ್ನೆಲೆಯಲ್ಲಿ ಧನಂಜಯನ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ದೊರೆತಿದೆ.
ಧನಂಜಯನ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ, ಅರಣ್ಯ ಇಲಾಖೆಯ ಅಧಿಕೃತ ಘೋಷಣೆಯ ಬಳಿಕವಷ್ಟೇ ಈ ಕುರಿತು ಅಂತಿಮ ಸ್ಪಷ್ಟತೆ ಸಿಗಲಿದೆ.
#MysuruDasara2026 #DhananjayaElephant #GoldenAmbari #MysoreDasara #JambooSavari #UdayakalaNews #ElephantMahendra #KarnatakaNews #MysuruDasaraElephant


