Friday, September 25, 2026
Menu

ಎರಡು ತೆಂಗಿನ ಗಿಡ ಕಡಿದ ಅಳಿಯನ ಕೊಲೆಗೈದ ಮಾವ

ಅಳಿಯ ಎರಡು ತೆಂಗಿನ ಗಿಡಗಳನ್ನು ಕಡಿದಿದ್ದಕ್ಕೆ ಸಿಟ್ಟಿಗೆದ್ದ ಮಾವ ಅದೇ ಮಚ್ಚಿನಲ್ಲಿ ಕೊಲೆ ಮಾಡಿದ ಘಟನೆ ಕೂರು ತಾಲೂಕಿನ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ. ದೇವರಾಜ ನಾಯ್ಕ್‌ (೩೫) ಕೊಲೆಯಾದವರು, ಮಾವ ರಾಜಾನಾಯ್ಕ್‌ ಕೊಲೆ ಮಾಡಿದ ಆರೋಪಿ.

ಇವರಿಬ್ಬರ ನಡುವೆ ಪ್ರತಿ ದಿನ ಜಗಳ ನಡೆಯುತ್ತಿತ್ತು, ಹೀಗೆ ಜಗಳವಾಡಿ ಮಾವನ ಹೊಲದಲ್ಲಿದ್ದ ಎರಡು ತೆಂಗಿನ ಗಿಡಗಳನ್ನು ದೇವರಾಜ್‌ ಕತ್ತರಿಸಿ ಹಾಕಿದ್ದ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ರಾಜಾನಾಯ್ಕ್‌, ಮಚ್ಚಿನಿಂದ ಕೊಚ್ಚಿ ದೇವರಾಜ್‌ನನ್ನು ಕೊಲೆ ಮಾಡಿದ್ದಾನೆ. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜಾನಾಯ್ಕ್‌ನ ಮಗಳನ್ನೇ ದೇವರಾಜ್ ಮದುವೆಯಾಗಿದ್ದ. ಜಗಳವಾಡಿ ಪತ್ನಿಯು ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ.

ಬೆಂಗಳೂರಿನಲ್ಲಿ ಪೊಲೀಸ್‌ ಮನೆಯಲ್ಲೇ ಕಳ್ಳತನ

ಪೊಲೀಸ್​​ ಸಿಬ್ಬಂದಿಯ ಮನೆಗೆ ನುಗ್ಗಿ ಕಳ್ಳರು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಹುಣಸಮಾರನಹಳ್ಳಿ ಸಮೀಪದ ಸುಗ್ಗಟ್ಟ ಗ್ರಾಮದಲ್ಲಿ ನಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ರಂಗಪ್ಪ ಬಂಡಿವಡ್ಡರ ಎಂಬವರ ಮನೆಯ ಕಪಾಟಿನಲ್ಲಿದ್ದ ಚಿನ್ನ ಮತ್ತು ಹಣವನ್ನು ಕದ್ದೊಯ್ದಿದ್ದಾರೆ.

ಅವರು ದೂರು ದಾಖಲಿಸಿದ್ದು, ಕಳ್ಳರ ಪತ್ತೆಗೆ ಪೊಲೀಸ್‌ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪೊಲೀಸರಿಗೆ ಅವರು ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 18ರಂದು ಬೆಳಗ್ಗೆ ಮನೆ ಲಾಕ್ ಮಾಡಿ ರಂಗಪ್ಪ ಕರ್ತವ್ಯಕ್ಕೆ ತೆರಳಿದ್ದರು. ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಆರೈಕೆಗಾಗಿ ಒಂದು ತಿಂಗಳಿನಿಂದ ತವರು ಮನೆಯಲ್ಲಿದ್ದರು. ರಾತ್ರಿ ರಂಗಪ್ಪ ಮನೆಗೆ ಮರಳಿದಾಗ ಮುಖ್ಯ ಬಾಗಿಲಿನ ಬೀಗ ಒಡೆದಿರುವುದು ಕಂಡು ಬಂದಿದೆ. ಒಳಗೆ ಹೋಗಿ ನೋಡಿದಾಗ ಕಪಾಟು ತೆರೆದಿದ್ದು, ವಸ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿದ್ದವು. 35 ಗ್ರಾಂ ಚಿನ್ನಾಭರಣ ಹಾಗೂ 6,000 ನಗದು ಕದ್ದೊಯ್ದಿರುವುದು ಗೊತ್ತಾಗಿದೆ.

Related Posts

Leave a Reply

Your email address will not be published. Required fields are marked *