Tuesday, September 22, 2026
Menu

ಹುಬ್ಬಳ್ಳಿ–ಗದಗ ಬೈಪಾಸ್‌ನಲ್ಲಿ ಅಪಘಾತಕ್ಕೆ ದಂಪತಿ ಬಲಿ

ಹುಬ್ಬಳ್ಳಿ-ಗದಗ ಬೈಪಾಸ್‌ ರಸ್ತೆಯಲ್ಲಿ ತಡರಾತ್ರಿ ಕೊರಿಯರ್‌ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಯರಾಜನಗರ ನಿವಾಸಿಗಳಾದ ರಜನಿ ತಿಕಲಾ ಹಾಗೂ ಸುಕುಮಾರ ತಿಕಲಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ರಜನಿ ತಿಕಲಾ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿಕೊಂಡು ರಜನಿಯನ್ನು ಪತಿ ಸುಕುಮಾರ ಬೈಕ್‌ನಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಅಪಘಾತ ನಡೆದಿದೆ.

ಬೈಕ್‌ಗೆ ಎದುರಿನಿಂದ ಬಂದ ಕೊರಿಯರ್‌ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ದಂಪತಿ ಸ್ಥಳದಲ್ಲೇ ಅಸು ನೀಗಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪೂರ್ವ ಸಂಚಾರಿ ಠಾಣೆ ಪೊಲೀಸರು ಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊರಿಯರ್ ವಾಹನ ಹಾಗೂ ಚಾಲಕನ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.

ಕಮಲಾಪುರದಲ್ಲಿ ಸಿಡಿಲಿಗೆ ಇಬ್ಬರ ಸಾವು

ಕಲಬುರಗಿಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದ ಜಮೀನಿನಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.  ಲಕ್ಷ್ಮೀ ಗುತ್ತೇದಾರ್ (45) ಮತ್ತು ಕೂಲಿ ಮಹಿಳೆ ಸೈಜಾದ್ ಬಿ ಮೃತಪಟ್ಟವರು.

ಇವರು ಜಮೀನಿನಲ್ಲಿ ಕೆಲಸ ಮಾಡುವಾಗ ಜೋರಾಗಿ ಮಳೆ ಶುರುವಾಗಿದೆ. ಈ ವೇಳೆ ಇಬ್ಬರೂ ಮರದಡಿ ಕುಳಿತು ಊಟ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಸ್ಥಳದಲ್ಲೇ ಇಬ್ಬರು ಅಸು ನೀಗಿದ್ದಾರೆ. ಸ್ಥಳಕ್ಕೆ ಕಮಲಾಪುರ ತಹಸೀಲ್ದಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *