Wednesday, September 02, 2026
Menu

ಸಾವಿನಲ್ಲಿ ಅಂತ್ಯ ಕಂಡ ಅಮ್ಮ-ಮಗಳ ಜಗಳ

ಕೊಡಗಿನ ಮಡಿಕೇರಿ ತಾಲೂಕಿನ ತಲಕಾವೇರಿ ಸಮೀಪ ಕೆಂಪರಾಜಮೊಟ್ಟೆ ಕಾಲೊನಿಯಲ್ಲಿ ಅಮ್ಮ ಮತ್ತು ಮಗಳ ಜಗಳವು ಇಬ್ಬರ ಸಾವಿನಲ್ಲಿ ಕೊನೆಯಾಗಿದೆ. ೧೪ ವರ್ಷದ ಪ್ರಿಯಾಂಕ ಮತ್ತು ೪೫ ವರ್ಷದ ತಾಯಿ ಪ್ರೇಮಾ ಮೃತಪಟ್ಟವರು.

ಕರಿಕೆಯಲ್ಲಿರುವ ಆಶ್ರಮ ಶಾಲೆಯಲ್ಲಿ ಓದುತ್ತಿದ್ದ ಪ್ರಿಯಾಂಕ ಮನೆಗೆ ತಡವಾಗಿ ಬಂದಿದ್ದಕ್ಕೆ ತಾಯಿ ಪ್ರೇಮಾ ಗದರಿಸಿದ್ದಾರೆ, ಇದಕ್ಕೆ ನೊಂದುಕೊಂಡ ಆಕೆ ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓಡಿದ್ದಾಳೆ.

ಆಕೆಯನ್ನು ತಡೆಯಲು ತಾಯಿ ಪ್ರೇಮಾ ಹಿಂದೆ ಓಡಿದ್ದಾರೆ. ಅವರು ಕೆರೆಯ ಹತ್ತಿರ ತಲುಪುವಷ್ಟರಲ್ಲಿ ಮಗಳು ಕೆರೆಗೆ ಹಾರಿದ್ದಾಳೆ. ಮಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಈಜು ಬಾರದಿದ್ದರೂ ಪ್ರೇಮಾ ಕೆರೆಗೆ ಹಾರಿದ್ದಾರೆ. ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳೀಯರು ರಕ್ಷಿಸಲು ಪ್ರಯತ್ನಿಸಿದರೂ ಕೆರೆ ಆಳವಿದ್ದ ಕಾರಣ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಠಾಣೆ ಪೊಲೀಸರು ಕೆರೆಯಿಂದ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related Posts

Leave a Reply

Your email address will not be published. Required fields are marked *