Friday, September 25, 2026
Menu

ವಿಶ್ವಸಂಸ್ಥೆ ಸಭೆಯಲ್ಲಿ ನೆತನ್ಯಾಹು ಭಾಷಣ ತಿರಸ್ಕರಿಸಿ ಹೊರನಡೆದ ಹಲವು ದೇಶಗಳ ಪ್ರತಿನಿಧಿಗಳು

ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವುದಕ್ಕೆ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಬೆಂಜಮಿನ್‌ ವೇದಿಕೆ ಕಡೆ ಬರುತ್ತಿದ್ದಂತೆಯೇ ಹಲವು ದೇಶಗಳ ರಾಜತಾಂತ್ರಿಕ ಪ್ರತಿನಿಧಿಗಳು ಹೊರ ನಡೆದು ಪ್ರತಿಭಟನೆ ತೋರಿದ್ದಾರೆ.

ಇಸ್ರೇಲ್‌ ಗಾಜಾ ಮತ್ತು ಲೆಬನಾನ್‌ನಲ್ಲಿ ನಡೆಸುತ್ತಿರುವ ಭೀಕರ ದಾಳಿ , ನಾಗರಿಕರ ಹತ್ಯೆ, ಹಿಂಸಾಚಾರವನ್ನು ಖಂಡಿಸಿ ಹಲವು ದೇಶಗಳ ಪ್ರತಿನಿಧಿಗಳು ಹೀಗೆ ಪ್ರತಿಭಟನೆ ದಾಖಲಿಸಿದರು.  ರಾಜತಾಂತ್ರಿಕರು ಸಭೆಯಿಂದ ಹೊರಹೋಗುತ್ತಿದ್ದಂತೆ ಸಭಾಂಗಣದಲ್ಲಿ ಪರ-ವಿರೋಧದ ಘೋಷಣೆಗಳು ಕೇಳಿ ಬಂದವು, ಗದ್ದಲವೂ ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಅಧ್ಯಕ್ಷರು ಶಿಸ್ತು ಕಾಪಾಡುವಂತೆ ಮನವಿ ಮಾಡಿದರು. ಇಸ್ರೇಲ್ ಪ್ರಧಾನಿ ನೆತನ್ಯಾಹು ಈ ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇಸ್ರೇಲ್ ಮಾಡುತ್ತಿರುವುದು ಜನಾಂಗೀಯ ಹತ್ಯೆಯಲ್ಲ, ಇರಾನ್ ಮತ್ತು ಅದರ ಬೆಂಬಲಿತ ಉಗ್ರಗಾಮಿ ಸಂಘಟನೆಗಳ ವಿರುದ್ಧದ ಆತ್ಮರಕ್ಷಣೆ. ನಾವು ನಾಗರಿಕರನ್ನು ರಕ್ಷಿಸಲು ಅಸಂಖ್ಯಾತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ದಾಳಿಯನ್ನು ನೆತನ್ಯಾಹು ಸಮರ್ಥಿಸಿಕೊಂಡರು.

ಕಳೆದ ವರ್ಷವೂ (2025) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆತನ್ಯಾಹು ಭಾಷಣ ಮಾಡಲು ಬಂದಾಗ 50ಕ್ಕೂ ಹೆಚ್ಚು ದೇಶಗಳ 100ಕ್ಕೂ ಅಧಿಕ ಪ್ರತಿನಿಧಿಗಳು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದರು ಎಂಬುದು ಗಮನಾರ್ಹ. ಇಸ್ರೇಲ್‌ನ ಸೇನಾದಾಳಿ ನೀತಿಯ ವಿರುದ್ಧ ಜಾಗತಿಕ ಮಟ್ಟದಲ್ಲಿ ತೀವ್ರ ಅಸಮಾಧಾನ ಇರುವುದನ್ನು ಈ ಘಟನೆ ತೋರಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಅಧಿವೇಶನದ ವೇಳೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮುಖಭಂಗವಾಗಿದೆ.  ಜಾಗತಿಕ ಭಯೋತ್ಪಾದಕ ಹಾಗೂ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಪಾಕಿಸ್ತಾನದ ಭಯೋತ್ಪಾದನೆ ಪೋಷಣೆಯ ಕುರಿತು ಭಾರತೀಯ ವರದಿಗಾರರು ಕೇಳಿದ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವರು ಮೌನವಾಗಿ ಜಾಗ ಖಾಲಿ ಮಾಡಿದ್ದಾರೆ.

ವಿಶ್ವಸಂಸ್ಥೆಯ ಕೇಂದ್ರ ಕಚೇರಿಗೆ ಶೆಹಬಾಜ್ ಷರೀಫ್ ಪ್ರವೇಶಿಸುತ್ತಿದ್ದ ವೇಳೆ ಪತ್ರಕರ್ತರು, ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಯಾವಾಗ ನಿಲ್ಲಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪಾಕಿಸ್ತಾನ ಪ್ರಧಾನಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Related Posts

Leave a Reply

Your email address will not be published. Required fields are marked *